ಡಿಕೆಶಿ ವಿರುದ್ಧ ಇನ್ನೋರ್ವ ಕೈ ನಾಯಕ ಅಸಮಾಧಾನ!

Oct 9, 2018, 5:10 PM IST

ರಾಮನಗರ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸ್ಥಳೀಯ ನಾಯಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ನಿಂತು ಪರಾಭವಗೊಂಡಿದ್ದ ಕಾಂಗ್ರೆಸ್ ನಾಯಕ ಇಕ್ಬಾಲ್ ಹುಸೇನ್ ಇದೀಗ ಮೈತ್ರಿಯ ವಿರುದ್ಧ ಧ್ವನಿಯೆತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರು, ಪಕ್ಷದ ಪ್ರಭಾವಿ ನಾಯಕ, ಮೈತ್ರಿಯ ರೂವಾರಿ ಡಿ.ಕೆ. ಶಿವಕುಮಾರ್‌ರ ರಾಜಕೀಯ ನಡೆಗಳ ವಿರುದ್ಧ ಕಿಡಿ ಕಾರಿದ್ದಾರೆ.