ಫೇಸ್ ಬುಕ್ ಖಾತೆ ಹೊಂದಿದ ದೇಶದ ಮುಖ್ಯಮಂತ್ರಿಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಚ್ಚು ಫೇಮಸ್ ಎನಿಸಿಕೊಂಡಿದ್ದಾರೆ.
ಲಕ್ನೋ : ಫೇಸ್ ಬುಕ್ ಖಾತೆ ಹೊಂದಿದ ದೇಶದ ಮುಖ್ಯಮಂತ್ರಿಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಚ್ಚು ಫೇಮಸ್ ಎನಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ವೇದಿಕೆ ಬಿಡುಗಡೆ ಮಾಡಿರುವ ರ್ಯಾಂಕಿಂಗ್’ನಲ್ಲಿ ಯೋಗಿ ಆದಿತ್ಯನಾಥ್ ಅವರ ಫೇಸ್’ಬುಕ್ ಪೇಜ್ ಹೆಚ್ಚು ಫೇಮಸ್ ಆಗಿದೆ.
ಇನ್ನು ಈ ಪಟ್ಟಿಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಫೇಸ್’ಬುಕ್ ಖಾತೆಗಳು ಹೆಚ್ಚು ಪಾಪ್ಯುಲರ್ ಎನಿಸಿಕೊಂಡಿವೆ.
ರಾಜಕಾರಣಿಗಳು, ಸರ್ಕಾರಿ ಸಂಸ್ಥೆಗಳು, ಮಿನಿಸ್ಟ್ರಿ, ರಾಜಕೀಯ ಪಕ್ಷಗಳು ಸೇರಿ ಎಲ್ಲಾ ಪ್ರಮುಖ ಫೇಸ್’ಬುಕ್ ಪೇಜ್’ಗಳ ಬಗ್ಗೆ ಮಾಹಿತಿ ಕಲೆಹಾಕಿ ಬಿಡುಗಡೆ ಮಾಡಿದ ಅಂಕಿ ಅಂಶದಲ್ಲಿ ಈ ವಿಚಾರ ತಿಳಿದು ಬಂದಿದೆ.
2017ರ ಜನವರಿಯಿಂದ 2017ರ ಡಿಸೆಂಬರ್ ವರೆಗೆ ಸಂಗ್ರಹಿಸಿದ ಅಂಕಿ ಅಂಶದ ಪ್ರಕಾರ ಯೋಗಿ ಆದಿತ್ಯನಾಥ್ ಅವರ ಫೇಸ್’ಬುಕ್ ಪೇಜ್ ಹೆಚ್ಚು ಪ್ರಸಿದ್ಧಿ ಎನಿಸಿಕೊಂಡಿದೆ.