
ನವದೆಹಲಿ(ನ.02): ಭಾರತದ ಹೊಸ ರಾಜಕೀಯ ನಕ್ಷೆ ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನು ಹೊಸದಾಗಿ ಗುರುತಿಸಿದೆ.
ಕಳೆದ ಅಕ್ಟೋಬರ್ 31ರಂದು ದೇಶದ ಹೊಸ ಕೇಂದ್ರಾಡಳಿತ ಪ್ರದೇಶಗಳಾಗಿ ಜಮ್ಮು–ಕಾಶ್ಮೀರ ಮತ್ತು ಲಡಾಖ್ ಅಸ್ತಿತ್ವಕ್ಕೆ ಬಂದಿದ್ದು, ಇದರೊಂದಿಗೆ ಭಾರತದ ರಾಜಕೀಯ ನಕ್ಷೆಯೂ ಬದಲಾಗಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ ರಾಜಕೀಯ ನಕ್ಷೆಯಲ್ಲಿ 28 ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.
2 ಹೊಸ ಕೇಂದ್ರಾಡಳಿತ ಪ್ರದೇಶಗಳಿಗೂ ಮುನ್ನ ದೇಶದಲ್ಲಿ ಒಟ್ಟು 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿದ್ದವು. ಈಗ ರಾಜ್ಯಗಳ ಸಂಖ್ಯೆ 28ಕ್ಕೆ ಇಳಿಕೆಯಾಗಿದ್ದು, ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9 ಏರಿಕೆಯಾಗಿದೆ.
ರಾಜ್ಯಗಳು:
ಆಂಧ್ರ ಪ್ರದೇಶ
ಅರುಣಾಚಲ ಪ್ರದೇಶ
ಅಸ್ಸಾಂ
ಬಿಹಾರ
ಛತ್ತೀಸಗಡ
ಗೋವಾ
ಗುಜರಾತ್
ಹರಿಯಾಣ
ಹಿಮಾಚಲ ಪ್ರದೇಶ
ಜಾರ್ಖಂಡ್
ಕರ್ನಾಟಕ
ಕೇರಳ
ಮಧ್ಯ ಪ್ರದೇಶ
ಮಹಾರಾಷ್ಟ್ರ
ಮಣಿಪುರ
ಮೇಘಾಲಯ
ಮಿಜೋರಾಂ
ನಾಗಾಲ್ಯಾಂಡ್
ಒಡಿಶಾ
ಪಂಜಾಬ್
ರಾಜಸ್ಥಾನ
ಸಿಕ್ಕಿಂ
ತಮಿಳುನಾಡು
ತೆಲಂಗಾಣ
ತ್ರಿಪುರಾ
ಉತ್ತರ ಪ್ರದೇಶ
ಉತ್ತರಾಖಂಡ
ಪಶ್ಚಿಮ ಬಂಗಾಳ
ಕೇಂದ್ರಾಡಳಿತ ಪ್ರದೇಶಗಳು:
ಪುದುಚೇರಿ
ಲಕ್ಷದ್ವೀಪ
ಲಡಾಖ್
ಜಮ್ಮು–ಕಾಶ್ಮೀರ
ದೆಹಲಿ
ದಮನ್ ಮತ್ತು ದಿಯು
ದಾದರ್ ಮತ್ತು ನಗರ್‌ಹವೇಲಿ
ಚಂಡೀಗಡ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.