ಎಬಿಡಿ, ಡಿಕಾಕ್ ಸಿಕ್ಸ್'ರ್ ಸುರಿಮಳೆ : ಚೆನ್ನೈಗೆ ಸವಾಲಿನ ಗುರಿ ನೀಡಿದ ಬೆಂಗಳೂರು

 |  First Published Apr 25, 2018, 10:01 PM IST

ಎಬಿಡಿ ಹಾಗೂ ಡಿಕಾಕ್ ಅವರ ಸಿಕ್ಸ್'ರ್'ಗಳ ಅಬ್ಬರ. ಇವರಿಬ್ಬರ ಜೋಡಿ  2ನೇ ವಿಕೇಟ್ ನಷ್ಟಕ್ಕೆ 13.1 ಓವರ್'ಗಳಲ್ಲಿ 138 ರನ್ ಸಿಡಿಸಿದರು. 37 ಎಸತಗಳಲ್ಲಿ 4 ಸಿಕ್ಸ್'ರ್ ಹಾಗೂ 1 ಬೌಂಡರಿಯೊಂದಿಗೆ 53 ರನ್ ಗಳಿಸಿದ ಡಿಕಾಕ್ ಬ್ರಾವೋ ಬೌಲಿಂಗ್'ನಲ್ಲಿ ಔಟಾದರು.  


ಬೆಂಗಳೂರು(ಏ.25): ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ಹಾಗೂ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅವರ ಸಿಕ್ಸ್'ರ್ ಸುರಿಮಳೆಗಳ ಆಟದಿಂದ ಆರ್'ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್'ಗೆ 206 ರನ್'ಗಳ ಸವಾಲಿನ ಗುರಿ ನೀಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ಸ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬೆಂಗಳೂರು ತಂಡವನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು.  ಇನಿಂಗ್ಸ್ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ 18 ರನ್ ಗಳಿಸಿ ಠಾಕೂರ್ ಬೌಲಿಂಗ್'ನಲ್ಲಿ ಔಟಾದರು.
ನಂತರ ಶುರುವಾದದ್ದು ಎಬಿಡಿ ಹಾಗೂ ಡಿಕಾಕ್ ಅವರ ಸಿಕ್ಸ್'ರ್'ಗಳ ಅಬ್ಬರ. ಇವರಿಬ್ಬರ ಜೋಡಿ  2ನೇ ವಿಕೇಟ್ ನಷ್ಟಕ್ಕೆ 13.1 ಓವರ್'ಗಳಲ್ಲಿ 138 ರನ್ ಸಿಡಿಸಿದರು. 37 ಎಸತಗಳಲ್ಲಿ 4 ಸಿಕ್ಸ್'ರ್ ಹಾಗೂ 1 ಬೌಂಡರಿಯೊಂದಿಗೆ 53 ರನ್ ಗಳಿಸಿದ ಡಿಕಾಕ್ ಬ್ರಾವೋ ಬೌಲಿಂಗ್'ನಲ್ಲಿ ಔಟಾದರು.  
ನಂತರದ ಓವರ್'ನಲ್ಲಿ ಎಬಿಡಿ ತಾಹಿರ್'ಗೆ ವಿಕೇಟ್ ಒಪ್ಪಿಸಿದರು. ಅವರ ಅಮೋಘ ಆಟದಲ್ಲಿ 8 ಭರ್ಜರಿ ಸಿಕ್ಸ್'ರ್ ಹಾಗೂ 2 ಬೌಂಡರಿಗಳಿದ್ದವು. ಕೋರಿ ಆಂಡರ್'ಸನ್ ಕೂಡ ಬಂದ ದಾರಿಯಲ್ಲಿಯೇ ಪೆವಿಲಿಯನ್'ಗೆ ತೆರಳಿದರು. ಮನ್'ದೀಪ್ ಸಿಮಗ್ ಕೂಡ ಒಂದಿಷ್ಟು ಕಾಲ ಅಬ್ಬರಿಸಿದರು. 17 ಚಂಡುಗಳಲ್ಲಿ 3 ಸಿಕ್ಸ್'ರ್ ಹಾಗೂ 1 ಬೌಂಡರಿಯೊಂದಿಗೆ 32 ರನ್ ಬಾರಿಸಿದರು. ಅಂತಿಮವಾಗಿ ಆರ್'ಸಿಬಿ 20 ಓವರ್'ಗಳಲ್ಲಿ 205/8 ರನ್ ಗಳಿಸಿತು.  ಚೆನ್ನೈ ಪರ ಬ್ರಾವೋ, ತಾಹಿರ್ ಹಾಗೂ ಠಾಕೂರ್ ತಲಾ 2 ವಿಕೇಟ್ ಪಡೆದರು.

ಸ್ಕೋರ್

Tap to resize

Latest Videos

ಆರ್'ಸಿಬಿ 20 ಓವರ್'ಗಳಲ್ಲಿ  205/8
(ಎಬಿಡಿ 68, ಡಿಕಾಕ್ 53)

ಚೆನ್ನೈ ವಿರುದ್ಧದ ಪಂದ್ಯ
(ವಿವರ ಅಪೂರ್ಣ)

 

click me!