'ನಾನೇ ಸಿಎಂ' ಪರಮೇಶ್ವರ ಹೇಳಿಕೆ ಹಿಂದೆ ಇದೆ ಈ ಕಟು ಸತ್ಯ

By Web DeskFirst Published Nov 18, 2018, 4:09 PM IST
Highlights

ಡಿಸಿಎಂ ಡಾ. ಜಿ.ಪರಮೇಶ್ವ ರ ನೀಡಿರುವ ಒಂದು ಹೇಳಿಕೆ ರಾಜ್ಯ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಮತ್ತೆ ಸಾಬೀತು ಮಾಡಿದೆ. ಸಿಎಂ ಆಗುವ ಕನಸು ಯಾರಿಗೆ ಇರುವುದಿಲ್ಲ? ಅಲ್ಲವೇ....ಆದರೆ ಪರಮೇಶ್ವರ ಈ ಬಗೆಯ ಹೇಳೀಕೆ ನೀಡಲು ಅಸಲಿ ಕಾರಣವಾದರೂ ಏನು?

ಪರಮೇಶ್ವರ ಹೇಳೀಕೆಯನ್ನು  ವಿಶ್ಲೇಶಿಸುವ ಮುನ್ನ ನಾವು ಈ ಹಿಂದಿನ ಕಾಂಗ್ರೆಸ್ ಸರ್ಕಾರದ ವೇಳೆ ನಡೆದಿದ್ದ ಘಟನಾವಳಿಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ.

ಕೊರಟಗೆರೆಯಲ್ಲಿ ಸೋಲು: ಪರಮೇಶ್ವರ ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲೇ ಸೋಲು ಕಂಡಿದ್ದರು. ಈ ಸೋಲಿನಲ್ಲಿ ಅಂದೀನ ಕಾಂಗ್ರೆಸ್ ಪಕ್ಷದ ಪಪ್ರಭಾವಿ ನಾಯಕರದ್ದೇ ಪಾತ್ರವಿದೆ ಎಂದು ಹೇಳಲಾಗಿತ್ತು. ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರಾಗಿ ಚುನಾವಣೆ ಎದುರಿಸಿದ್ದರು. ಆದರೆ  ಸೋಲು ಕಂಡ ಪರಿಣಾಮ ಕೆಪಿಸಿಸಿ ಅಧ್ಯಕ್ಷರಾಗಿಯೇ ಉಳಿದುಕೊಳ್ಳುವಂತಾಯಿತು.\

ಈ ಮೂವರಲ್ಲಿ ಒಬ್ಬರು ಬಿಜೆಪಿ ಹೊಸ ರಾಜ್ಯಾಧ್ಯಕ್ಷರು?

ಸೆಕೆಂಡ್ ಇನಿಂಗ್ಸ್ ನಲ್ಲಿ ಸಚಿವ ಸ್ಥಾನ: ಅಂತೂ ಇಂತೂ ಪರಮೇಶ್ವರ ಅವರಿಗೆ ಹಿಂದಿನ ಸರಕಾರದ ಕೊನೆ ಕ್ಷಣದಲ್ಲಿ ಗೃಹ ಸಚಿವ ಸ್ಥಾನ ದೊರೆಯಿತು. ಅವರ ಡಿಸಿಎಂ  ಮತ್ತು ಸಿಎಂ ಕನಸು ಹಾಗೆ ಉಳಿದುಕೊಂಡಿತು.

ಬದಲಾದ ರಾಜಕಾರಣ: ಈ ಬಾರಿಯ ವಿಧಾನಸಭೆ ಫಲಿತಾಂಶ ಅತಂತ್ರ ವಿಧಾನಸಭೆ ನಿರ್ಮಾಣ ಮಾಡಿತ್ತು. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೂ ಕಾಂಗ್ರೆಸ್ ಬೇಷರತ್ ಆಗಿ ಕುಮಾರಸ್ವಾಮಿ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿತು. ಅಲ್ಲದೇ ಐದು ವರ್ಷ ಮಾತನಾಡುವುದಿಲ್ಲ ಎಂದು ಹೇಳಿತು.

ಸಿದ್ದು ವರ್ಸಸ್ ಪರಮೇಶ್ವರ: ಅದು ಯಾವ ಕಾರಣಕ್ಕೆ ಸಿದ್ದರಾಮಯ್ಯ ಬೆಂಬಲಿಗರು, ಆಪ್ತರು ದೋಸ್ತಿ ಸರಕಾರದಲ್ಲಿ ಹಿಂದಕ್ಕೆ ಸರಿದರೋ, ಅಥವಾ ಸರಿಸಲಾಯಿತೋ ಗೊತ್ತಿಲ್ಲ. ಪರಮೇಶ್ವರ ತಡವಾಗಿಯಾದರೂ ರಾಜ್ಯ ಕಾಂಗ್ರೆಸ್ ಮೇಲೆ ಪ್ರಭೂತ್ವ ಸಾಧಿಸಿದರು.

ಹೆಚ್ಚು ಸ್ಥಾನ ಆದರೆ ಡಿಸಿಎಂ: ಕಾಂಗ್ರೆಸ್ ಹೆಚ್ಚಿನ ಸ್ಥಾನ ಹೊಂದಿದ್ದರೂ ಸಿಎಂ ಪದವಿ ಕೈನಲ್ಲಿ ಇಲ್ಲ. ಈ ಒಂದು ಅಂಶ ರಾಜ್ಯದ ಕಾಂಗ್ರೆಸ್ ನಾಯಕರು ಮಾತ್ರವಲ್ಲದೇ ಪರಮೇಶ್ವರ ಅವರನ್ನು ಕಾಡುತ್ತಿದೆ.

 

 

click me!
Last Updated Nov 18, 2018, 4:23 PM IST
click me!