ಮನೆಗೆ ನುಗ್ಗಿ ತಲೆ ಕಡಿಯುವುದಾಗಿ ಮಾಜಿ JDS ಶಾಸಕನಿಗೆ ಬೆದರಿಕೆ

By Web Desk  |  First Published Nov 8, 2018, 8:30 PM IST

ಮನೆಗೆ ನುಗ್ಗಿ ತಲೆ ಕಡಿಯುವುದಾಗಿ ಮಾಜಿ JDS ಶಾಸಕನಿಗೆ ಬೆದರಿಕೆ ಹಾಕಿದ್ದಾರೆ. ಯಾರು? ಏನು? ಇಲ್ಲಿದೆ ಮುಂದೆ ಇದೆ ವಿವರ.


ಚಿಕ್ಕಬಳ್ಳಾಪುರ, [ನ.08]: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ ರಾಜಣ್ಣ ಗೆ ಕರೆ ಮಾಡಿರುವ ಅನಾಮಧೇಯ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ.

ಮಾಜಿ ಶಾಸಕ ರಾಜಣ್ಣ ಅವರಿಗೆ ಕರೆ ಮಾಡಿರುವ ಅನಾಮಧೇಯ ವ್ಯಕ್ತಿ ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿ ನಿಂದನೆ ಮಾಡಿದ್ದಾನೆ. ಕಾಂಗ್ರೆಸ್ ಪಕ್ಷದವರಿಂದ ಹಣ ತಿಂದು ಜೆಡಿಎಸ್ ಪಕ್ಷವನ್ನ ಹಾಳು ಮಾಡಿಬಿಟ್ಟೆ ಎಂದು ಏಕ ವಚನದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.

Tap to resize

Latest Videos

ತನ್ನ ಹೆಸರಾಗಲಿ, ಊರಾಗಲಿ ಹೇಳದ ಆ ವ್ಯಕ್ತಿ ಒಂದೇ ನಂಬರಿನಿಂದ ನಾಲ್ಕೈದು ಬಾರಿ ಕರೆ ಮಾಡಿದ್ದು ನಾನು ನಿನಗೆ ಮತ ನೀಡಿದ ಮತದಾರ ಎಂದು ಹೇಳಿಕೊಂಡಿದ್ದಾನೆ. ನವೆಂಬರ್ 2 ರಂದು ಮೊದಲ ಬಾರಿಗೆ ಕರೆ ಮಾಡಿ ನಿಂದಿಸಿದ್ದ ವ್ಯಕ್ತಿ ಮತ್ತೆ ನವಂಬರ್ 3 ರಂದು ಮತ್ತೆ ಕರೆ ಮಾಡಿದ್ದಾನೆ.

ಅಲ್ಲದೇ ಏನಾದರೂ ಪೊಲೀಸರಿಗೆ ದೂರು ನೀಡಿದರೆ ಹಾಡಹಗಲೇ ನಿನ್ನ ಮನೆಗೆ ಬಂದು ತಲೆ ಕಡಿಯುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಹೆಚ್ಚೆಂದರೆ ನೀನು ನನ್ನನ್ನು ಜೈಲಿಗೆ ಕಳುಹಿಸುತ್ತೀಯಾ ಅಷ್ಟೆ ತಾನೇ ಎಂದು ಹೇಳಿದ್ದಾನೆ.
ಈ ಬಗ್ಗೆ .ರಾಜಣ್ಣ ಎಸ್ಪಿ ಕಾರ್ತಿಕ್‍ ರೆಡ್ಡಿ ಅವರನ್ನು ಭೇಟಿ ಮಾಡಿ ಅನಾಮಧೇಯ ಮೊಬೈಲ್ ಕರೆಯ ಆಡಿಯೋ ರೆಕಾರ್ಡ್ ನೀಡಿ, ದೂರು ನೀಡಿದ್ದಾರೆ.

click me!