ದೂರದ ಗ್ರಹಕ್ಕೆ ಪಂಡಿತ್ ಜಸರಾಜ್ ಹೆಸರು: ದಿಗಂತದಲ್ಲಿ ಅಮರ ಈ ಸಂಗೀತ ಗುರು!

By Web DeskFirst Published Oct 10, 2019, 3:30 PM IST
Highlights

ಭಾರತೀಯ ಸಂಗೀತ ಲೋಕದಲ್ಲೊಂದು ಮಿನುಗು ತಾರೆ| ಭಾರತೀಯ ಸಂಗೀತ ಲೋಕದ ದಿಗ್ಗಜ ಪಂಡಿತ್ ಜಸರಾಜ್| ಅಪರೂಪದ ಗೌರವಕ್ಕೆ ಪಾತ್ರರಾದ ಪಂಡಿತ್ ಜಸರಾಜ್| ಪಂಡಿತ್ ಜಸರಾಜ್ ಹೆಸರು ಪಡೆದ ಸೌರಮಂಡಲದ ಪುಟ್ಟ ಗ್ರಹಕಾಯ| ಮಂಗಳ ಮತ್ತು ಗುರು ಗ್ರಹದ ಮಧ್ಯದಲ್ಲಿರುವ ಪ್ಲ್ಯಾನೆಟ್ 2006 VP32 (300128)ಗೆ ಪಂಡಿತ್ ಜಸರಾಜ್ ಹೆಸರು| ನವೆಂಬರ್ 11, 2006ರಲ್ಲಿ ಕಂಡು ಹಿಡಿಯಲಾಗಿದ್ದ ಗ್ರಹ| ಗ್ರಹಕಾಯಗಳಿಗೆ ಹೆಸರಿಸಲ್ಪಟ್ಟ ವಿಶ್ವದ ಅಮರ ಸಂಯೋಜಕರ ಪಟ್ಟಿಯಲ್ಲಿ ಪಂಡಿತ್ ಜಸರಾಜ್|

ನವದೆಹಲಿ(ಅ.10): ಸಾಧನೆ ಎಂಬ ಮೂರಕ್ಷರ ಬರೆದಷ್ಟು ಸುಲಭವಲ್ಲ. ನಿರ್ದಿಷ್ಟ ಕ್ಷೇತ್ರದಲ್ಲಿ ಸಾಧನೆಗೈಯುವುದೆಂದರೆ ಅದೊಂದು ತಪಸ್ಸೇ ಸರಿ.

ಅದರಲ್ಲೂ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಅಷ್ಟು ಸುಲಭವಲ್ಲ. ರಾಗ, ತಾಳಗಳ ಅಪೂರ್ವ ಸಂಗಮದಲ್ಲಿ ಮಿಂದೆದ್ದು ಸರಸ್ವತಿಯನ್ನು ಒಲಿಸಿಕೊಳ್ಳುವುದೆಂದರೆ ಜೀವನವನ್ನು ಪಾವನಗೊಳಿಸಿದಂತೆಯೇ ಸರಿ.

ಅದರಂತೆ ಭಾರತೀಯ ಸಂಗೀತ ಲೋಕದ ದಿಗ್ಗಜ, ಭಾರತೀಯ ಸಂಗೀತವನ್ನು ವಿಶ್ವದ ಮೂಲೆ ಮೂಲೆಗೆ ಕೊಂಡೊಯ್ದ ಅಪರೂಪದ ಸಂಗೀತ ಮಾಂತ್ರಿಕ ಪಂಡಿತ್ ಜಸರಾಜ್ ವಿಶಿಷ್ಟವಾದ ಹಾಗೂ ಅಷ್ಟೇ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ.

ಭಾರತೀಯ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ, ಅಂತರರಾಷ್ಟ್ರೀಯ ಖಗೋಳ ಒಕ್ಕೂಟ(IAU) ನಮ್ಮ ಸೌರಮಂಡಲದ ಗ್ರಹಕಾಯವೊಂದಕ್ಕೆ ಪಂಡಿತ್ ಜಸರಾಜ್ ಹೆಸರಿಟ್ಟಿದೆ.

ಮಂಗಳ ಮತ್ತು ಗುರು ಗ್ರಹದ ನಡುವಿನ ನಿರ್ವಾತ ಪ್ರದೇಶದಲ್ಲಿರುವ ಪುಟ್ಟ ಗ್ರಹವಾದ ಪ್ಲ್ಯಾನೆಟ್ 2006 VP32 (300128)ಗೆ ಪಂಡಿತ್ ಜಸರಾಜ್ ಎಂದು ನಾಮಕರಣ ಮಾಡಲಾಗಿದೆ.

ನವೆಂಬರ್ 11, 2006ರಲ್ಲಿ ಕಂಡು ಹಿಡಿಯಲಾಗಿದ್ದ ಈ ಗ್ರಹ ಇನ್ನು ಮುಂದೆ ಪಂಡಿತ್ ಜಸರಾಜ್ ಎಂದು ಕರೆಸಿಕೊಳ್ಳಲಿದೆ. ಗ್ರಹಕಾಯವೊಂದಕ್ಕೆ ಹೆಸರಿಸಲ್ಪಟ್ಟ ಮೊಟ್ಟ ಮೊದಲ ಭಾರತೀಯ ಸಂಗೀತ ದಿಗ್ಗಜ ಎಂಬ ಹೆಗ್ಗಳಿಕೆಗೆ ಜಸರಾಜ್ ಪಾತ್ರರಾಗಿದ್ದಾರೆ.

https://ssd.jpl.nasa.gov/sbdb.cgi?sstr=300128;old=0;orb=1;cov=0;log=0;cad=0#orb

ಈ ಮೂಲಕ ಗ್ರಹಕಾಯಗಳಿಗೆ ಹೆಸರಿಸಲ್ಪಟ್ಟ ವಿಶ್ವದ ಅಮರ ಸಂಯೋಜಕರ ಪಟ್ಟಿಯಲ್ಲಿ ಪಂಡಿತ್ ಜಸರಾಜ್ ಕೂಡ ಸೇರಿದ್ದಾರೆ. ಈ ಮೊದಲು ಆಸ್ಟ್ರೀಯಾದ ಮೊಜಾರ್ಟ್, ಜರ್ಮನಿಯ ಬಿಥೋವೆನ್ ಹಾಗೂ ಇಟಲಿಯ ಲುಸಿಯಾನೋ ಪವಾರೊಟ್ಟಿ ಈ ಗೌರವಕ್ಕೆ ಪಾತ್ರರಾಗಿರದ್ದರು.

click me!