ಬೆಂಗಳೂರು: ಹೋಂಗಾರ್ಡ್​ ಮೇಲೆ ’ಪೋಲಿ’ಸಪ್ಪ ಅತ್ಯಾಚಾರ, ರಕ್ಷಕನೇ ರಾಕ್ಷಸನಾದಾಗ!

By Web DeskFirst Published Nov 19, 2018, 10:22 PM IST
Highlights

ತನಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಹಿರಿಯ ಅಧಿಕಾರಿಗಳ ಬಳಿ ಹೇಳಿದ್ದ ಮಹಿಳಾ ಹೋಂಗಾರ್ಡ್ ಗೆ ಸಿಕ್ಕ ಪ್ರತಿಫಲ ಅತ್ಯಾಚಾರ.

ಬೆಂಗಳೂರು (ನ.19): ಮಹಿಳಾ ಹೋಂಗಾರ್ಡ್ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಜ್ಞಾನಭಾರತಿ ಯುನಿವರ್ಸಿಟಿಯಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ನಂದಿನಿ ಲೇಔಟ್​ ಪೊಲೀಸ್​ ಠಾಣೆಯ ಮುಖ್ಯಪೇದೆ ಅತ್ಯಾಚಾರ ಎಸಗಿದ್ದಾನೆ.ಇದೀಗ ತನ್ನದೇ ಇಲಾಖೆಯ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾನೆ.

ಈ ಬಗ್ಗೆ ನೊಂದ ಮಹಿಳೆ ನಂದಿನಿ ಲೇಔಟ್​ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ಚಂದ್ರಶೇಖರ್​ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

 ಸುಮಾರು 15 ದಿನಗಳ ಹಿಂದೆ ಅಷ್ಟೇ ಚಂದ್ರಶೇಖರ್ ಪರಿಚಯವಾಗಿತ್ತು. ಮೊದಮೊದಲು ಚೆನ್ನಾಗಿ ಇದ್ದ.  ಕೆಲಸ ಮುಗಿದ ನಂತರ ಡ್ರಾಪ್​ ನೀಡುವ ನೆಪದಲ್ಲಿ ಮಹಿಳೆಯೊಂದಿಗೆ ಫುಲ್ ಕ್ಲೋಸ್ ಆಗಿದ್ದ.

ಆದರೆ, ಆ ಸಲುಗೆಯನ್ನು ದುರ್ಬಳಕೆ ಮಾಡಿಕೊಂಡ ಚಂದ್ರಶೇಖರ್​ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ. 

click me!