ಉಡುಪಿ: ಜೀಪಿನಿಂದ ಹಾರಿ ಅತ್ಯಾಚಾರ, ಕೊಲೆ ಆರೋಪಿ ಎಸ್ಕೇಪ್

By Web Desk  |  First Published Mar 31, 2019, 11:58 PM IST

ಅತ್ಯಾಚಾರ ಮತ್ತು ಕೊಲೆ ಆರೋಪ ಹೊತ್ತ ವ್ಯಕ್ತಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.


ಉಡುಪಿ[ಮಾ.31] ಅಪ್ರಾಪ್ತೆಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ್ದ ಆರೋಪಿ ಹುನುಮಂತಪ್ಪ ಎಂಬಾತ ಭಾನುವಾರ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ. ಮೂಲತಃ ಬಾದಾಮಿಯ ನಿವಾಸಿಯಾದ ಈತನನ್ನು ನ್ಯಾಯಾಲಯದಿಂದ ಜೈಲಿಗೆ ಕರೆದುಕೊಂಡು ಹೋಗುತ್ತಿದ್ದಾಗ ಎಸ್ಕೇಪ್ ಆಗಿದ್ದಾನೆ.

ಮಾ.9ರಂದು ಈತ ಉಡುಪಿಯಲ್ಲಿ ಕೆಲಸ ಮಾಡುತ್ತಿದ್ದ ಬಾದಾಮಿ ಮೂಲದ 17 ವರ್ಷದ ಯುುವತಿಯೊಬ್ಬಳಿಗೆ ಬೇರೆ ಉದ್ಯೋಗ ಕೊಡಿಸುವುದಾಗಿ ನಗರದ ಹೊರಭಾಗಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ.

Tap to resize

Latest Videos

ರೇಪ್‌ ಸಂತ್ರಸ್ತೆಯ 24 ವಾರದ ಭ್ರೂಣ ತೆಗೆಸಲು ಕೋರ್ಟ್ ಒಪ್ಪಿಗೆ

ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಶನಿವಾರ ಆತನನ್ನು ಉಡುಪಿ ಬಸ್ ನಿಲ್ದಾಣದಲ್ಲಿ  ಬಂಧಿಸಿದ್ದರು. ಭಾನುವಾರ ಆತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ನಂತರ ಆತನನ್ನು ಉಡುಪಿಯಿಂದ ಹಿರಿಯಡ್ಕದ ಅಂಜಾರು ಎಂಬಲ್ಲಿರುವ ಸಬ್ ಜೈಲಿಗೆ ಹೊಯ್ಸಳ ವಾಹಾನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ವಾಹನದಿಂದ ಹೊರಗೆ ಜಿಗಿದು ತಪ್ಪಿಸಿಕೊಂಡು ಕಾಡಿನಲ್ಲಿ ಓಡಿ ಪರಾರಿಯಾಗಿದ್ದಾನೆ.

click me!