ಪಿ. ಚಿದಂಬರಂ ಅವರಿಗೆ ಜನ್ಮದಿನದ ಶುಭಾಶಯ ಕೋರಿದ ಮೋದಿ/ ಸೋಶಿಯಲ್ ಮೀಡಿಯಾ ಮೂಲಕ ವಿಚಾರ ಬಹಿರಂಗ/ ತಮಿಳಿನಲ್ಲಿಯೇ ಶುಭಾಶಯ ಪತ್ರ ಕಳಿಸಿದ್ದ ಪ್ರಧಾನಿ
ನವದೆಹಲಿ[ಸೆ. 24] ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲು ಪಾಲಾಗಿರುವ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಅವರು ಜೈಲಿನಲ್ಲಿಯೇ ಈ ಸಾರಿ ಜನ್ಮದಿನ ಕಳೆದಿರುವ ವಿಚಾರ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.
ಪಿ. ಚಿದಂಬರಂ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿದ್ದ ಜನ್ಮದಿನದ ಶುಭಾಶಯ ತಿಳಿಸುವ ಪತ್ರ ಅವರ ಕೈಸೇರಿದೆ. ಈ ಬಗ್ಗೆ ಚಿದಂಬರಂ ಅವರೇ ಟ್ವೀಟ್ ಮಾಡಿದ್ದಾರೆ.
ಇದೆಲ್ಲ ಹೇಗೆ ಸಾಧ್ಯವಾಯಿತು ಎಂದು ತಲೆ ಕೆಡಿಸಿಕೊಳ್ಳಬೇಡಿ. ಪ್ರಧಾನಿ ತಮಿಳಿನಲ್ಲಿ ಕಳುಹಿಸಿರುವ ಶುಭಾಶಯ ಪತ್ರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಚಿದಂಬರಂ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಮಂಚವಿಲ್ಲದೇ ಜೈಲಿನಲ್ಲಿ ಚಿದುಗೆ ನಿದ್ರೆ ಇಲ್ಲದ ರಾತ್ರಿ!
'ನಿಮ್ಮ ಜನ್ಮದಿನಕ್ಕೆ ನನ್ನ ಹೃದಯಪೂರ್ವಕ ಶುಭಾಶಯಗಳನ್ನು ವ್ಯಕ್ತಪಡಿಸಲು ಹರ್ಷಿಸುತ್ತೇನೆ. ದೇವರು ನಿಮಗೆ ಆರೋಗ್ಯ ಕರುಣಿಸಲಿ’ ಎಂಬ ಅರ್ಥದಲ್ಲಿ ಬರೆದಿರುವ ಶುಭಾಶಯ ಪತ್ರವೀಗ ಸೋಶಿಯಲ್ ಮೀಡಿಯಾದಲ್ಲಿಯೂ ಹರಿದಾಡುತ್ತಿದೆ.
ಚಿದಂಬರಂ ಅವರು ಸೆ. 16ರಂದು 74ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಜನ್ಮದಿನವನ್ನೂ ಅವರು ತಿಹಾರ್ ಜೈಲಿನಲ್ಲಿಯೇ ಕಳೆದಿದ್ದಾರೆ. ಸಂತಸ ವ್ಯಕ್ತಪಡಿಸುತ್ತಲೇ ವ್ಯಂಗ್ಯದ ಪ್ರತಿಕ್ರಿಯೆ ನೀಡಿರುವ ಚಿದಂಬರಂ, ತಾವು ಜನರ ಸೇವೆ ಮುಂದುವರಿಸಲು ಇಚ್ಛಿಸುತ್ತೇನೆ ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳೆ ಅವಕಾಶ ನೀಡುತ್ತಿಲ್ಲ ಎಂದಿದ್ದಾರೆ.
என் பிறந்தநாளுக்குப் பிரதமர் மோடி அனுப்பிய வாழ்த்துச் செய்தியை பெற்று வியப்பு கலந்த மகிழ்ச்சியடைந்தேன். பிரதமருக்கு நன்றி. pic.twitter.com/HGbWnkCrim
— P. Chidambaram (@PChidambaram_IN)