ಚಳಿಗಾಲದ ರೋಗಗಳನ್ನು ಹೊಡೆದೋಡಿಸುವ ಅಡುಗೆಮನೆಯ ಬೆಸ್ಟ್ ಮೆಡಿಸಿನ್’ಗಳಿವು

By Suvarna Web DeskFirst Published Dec 16, 2017, 6:34 PM IST
Highlights

ಭಾರತದ ಪ್ರಾಚೀನ ಆಹಾರ ಪದ್ಧತಿಯಲ್ಲಿ ಅನೇಕ ರೋಗಗಳಿಗೆ ಮೆಡಿಸಿನ್’ಗಳಿರುತ್ತವೆ ಅಂತೆಯೇ ಈ ಚಳಿಗಾಲದಲ್ಲಿ ಬರುವ ರೋಗಗಳನ್ನು  ಹೊಡೆದೋಡಿಸಲು ಯಾವ ಯಾವ ಭಾರತೀಯ ಸಾಂಬಾರ ಪದಾರ್ಥಗಳೂ ಸಹಕಾರಿಯಾಗುತ್ತವೆ ಎನ್ನುವುದನ್ನು ನೋಡೋಣ

ಬೆಂಗಳೂರು(ಡಿ.16): ಎಲ್ಲೆಲ್ಲೂ ಚಳಿ ಚಳಿ, ಚಳಿಗಾಲವು ತಂಪಾದ ವಾತಾವರಣದೊಂದಿಗೆ ಅನೇಕ ರೀತಿಯ ರೋಗಗಳನ್ನೂ ಕೂಡ ಹೊತ್ತು ತರುತ್ತದೆ. ಇವುಗಳನ್ನೆಲ್ಲಾ ತಡೆಗಟ್ಟಲು ಭಾರತದ ಸಾಂಪ್ರದಾಯಿಕ ಆಹಾರಗಳು ಬೆಸ್ಟ್ ಆಗಿವೆ.  ಭಾರತದ ಪ್ರಾಚೀನ ಆಹಾರ ಪದ್ಧತಿಯಲ್ಲಿ ಅನೇಕ ರೋಗಗಳಿಗೆ ಮೆಡಿಸಿನ್’ಗಳಿರುತ್ತವೆ ಅಂತೆಯೇ ಈ ಚಳಿಗಾಲದಲ್ಲಿ ಬರುವ ರೋಗಗಳನ್ನು  ಹೊಡೆದೋಡಿಸಲು ಯಾವ ಯಾವ ಭಾರತೀಯ ಸಾಂಬಾರ ಪದಾರ್ಥಗಳೂ ಸಹಕಾರಿಯಾಗುತ್ತವೆ ಎನ್ನುವುದನ್ನು ನೋಡೋಣ

ನಕ್ಷತ್ರ ಮೊಗ್ಗು : ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಅಲ್ಲದೇ ಇದರಲ್ಲಿ ವಿಟಮಿನ್ ಎ ಮತ್ತು ಸಿ ಅಂಶಗಳೂ ಕೂಡ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಗಂಟಲು ಕೆರೆತ ಹಾಗೂ ಕೆಮ್ಮು ಮುಂತಾದ ಸಮಸ್ಯೆಗಳು ಕಾಣಿಸಿಕೊಂಡಾದ ನಕ್ಷತ್ರ ಮೊಗ್ಗಿನಿಂದ ಮಾಡಿದ ಟೀ ಸೇವನೆ ಮಾಡಿದಲ್ಲಿ ರಿಲೀಫ್ ಪಡೆಯಬಹುದಾಗಿದೆ.

ಕೇಸರಿ : ಭಾರತದಲ್ಲಿ ಹೆಚ್ಚು ಆಹಾರ ಪದಾರ್ಥಗಳಿಗೆ ಬಣ್ಣ ಬರಲು ಕೇಸರಿಯನ್ನು ಬಳಕೆ ಮಾಡಲಾಗುತ್ತದೆ. ಶೀತದ ಲಕ್ಷಣಗಳು ಕಂಡು ಬಂದಾಗ ಹಾಲಿನಲ್ಲಿ ಕೇಸರಿಯನ್ನು ಸೇರಿಸಿ ಕುಡಿಯುವುದರಿಂದ ಆರಾಮದಾಯಕ ಎನಿಸುತ್ತದೆ.

ಅರಿಶಿಣ : ಅರಿಶಿಣವು ನಿತ್ಯ ಹೆಚ್ಚು ಬಳಕೆಯಾಗುವಂತಹ ಸಾಂಬಾರ ಪದಾರ್ಥವಾಗಿದೆ. ಚಳಿಗಾಲದ ಸಂದರ್ಭದಲ್ಲಿ ಇದರ ಬಳಕೆಯಿಂದ  ಅನೇಕ ರೀತಿಯ ಆರೋಗ್ಯ ಸಮಸ್ಯೆಗಳ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇಮ್ಯುನಿಟಿ ಪವರ್ ಹೆಚ್ಚಸುವಲ್ಲಿಯೂ ಕೂಡ ಅರಿಶಿಣ ಸಹಕಾರಿಯಾಗಿದೆ. ಅರಿಶಿಣವು ಹೆಚ್ಚಿನ ಪ್ರಮಾಣದ ರೋಗ ನಿರೋಧಕ ಶಕ್ತಿಯನ್ನೂ ಕೂಡ ಹೊಂದಿದೆ.

ಮೆಂತ್ಯ : ಮೆಂತ್ಯವನ್ನು ಆಹಾರದಲ್ಲಿ ಮಿತವಾಗಿ ಬಳಕೆ ಮಾಡುವುದರಿಂದ ವೈರಸ್ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ.

ಜಾಯಿಕಾಯಿ : ಯಾವುದೇ ಸಿಹಿ ಪದಾರ್ಥಗಳಿಗೆ ಪರಿಮಳಕ್ಕಾಗಿ ಇದನ್ನು ಬಳಕೆ ಮಾಡಲಾಗುತ್ತದೆ. ಇದರ ಸ್ವಲ್ಪ ಪುಡಿಯನ್ನು ಹಾಲಿನಲ್ಲಿ ಹಾಕಿ ಇದಕ್ಕೆ ಜೇನನ್ನು ಸೇರಿಸಿ ಕುಡಿಯುವುದು ಕೂಡ  ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ.

ಕರಿಮೆಣಸು: ಹೆಚ್ಚು ಖಾರವಾಗಿರುವ ಕರಿಮೆಣಸು ಕೂಡ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.  ಇದು ಮಾನವ ದೇಹನ ಚಯಾಪಚಯ ಕ್ರಿಯೆ ಹೆಚ್ಚಿಸಲು ಹೆಚ್ಚು ಸಹಕಾರಿಯಾಗಿದೆ.

ಲವಂಗ : ಲವಂಗವೂ ಕೂಡ ಹೆಚ್ಚಿನ ಪ್ರಮಾಣದ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಉರಿಯೂತ, ನಂಜು ನಿರೋಧಕ, ಹಲ್ಲು ನೋವಿನ ಸಮಸ್ಯೆಗೆ ಬಳಕೆಯಾಗುತ್ತದೆ. ಅಲ್ಲದೇ ಅಡುಗೆ ಮನೆಯಲ್ಲಿ ಹೆಚ್ಚು ಉಪಯೋಗವಾಗುತ್ತದೆ. ವಿಭಿನ್ನವಾದ ಪರಿಮಳವನ್ನು ಹೊಂದಿದ್ದು, ಎಲ್ಲಾ ರೀತಿಯ ಭಕ್ಷ್ಯಗಳಿಗೂ ಇದನ್ನು ಬಳಸಲಾಗುತ್ತದೆ.  

click me!