ಹಾಕಿ ಅಂಪೈರ್ ಕೊರೋನಾಗೆ ಬಲಿ, ಪಿಂಕ್ ವ್ಯಾಟ್ಸ್‌ಆ್ಯಪ್ ಎಚ್ಚರ ಇರಲಿ; ಏ.18ರ ಟಾಪ್ 10 ಸುದ್ದಿ!

Published : Apr 18, 2021, 05:08 PM ISTUpdated : Apr 18, 2021, 05:16 PM IST
ಹಾಕಿ ಅಂಪೈರ್ ಕೊರೋನಾಗೆ ಬಲಿ, ಪಿಂಕ್ ವ್ಯಾಟ್ಸ್‌ಆ್ಯಪ್ ಎಚ್ಚರ ಇರಲಿ; ಏ.18ರ ಟಾಪ್ 10 ಸುದ್ದಿ!

ಸಾರಾಂಶ

ಭಾರತದ ಮೊದಲ ಮಹಿಳಾ ಹಾಕಿ ಅಂಪೈರ್, ಕೊಡಗಿನ ಪುಚ್ಚಿಮಂಡ ಅನುಪಮಾ ಕೊರೋನಾಗೆ ಬಲಿಯಾಗಿದ್ದಾರೆ. ವ್ಯಾಪಕವಾಗಿ ವೈರಸ್ ಹರಡುತ್ತಿರುವ ಕಾರಣ ರಾಹುಲ್ ಗಾಂಧಿ ತಮ್ಮ ಚುನಾವಣಾ ರ್ಯಾಲಿ ರದ್ದುಗೊಳಿಸಿದ್ದಾರೆ. ವಾಟ್ಸಪ್‌ ಗ್ರಾಹಕರ ಮಾಹಿತಿಗೆ ಕನ್ನ ಹಾಕಲು ಖದೀಮರು ಹೊಸ ಸಂಚು ಮಾಡಿದ್ದಾರೆ. ರಶ್ಮಿಕಾ ಮೂಡ್ ಹೇಗೆಲ್ಲಾ ಚೇಂಜ್ ಆಗುತ್ತೆ ಗೊತ್ತಾ, ಬೆಂಗಳೂರಿಗೆ ಪ್ರತ್ಯೇಕ ರೂಲ್ಸ್ ಸೇರಿದಂತೆ ಏಪ್ರಿಲ್ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ

ತನ್ನ ಮಾಸ್ಕ್ ನಾಯಿಗೆ ಹಾಕಿದ ನಿರ್ಗತಿಕ; ಕಾರಣ ಕೇಳಿದರೆ ಸಲ್ಯೂಟ್ ಹೊಡೆಯೋದು ಖಚಿತ!...

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಕಠಿಣ ನಿಯಮಗಳು ಜಾರಿಗಾಯಾಗಿದೆ. ಇದರಲ್ಲಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ ಸೇರಿದಂತೆ ಹಲವು ನಿಯಮಗಳು ಜಾರಿಯಾಗಿದೆ. ಇಲ್ಲೋರ್ವ ನಿರ್ಗತಿಕ ತನ್ನ ಬಳಿ ಇದ್ದ ಒಂದೇ ಒಂದು ಮಾಸ್ಕನ್ನು ತನ್ನನ ಮುದ್ದಿನ ನಾಯಿಗೆ ಹಾಕಿದ್ದಾನೆ. ದಾರಿಯ ಹೋಗುತ್ತಿದ್ದ ಇವನ ನಿಲ್ಲಿಸಿ ಇದಕ್ಕೆ ಕಾರಣ ಕೇಳಿದಾಗ, ಮನಸ್ಸುಗೆಲ್ಲೋ ಉತ್ತರ ನೀಡಿದ್ದಾನೆ.

ಲಸಿಕೆ ನೀಡುವಿಕೆಯಲ್ಲಿ ಭಾರತದ ಸಾಧನೆ; 12 ಕೋಟಿ ವ್ಯಾಕ್ಸಿನ್ ವಿತರಣೆ!...

ಕೊರೋನಾ ವೈರಸ್ ಭಾರತದಲ್ಲಿ ಅಪಾಯದ ಸೂಚನೆ ನೀಡಿದೆ. ಇದೀಗ ಪ್ರತಿ ದಿನ 2.5 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದರ ನಡುವೆ ಲಸಿಕೆ ಅಭಿಯಾನ ಚುರುಕುಗೊಳಿಸಲಾಗಿದೆ. ಇದರ ಪರಿಣಾಮ ಇದೀಗ ಭಾರತದ ಲಸಿಕೆ ನೀಡುವಿಕೆಯಲ್ಲಿ ದಾಖಲೆ ಬರೆದಿದೆ.

ಕೊರೋನಾ ಹಿನ್ನೆಲೆ, ತಮ್ಮೆಲ್ಲಾ ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ರಾಹುಲ್ ಗಾಂಧಿ!...

ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಏರಿಕೆ| ಪ್ರಕರಣಗಳ ಸಂಖ್ಯೆ ಕಂಡು ತಮ್ಮೆಲ್ಲಾ ಚುನಾವಣಾ ಪ್ರಚಾರ ಸಮಾವೇಶ ರದ್ದುಗೊಳಿಸಿದ ಕಾಂಗ್ರೆಸ್‌ ನಾಯಕ| ಇತರ ಪಕ್ಷಗಳಿಗೂ ಹೀಗೇ ಮಾಡುವಂತೆ ಮನವಿ

ಭಾರತದ ಪ್ರಥಮ ಮಹಿಳಾ ಹಾಕಿ ತೀರ್ಪುಗಾರ್ತಿ ಪುಚ್ಚಿಮಂಡ ಅನುಪಮಾ ಕೊರೋನಾಗೆ ಬಲಿ...

ಭಾರತದ ಪ್ರಥಮ ಮಹಿಳಾ ಹಾಕಿ ತೀರ್ಪುಗಾರ್ತಿ ಪುಚ್ಚಿಮಂಡ ಅನುಪಮಾ (41) ಕೊರೋನಾಗೆ ಬಲಿಯಾಗಿದ್ದಾರೆ. ಹಾಕಿ ಅಂಪೈರ್‌ ಆಗಿದ್ದ ಅನುಪಮ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.  

ಏಷ್ಯಾದಲ್ಲೇ ಅತ್ಯಧಿಕ ಸಂಭಾವನೆ ಪಡೆಯೋ ಜಾಕಿಚಾನ್ ತನ್ನ ಆಸ್ತಿ ಮಗನಿಗೆ ಕೊಡ್ತಿಲ್ಲ...

ಇಳಿವಯಸ್ಸಿನಲ್ಲಿ ಸಖತ್ ಆಕ್ಷನ್ ಮಾಡೋ ಜಾಕಿಚಾನ್ ಇದೀಗ ಪ್ರಮುಖ ನಿರ್ಧಾರವೊಂದನ್ನು ಮಾಡಿದ್ದಾರೆ. ತಮ್ಮ ಮಗನಿಗೆ ಸೇರಬೇಕಿದ್ದ ಭಾರೀ ದೊಡ್ಡ ಮೊತ್ತದ ಆಸ್ತಿಯನ್ನು ಚಾರಿಟಿಗೆ ಬರೆದಿದ್ದಾರೆ. 

ಅಬ್ಬಾ..! ಕಣ್ಮುಚ್ಚಿ ತೆರೆಯೋ ಹೊತ್ತಲ್ಲಿ ಎಷ್ಟೊಂದ್ ಎಕ್ಸ್‌ಪ್ರೆಷನ್ ಕೊಡ್ತಾರೆ ರಶ್ಮಿಕಾ...

ಕಿರಿಕ್ ಚೆಲುವೆ ರಶ್ಮಿಕಾ ಮೂಡ್ ಹೇಗೆಲ್ಲಾ ಚೇಂಜ್ ಆಗುತ್ತೆ ಗೊತ್ತಾ ? ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಎಷ್ಟೆಲ್ಲಾ ಎಕ್ಸ್‌ಪ್ರೆಷನ್ ಕೊಡ್ತಾರೆ ನೋಡಿ.. Kiransaphotography ಕ್ಲಿಕ್ಕಿಸಿದ ಫೋಟೋಸ್ ನೋಡಿ

ಪಿಂಕ್ ವಾಟ್ಸಾಪ್ ಬಳಸೋ ಮುನ್ನ ವಹಿಸಿ ಎಚ್ಚರ!...

ಪಿಂಕ್‌ ವರ್ಷನ್‌ ವಾಟ್ಸಾಪ್‌ ವೈರಸ್‌ ಲಿಂಕ್‌ ಬಗ್ಗೆ ಎಚ್ಚರ| ವಾಟ್ಸಪ್‌ ಗ್ರಾಹಕರ ಮಾಹಿತಿಗೆ ಕನ್ನ ಹಾಕಲು ಖದೀಮರ ಹೊಂಚು

ಸೈಬರ್ ಸುರಕ್ಷತೆಯ ಸವಾಲಿನ ನಡುವೆ ಸಾಫ್ಟ್‌ವೇರ್ ಖರೀದಿಗೆ ಇಲ್ಲಿವೆ 10 ಸೂತ್ರ!...

ಸೈಬರ್ ಸೆಕ್ಯೂರಿಟಿ ಸದ್ಯ ಅತ್ಯಂತ ಸವಾಲು. ಒಂದು ಕ್ಷಣ ಮೈಮರೆತರೂ ಎಲ್ಲವೂ ಮಂಗ ಮಾಯವಾಗಿ ಬಿಡುವ ಕಾಲವಿದು. ಪೂರಕವಾಗಿ ಮಾರುಕಟ್ಟೆಯಲ್ಲಿ ನಕಲಿ ಸಾಫ್ಟ್‌ವೇರ್ ಕೂಡ ಅಷ್ಟೇ ಅಪಾಯಕಾರಿ. ಹೀಗಾಗಿ ಈ ಎಲ್ಲಾ ಸವಾಲಿನ ನಡುವೆ ಅಸಲಿ ಸಾಫ್ಟ್‌ವೇರ್ ಖರೀದಿ ಹೇಗೆ ಸಾಧ್ಯ?

ಕೊರೋನಾ ಹೈ ರಿಸ್ಕ್ : ಬೆಂಗಳೂರಿಗೆ ಪ್ರತ್ಯೇಕ ಸ್ಟ್ರಿಕ್ಟ್ ರೂಲ್ಸ್...

 ಬೆಂಗಳೂರಿನಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಭೇಟಿ ಮಾಡಿ ಆರೋಗ್ಯ ಸಚಿವ ಸುಧಾಕರ್ ಚರ್ಚೆ ನಡೆಸಿದ್ದಾರೆ. 

ಪಿಕ್‌ನಿಕ್‌ ಹೋದವರು ಜಲಪಾತಕ್ಕೆ ಬಿದ್ದು ದಾರುಣ ಸಾವು...

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಇಬ್ಬರು ದಾರುಣವಾಗಿ ಸಾವಿಗೀಡಾಗಿದ್ದಾರೆ.  ನೀರಿನಲ್ಲಿ ಬಿದ್ದ ಯುವತಿಯನ್ನು ರಕ್ಷಿಸಲು ಹೋದವನೂ ಕೂಡ ಮುಳುಗಿ ಮೃತಪಟ್ಟಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ