ವಿವಿಧ ದೇಶಗಳಲ್ಲಿದೆ 13,865 ಅಣ್ವಸ್ತ್ರಗಳು: ಭಾರತದಲ್ಲಿ ಯಥಾಸ್ಥಿತಿ, ಚೀನಾದಲ್ಲಿ ಏರಿಕೆ!

By Web Desk  |  First Published Jun 18, 2019, 11:01 AM IST

ವಿವಿಧ ದೇಶಗಳಲ್ಲಿದೆ 13865 ಅಣ್ವಸ್ತ್ರಗಳು!| 2018ಕ್ಕೆ ಹೋಲಿಸಿದರೆ ಅಣ್ವಸ್ತ್ರಗಳ ಸಂಖ್ಯೆ ಗಣನೀಯ ಇಳಿಕೆ| ಅಣ್ವಸ್ತ್ರ ಇಳಿದರೂ, ಅತ್ಯಾಧುನಿಕ ಅಸ್ತ್ರ ಅಭಿವೃದ್ಧಿ ನಿಂತಿಲ್ಲ| ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ ವರದಿ| ಭಾರತ ಯಥಾಸ್ಥಿತಿ, ಪಾಕ್‌, ಚೀನಾದಲ್ಲಿ ಏರಿಕೆ

 

ಸ್ಟಾಕ್‌ಹೋಮ್‌[ಜೂ.18]: 2018ಕ್ಕೆ ಹೋಲಿಸಿದರೆ ವಿಶ್ವದ ವಿವಿಧ ದೇಶಗಳ ಬಳಿ ಇರುವ ಅಣ್ವಸ್ತ್ರಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದರು, ಈಗಲೂ ಅಣ್ವಸ್ತ್ರ ಹೊಂದಬಲ್ಲ ಸಾಮರ್ಥ್ಯ ದೇಶಗಳ ಬಳಿ ಮನುಕುಲವನ್ನೇ ನಾಶ ಮಾಡಬಹುದಾದ 13865 ಅಣ್ವಸ್ತ್ರಗಳಿವೆ ಎಂದು ವರದಿಯೊಂದು ಹೇಳಿದೆ. ಇದೇ ವೇಳೆ ಮುಂದುವರೆದ ದೇಶಗಳು ಅಣ್ವಸ್ತ್ರಗಳ ಸಂಖ್ಯೆಯಲ್ಲಿ ಕಡಿತ ಮಾಡಿದ್ದರೂ, ಮತ್ತೊಂದೆಡೆ ಅತ್ಯಾಧುನಿ ಅಸ್ತ್ರ ಅಭಿವೃದ್ಧಿಪಡಿಸುವ ಕೆಲಸವನ್ನು ಮುಂದುವರೆಸಿವೆ ಎಂದು ವರದಿ ಹೇಳಿದೆ.

ಸ್ಟಾಕ್‌ಹೋಮ್‌ನ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿರುವ ಅನ್ವಯ, 2019ರ ವರ್ಷಾರಂಭದ ವೇಳೆ ಅಮೆರಿಕ, ರಷ್ಯಾ, ಬ್ರಿಟನ್‌, ಫ್ರಾನ್ಸ್‌, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್‌ ಮತ್ತು ಉತ್ತರ ಕೊರಿಯಾ ದೇಶಗಳ ಬಳಿ ಅಂದಾಜು 13865 ಅಣ್ವಸ್ತ್ರಗಳ ಸಂಗ್ರಹವಿದೆ. 2018ಕ್ಕೆ ಹೋಲಿಸಿದರೆ ಅಣ್ವಸ್ತ್ರಗಳ ಪ್ರಮಾಣದಲ್ಲಿ 600ರಷ್ಟುಇಳಿಕೆಯಾಗಿದೆ.

Tap to resize

Latest Videos

undefined

ಈ ನಡುವೆ ವಿವಿಧ ದೇಶಗಳು ಅಣ್ವಸ್ತ್ರಗಳ ಸಂಗ್ರಹ ಕಡಿಮೆ ಮಾಡಿದ್ದರೂ, ಅದೇ ಅವಧಿಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿವೆ. ವಿಶ್ವವು ಕಡಿಮೆ ಅಣ್ವಸ್ತ್ರಗಳತ್ತ ಜೊತೆಗೆ ಹೊಸ ಅಸ್ತ್ರಗಳನ್ನು ಕಾಣುವಂತಾಗಿದೆ ಎಂದು ವರದಿ ಬಿಡುಗಡೆ ಮಾಡಿದ ಸ್ಟಾಕ್‌ಹೋಮ್‌ನ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ ಅಣ್ವಸ್ತ್ರ ನಿಯಂತ್ರಣದ ಯೋಜನೆಯ ನಿರ್ದೇಶಕ ಶನೋನ್‌ ಕೈಲಿ ಹೇಳಿದ್ದಾರೆ.

ಭಾರೀ ಇಳಿಕೆ:

1980ರ ಮಧ್ಯಭಾಗದಲ್ಲಿ ವಿಶ್ವದ ವಿವಿಧ ದೇಶಗಳ ಬಳಿ 70000ಕ್ಕೂ ಹೆಚ್ಚು ಅಣ್ವಸ್ತ್ರಗಳಿದ್ದವು. ಆದರೆ ವಿಶ್ವಸಂಸ್ಥೆಯ ಸತತ ಪ್ರಯತ್ನದ ಫಲವಾಗಿ ಅವುಗಳ ಸಂಖ್ಯೆಯಲ್ಲ ಇಳಿಕೆ ದಾಖಲಾಗಿದೆ.

ಇಳಿಕೆ ಹೇಗೆ?

ವಿಶ್ವದ ಒಟ್ಟು ಅಣ್ವಸ್ತ್ರಗಳ ಪೈಕಿ ಶೇ.90ರಷ್ಟುಅಮೆರಿಕ ಮತ್ತು ರಷ್ಯಾ ಬಳಿ ಇವೆ. ಈ ಎರಡೂ ದೇಶಗಳು 2010ರಲ್ಲಿ ಪರಸ್ಪರ ಅಣ್ವಸ್ತ್ರ ಸಂಗ್ರಹ ಕಡಿತ ಒಪ್ಪಂದಕ್ಕೆ ಸಹಿ ಹಾಕಿದ್ದವು. ಹೀಗಾಗಿ ಒಟ್ಟಾರೆ ಅಣ್ವಸ್ತ್ರಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 2021ಕ್ಕೆ ಈ ಒಪ್ಪಂದದ ಅವಧಿ ಮುಗಿಯಲಿದೆ. ಒಪ್ಪಂದ ಅವಧಿ ಮುಗಿಯುತ್ತಾ ಬಂದಿದ್ದರೂ, ಹೊಸದಾಗಿ ಒಪ್ಪಂದ ಮಾಡಿಕೊಳ್ಳುವ ಅಥವಾ ನವೀಕರಣದ ಬಗ್ಗೆ ಉಭಯ ದೇಶಗಳು ಯಾವುದೇ ಮಾತುಕತೆ ಆರಂಭಿಸದಿರುವುದು ಆತಂಕಕ್ಕೆ ಕಾರಣವಾಗಿದೆ.

ಭಾರತ ಯಥಾಸ್ಥಿತಿ, ಪಾಕ್‌, ಚೀನಾದಲ್ಲಿ ಏರಿಕೆ

2018ರ ಅಣ್ವಸ್ತ್ರಗಳ ಸಂಖ್ಯೆಗೆ ಹೋಲಿಸಿದರೆ 2019ರಲ್ಲಿ ಭಾರತ ಯಥಾಸ್ಥಿತಿ ಕಾಪಾಡಿಕೊಂಡು ಬಂದಿದೆ. ಆದರೆ ನೆರೆಯ ಚೀನಾ ಮತ್ತು ಪಾಕಿಸ್ತಾನಗಳು ತಮ್ಮ ಅಣ್ವಸ್ತ್ರಗಳ ಪ್ರಮಾಣ ಏರಿಕೆ ಮಾಡಿದೆ ಎಂದು ವರದಿ ಹೇಳಿದೆ.

2018ರಲ್ಲಿ ಭಾರತದ ಬಳಿಕ 130-140 ಅಣ್ವಸ್ತ್ರಗಳಿದ್ದವು. 2019ರಲ್ಲೇ ಅದೇ ಪ್ರಮಾಣ ಮುಂದುವರೆದಿದೆ. ಆದರೆ 2018ರಲ್ಲಿ 140-150 ಅಣ್ವಸ್ತ್ರಗಳ ಹೊಂದಿದ್ದ ಪಾಕಿಸ್ತಾನ ಅದನ್ನು 150-160ಕ್ಕೆ ಹೆಚ್ಚಿಸಿಕೊಂಡಿದೆ. ಅದೇ ರೀತಿ ಚೀನಾ 2018ರಲ್ಲಿ 280 ಅಣ್ವಸ್ತ್ರಗಳ ಹೊಂದಿದ್ದು, 2019ರಲ್ಲಿ ಅದು 290ಕ್ಕೆ ಹೆಚ್ಚಿದೆ. ಮೂರೂ ದೇಶಗಳ ಅಣ್ವಸ್ತ್ರ ಸಿದ್ಧಪಡಿಸಲು ಬೇಕಾದ ವಸ್ತುಗಳ ತಯಾರಿಕೆಯನ್ನು ಹೆಚ್ಚಿಸಿಕೊಂಡಿವೆ. ಇದು ಮುಂದಿನ ಒಂದು ದಶಕಗಳಲ್ಲಿ ಈ ವಲಯದಲ್ಲಿ ಅಣ್ವಸ್ತ್ರಗಳ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ವರದಿ ತಿಳಿಸಿದೆ.

ದಾಳಿಗೆ ಸಜ್ಜಾಗಿರುವ ಸ್ಥಿತಿಯಲ್ಲಿರುವ ಅಣ್ವಸ್ತ್ರಗಳ ಸಂಖ್ಯೆ: 3750

ಸಂಗ್ರಹಿಸಿರುವ, ಕಾಯ್ದಿಟ್ಟಿರುವ ಅಣ್ವಸ್ತ್ರಗಳ ಸಂಖ್ಯೆ: 10115

 

click me!