ಬೀದಿಗೆ ಬಿದ್ದ ಪಾಕ್ ಮಿಲಿಟರಿ: ಅಮೆರಿಕದ ಭದ್ರತಾ ನೆರವಿಗೆ ಕತ್ತರಿ!

By Web DeskFirst Published Nov 21, 2018, 2:05 PM IST
Highlights

ಟ್ರಂಪ್‌ಗೆ ಬೈದು ಕಾಲ ಮೇಲೆ ಚಪ್ಪಡಿ ಕಲ್ಲು ಹಾಕಿಕೊಂಡ ಪಾಕಿಸ್ತಾನ! ಪಾಕಿಸ್ತಾನಕ್ಕೆ ಅಮೆರಿಕ ಸರ್ಕಾರ ನೀಡುತ್ತಿದ್ದ ಭದ್ರತಾ ನೆರವು ಸ್ಥಗಿತ! ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ನೆರವು ಸ್ಥಗಿತ! ಇನ್ಮುಂದೆ 1.66 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ನೆರವು ಸಿಗಲ್ಲ

ವಾಷಿಂಗ್ಟನ್(ನ.21): ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಪಾಕಿಸ್ತಾನ ಕಪಟ ನಾಟಕವಾಡುತ್ತಿದೆ, ಆ ದೇಶದಿಂದ ಅಮೆರಿಕಕ್ಕೆ ಏನೂ ಪ್ರಯೋಜನವಾಗಿಲ್ಲ ಎಂದು ಇತ್ತೀಚಿಗೆ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆರೋಪಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಟ್ರಂಪ್ ಅಮ್ನೇಶಿಯಾ ರೋಗದಿಂದ  ಬಳಲುತ್ತಿದ್ದು, ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ನಿರ್ವಹಿಸಿದ ಪಾತ್ರದ ಕುರಿತು ಅವರಿಗೆ ನೆನಪಿಲ್ಲ ಎಂದು ಗುಡುಗಿದ್ದರು. 

ಇದಕ್ಕೆಲ್ಲಾ ಉತ್ತರವೆಂಬಂತೆ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಸರ್ಕಾರ ನೀಡುತ್ತಿದ್ದ ಭದ್ರತಾ ನೆರವನ್ನು ಅಮೆರಿಕ ಸರ್ಕಾರ ಸ್ಥಗಿತಗೊಳಿಸಿದೆ.

ಪ್ರತೀ ವರ್ಷ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸಮಾರು 1.66 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ನೆರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಮರಿಕ ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ರಾಬ್ ಮ್ಯಾನಿಂಗ್ ಹೇಳಿದ್ದಾರೆ. 

ಈ ಹಿಂದೆ ಪಾಕಿಸ್ತಾನ ಸರ್ಕಾರ ಉಗ್ರರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಅಮೆರಿಕ ಕಾಂಗ್ರೆಸ್ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಈ ವೇಳೆ ಅಮೆರಿಕ ಸರ್ಕಾರ ಪಾಕಿಸ್ತಾನ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.  

ಕಾಂಗ್ರೆಸ್‌ ನಿರ್ದೇಶನದ ಮೇರೆಗೆ 2016ರಲ್ಲಿ ವಿದೇಶಿ ಸೇನಾ ನಿಧಿ (ಎಫ್‌ಎಂಎಫ್‌) ಅಡಿ ನೀಡಿರುವ ಸುಮಾರು 1.66 ಬಿಲಿಯನ್ ಡಾಲರ್ ಮೊತ್ತದ ಭದ್ರತಾ ನೆರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

click me!