ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಗೆ ಆಗ್ರಹ

By Web DeskFirst Published Sep 23, 2018, 3:14 PM IST
Highlights

ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೋಲಾಂಡೆ ಅವರ ಹೇಳಿಕೆ ಬಳಿಕ  ರಫೇಲ್ ಪ್ಲೇನ್ ಗಳನ್ನು ಖರೀದಿ ಮಾಡಲು ಮಾಡಿಕೊಂಡ ಡೀಲ್ ನಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದು, ಇದೇ ವೇಳೆ ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. 

ನವದೆಹಲಿ :  ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಇದೀಗ ವಿಪಕ್ಷಗಳಿಂದ ಒತ್ತಡ ಕೇಳಿಬರುತ್ತಿದೆ. 

ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೋಲಾಂಡೆ ಅವರ ಹೇಳಿಕೆ ಬಳಿಕ ರಫೇಲ್ ಪ್ಲೇನ್ ಗಳನ್ನು ಖರೀದಿ ಮಾಡಲು ಮಾಡಿಕೊಂಡ ಡೀಲ್ ನಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದು, ಇದೇ ವೇಳೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿವೆ. 

58 ಸಾವಿರ ಕೋಟಿ ರು. ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದದಲ್ಲಿ ಭಾರತ ಸರ್ಕಾರದ ಅಣತಿಯ ಮೇರೆಗೇ ರಿಲಯನ್ಸ್ ಕಂಪನಿಯನ್ನು ಭಾರತೀಯ ಪಾಲುದಾರನನ್ನಾಗಿ ಮಾಡಿಕೊಳ್ಳಲಾಯಿತು, ನಮಗೆ ಬೇರೆ ಆಯ್ಕೆಯೇ ಇರಲಿಲ್ಲ ಎಂಬ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಹೇಳಿಕೆಯನ್ನು ಭಾರತ, ಫ್ರಾನ್ಸ್ ಹಾಗೂ ರಫೇಲ್ ಯುದ್ಧ ವಿಮಾನ ತಯಾರಿಸುವ ಡಸಾಲ್ಟ್ ಕಂಪನಿ ಸ್ಪಷ್ಟವಾಗಿ ಅಲ್ಲಗಳೆದಿತ್ತು.

‘ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಕಂಪನಿ ಡಸಾಲ್ಟ್ ಕಂಪನಿಯ ಭಾರತೀಯ ಪಾಲುದಾರನಾಗಿದ್ದರ ಹಿಂದೆ ನಮ್ಮ ಯಾವುದೇ ಪಾತ್ರ ಇಲ್ಲ. ಈ ಹಿಂದೆ ಕೂಡ ಹೇಳಿದ್ದೇವೆ, ಪದೇ ಪದೇ ಹೇಳುತ್ತಲೇ ಬಂದಿದ್ದೇವೆ. ಆದಾಗ್ಯೂ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗುತ್ತಿದೆ’ ಎಂದು ರಕ್ಷಣಾ ಸಚಿವಾಲಯ ಶನಿವಾರ ಸ್ಪಷ್ಟನೆ ನೀಡಿತ್ತು.

 ಮತ್ತೊಂದೆಡೆ, ‘ರಫೇಲ್ ಯುದ್ಧ ವಿಮಾನದ ಭಾರತೀಯ ಪಾಲುದಾರ ಕಂಪನಿಯ ಆಯ್ಕೆ ವಿಚಾರದಲ್ಲಿ ತಾನು ಭಾಗಿಯಾಗಿಲ್ಲ. ಭಾರತೀಯ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವ ಪರಿಪೂರ್ಣ ಸ್ವಾತಂತ್ರ್ಯ ಫ್ರೆಂಚ್ ಕಂಪನಿಗಳಿಗೆ ಇದೆ’ ಎಂದು ಫ್ರಾನ್ಸ್ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿತ್ತು.

click me!
Last Updated Sep 23, 2018, 3:14 PM IST
click me!