ಎಣ್ಣೆ ತುಂಬ್ಕೊಳ್ರೋ: ಗಾಯಾಳು ಬಿಟ್ಟು ಎಣ್ಣೆಗಾಗಿ ಬಡಿದಾಟ!

Sep 16, 2018, 12:12 PM IST

ಬಾಗಲಕೋಟೆ(ಸೆ.16): ನಿಂತಿದ್ದ ಎಣ್ಣೆ ತುಂಬಿದ್ದ ಕ್ಯಾಂಟೇನರ್ ಗೆ ಟಾಟಾ ಸುಮೋ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಇಡೀ ರಸ್ತೆಯಲ್ಲಿ ಅಡುಗೆ ಎಣ್ಣೆ ಸೋರಿಕೆಯಾಘಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಇಲ್ಲಿನ ಇಳಕಲ್-ಹುನಗುಂದ ನಡುವಿನ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಘಟನೆ ನಡೆದಿದ್ದು, ಸೋರುತ್ತಿರುವ ಅಡುಗೆ ಎಣ್ಣೆಯನ್ನು ತುಂಬಿಕೊಳ್ಳಲು ಜನ ಮುಗಿ ಬಿದ್ದಿದ್ದಾರೆ. ಕೊಡ, ಬಕೇಟ್, ಕ್ಯಾನ್ನಲ್ಲಿ ಅಡುಗೆ ಎಣ್ಣೆ ತುಂಬಿಕೊಳ್ಳುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಆಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..