ಜಗತ್ತಿನ ಅತ್ಯಂತ 'ಡೇಂಜರಸ್ ಕಿಸ್'| ಫೋಟೋ ವೈರಲ್ ಆಗುತ್ತಿದ್ದಂತೆಯೇ ಭುಗಿಲೆದ್ದ ಜನರ ಅಸಮಾಧಾನ| ಅಭಿಮಾನಿಗಳನ್ನು ಸಮಾಧಾನಪಡಿಸಲು ಸತ್ಯ ಬಹಿರಂಗ
ವಾಷಿಂಗ್ಟನ್[ಏ.13]: ಇನ್ಸ್ಟಾಗ್ರಾಂನಲ್ಲಿ ಅತ್ಯಂತ ಪ್ರಸಿದ್ಧ ದಂಪತಿ ಎಂದೇ ಖ್ಯಾತಿ ಪಡೆದಿರುವ ಅಮೆರಿಕಾದ ಕೆಲಿ ಕ್ಯಾಸಿಲ್ ಹಾಗೂ ಕೋಡಿ ವರ್ಕ್ ಮೆನ್ ಕ್ಲಿಕ್ಕಿಸಿಕೊಂಡಿರುವ ಪೋಟೋ ಒಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಜನರು ಇದೊಂದು ಅಪಾಯಕಾರಿ ಹಾಗೂ ಮೂರ್ಖತನದ ಪ್ರದರ್ಶನ ಎಂದಿದ್ದಾರೆ. ಇನ್ನು ಈ ಫೋಟೋ ತೆಗೆಸಿಕೊಳ್ಳುವ ವೇಳೆ ಅಗತ್ಯ ಎಚ್ಚರಿಕೆ ವಹಿಸಲಾಗಿತ್ತು ಎಂದು ದಂಪತಿ ತಿಳಿಸಿದ್ದಾರೆ.
ಸದ್ಯ ಈ ಟ್ರಾವೆಲಿಂಗ್ ದಂಪತಿ ಬಾಲಿಯಲ್ಲಿದೆ. ಸದ್ಯ ವೈರಲ್ ಆದ ಫೋಟೋದಲ್ಲಿ ಕೆಲಿ ಈಜುಕೊಳದ ಗೋಡೆಯ ಆಸರೆಯಲ್ಲಿ ನಿಂತಿದ್ದು, ಈಜುಕೊಳದ ಒಳ ಭಾಗದಲ್ಲಿರುವ ಗಂಡ ಆಕೆಗೆ ಮುತ್ತು ನೀಡುವುದನ್ನು ನೋಡಬಹುದು. ಡೈಲಿ ಮೇಲ್ ವರದಿಯನ್ವಯ ಈ ಫೋಟೋ Ubud ನಲ್ಲಿರುವ ಕಯೋನ್ ಅರಣ್ಯ ದೊಳಗಿರುವ ರೆಸಾರ್ಟ್ ನಲ್ಲಿ ಕ್ಲಿಕ್ಕಿಸಲಾಗಿದೆ ಎಂದು ತಿಳಿದು ಬಂದಿದೆ.
undefined
A post shared by Kelly + Kody ⚤🇺🇸 (@positravelty) on Apr 2, 2019 at 7:27am PDT
ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಬಹಳಷ್ಟು ಚರ್ಚೆ ಹುಟ್ಟು ಹಾಕಿದೆ. ಹಲವರು ಈ ದಂಪತಿಯ ಖತರ್ನಾಕ್ ಸ್ಟಂಟ್ ಕಂಡು ಅನ್ ಲೈಕ್ ಕೂಡಾ ಮಾಡಿದ್ದಾರೆ. ಫೋಟೋಗೆ ಕಮೆಂಟ್ ಮಾಡಿದ ವ್ಯಕ್ತಿಯೊಬ್ಬ 'ಕೇವಲ ಒಂದು ಫೋಟೋಗಾಗಿ ಜೀವವನ್ನು ಪಣಕ್ಕಿಟ್ಟಿದ್ದೀರಿ. ಇದು ಸರಿಯಲ್ಲ' ಎಂದಿದ್ದಾರೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಈ ದಂಪತಿ ನಾವು ಎಲ್ಲಾ ಮುಂಜಾಗೃತಾ ಕ್ರಮಗಳನ್ನು ವಹಿಸಿಕೊಂಡು ಈ ಫೋಟೋ ತೆಗೆಸಿದ್ದೇವೆ. ಎಲ್ಲಕ್ಕೀಮತ ಹೆಚ್ಚಾಗಿ ಈ ಈಜುಕೊಳದ ಕೆಳಗೆ ಮತ್ತೊಂದು ಈಜುಕೊಳವಿತ್ತು. ಇದನ್ನು ನಾವು ಕ್ರಾಪ್ ಮಾಡಿದ್ದೇವೆ ಎಂದಿದ್ದಾರೆ.