ಘೋರ ಘಟನೆ.. ಸೆಕ್ಸ್ ಗೆ ಒಪ್ಪದ ಪತ್ನಿಗೆ ಬೆಂಕಿ ಹಚ್ಚಿದ ಪಾಪಿ

By Web DeskFirst Published 23, Sep 2018, 2:58 PM IST
Highlights

ಇದೊಂದು ಅತ್ಯಂತ ಹೇಯ ಕೃತ್ಯ. ದೈಹಿಕ ಸಂಪರ್ಕಕ್ಕೆ ಒಪ್ಪದ ಹೆಂಡತಿಯನ್ನು ಬೆಂಕಿ ಹಚ್ಚಿ ಗಂಡೆನೇ ಹತ್ಯೆ ಮಾಡಿದ್ದಾನೆ. ಮುದ್ದು ಮಕ್ಕಳನ್ನು ದಹಿಸಿದ ಪಾಪಿ ತಂದೆಯನ್ನು ಇದೀಗ ಬಂಧಿಸಲಾಗಿದೆ.

ಸೇಲಂ(ಸೆ.23)  ದೈಹಿಕ ಸಂಪರ್ಕಕ್ಕೆ ನಿರಾಕರಿಸಿದಳೆಂಬ ಕಾರಣಕ್ಕೆ ದುರುಳ ಗಂಡ ಪತ್ನಿ ಸೇರಿದಂತೆ ಇಬ್ಬರು ಮಕ್ಕಳನ್ನು ದಹಿಸಿ ಹಾಕಿದ್ದಾನೆ. ತಮಿಳುನಾಡಿನ ಅಟ್ಟೂರ್ ಬಳಿಯ ಅಳಗಪುರಂನಲ್ಲಿ  ಮಂಗಳವಾರ ಪ್ರಕರಣ ನಡೆದಿದ್ದು ಶುಕ್ರವಾರ ಬೆಳಕಿಗೆ ಬಂದಿದ್ದು ಆರೋಪಿ ಕಾರ್ತಿಕ್ ನನ್ನು ಬಂಧಿಸಲಾಗಿದೆ.

ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪತಿಯೇ ಬೆಂಕಿ ಹಚ್ಚಿರುವುದಾಗಿ ಪತ್ನಿ ಅಟ್ಟೂರ್ ಗ್ರಾಮೀಣ ಠಾಣೆ ಪೊಲೀಸರ ಮುಂದೆ ಸಾಯುವುದಕ್ಕೂ ಮುನ್ನ ಹೇಳಿಕೆ ನೀಡಿದ್ದಾರೆ. 

ತೀವ್ರವಾಗಿ ಗಾಯಗೊಂಡಿದ್ದ ಪತ್ನಿ ಪೂಮತಿ (26), ಪುತ್ರಿ ನೀಲಾ (5) ಸೇಲಂನ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಪುತ್ರ ಪೂವರಸನ್ (6) ಸುಟ್ಟ ಗಾಯಗಳಿಂದ ಯಮಯಾತನೆ ಅನುಭವಿಸುತ್ತಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ. 

ಪತಿ ಕಾರ್ತಿಕ ಪ್ರತಿನಿತ್ಯ ಕುಡಿದು ಬಂದು ಪತ್ನಿ ಜತೆ ಜಗಳವಾಡುತ್ತಿದ್ದ. ಅದರಂತೆ ಮಂಗಳವಾರ ಸಹ ಅಮಲಿನಲ್ಲಿ ಮನೆಗೆ ಬಂದು ಪತ್ನಿ ಪೂಮತಿ ಜತೆ ಜಗಳವಾಡಿದ್ದ. ಇದಾದ ಕೆಲ ಹೊತ್ತಲ್ಲೇ ದೈಹಿಕ ಸಂಪರ್ಕ ಬೆಳೆಸುವಂತೆ ಪತ್ನಿಯನ್ನು ಒತ್ತಾಯಿಸಿದ್ದ. ಆದರೆ ಪತ್ನಿ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿದ್ದಾನೆ.

Last Updated 23, Sep 2018, 2:58 PM IST