ಶಾಸಕರ ಆದಾಯದ ಲೆಕ್ಕ, ಕರ್ನಾಟಕದ ಸ್ಥಾನ ಯಾವುದು?

By Web DeskFirst Published Sep 18, 2018, 7:54 PM IST
Highlights

ಶಾಸಕರ ಸಂಬಳದ ಬಗ್ಗೆ ವರ್ಷದ ಹಿಂದೆ ಚರ್ಚೆಗಳು ನಡೆದಿದ್ದವು. ಹಾಗಾದರೆ ನಿಜಕ್ಕೂ ದೇಶದಲ್ಲಿ ಅತಿ ಶ್ರೀಮಂತ ಶಾಸಕರು ಯಾರು? ಎಂಬುದಕ್ಕೆ ಸಮೀಕ್ಷೆಯೊಂದು ಉತ್ತರ ಕೊಟ್ಟಿದೆ.

ಬೆಂಗಳೂರು[ಸೆ.18] ದೇಶದ ವಿವಿಧ ರಾಜ್ಯಗಳಲ್ಲಿ ಹಾಲಿ ಶಾಸಕರು ಗಳಿಸುವ ವಾರ್ಷಿಕ ಆದಾಯದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವವರು ಬೇರೆ ಯಾರು ಅಲ್ಲ, ನಮ್ಮ ಕರ್ನಾಟಕದ ಶಾಸಕರು!

ಹೌದು.. ಎಸೋಸಿಯೇಷನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾಮ್ಸ್‌' ಮತ್ತು "ನ್ಯಾಷನಲ್‌ ಇಲೆಕ್ಷನ್‌ ವಾಚ್‌' ಸಂಘಟನೆ ಜಂಟಿಯಾಗಿ ನಡೆಸಿರುವ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದ್ದು ಕರ್ನಾಟಕ ಫಸ್ಟ್ ಇದ್ದರೆ  ಚತ್ತೀಸ್ ಗಡ ಲಾಸ್ಟ್ ಇದೆ.

ವರದಿ ಹೇಳುವಂತೆ  ದೇಶದ ಪ್ರಕಾರ ಪ್ರತಿ ಶಾಸಕನ ಸರಾಸರಿ ಆದಾಯ ವರ್ಷಕ್ಕೆ 24.59 ಲಕ್ಷ ರೂ. ಇದೆ. ಕರ್ನಾಟಕದ ಶಾಸಕಕರ ಸರಾಸರಿ ವರ್ಷಕ್ಕೆ ಸರಾಸರಿ 1 ಕೋಟಿ ರೂ.  ಇದೆ. ಚತ್ತೀಸ್‌ಗಡದ ಶಾಸಕರು ವಾರ್ಷಿಕವಾಗಿ ಕನಿಷ್ಠ 5.4 ಲಕ್ಷ ರೂ. ಆದಾಯ ಪಡೆದುಕೊಳ್ಳುತ್ತಿದ್ದಾರೆ.

ಅನಕ್ಷರಸ್ಥರು ಎಂದು ಹೇಳಿಕೊಂಡವರೂ ವಾರ್ಷಿಕವಾಗಿ 9.31 ಲಕ್ಷ ರೂ. ಆದಾಯ ಪಡೆಯುತ್ತಾರೆ. ಅರ್ಧಕ್ಕಿಂತ ಹೆಚ್ಚು ಶಾಸಕರು ತಮ್ಮ ವೃತ್ತಿಯನ್ನು ಕೃಷಿ ಅಥವಾ ವ್ಯಾಪಾರ ಎಂದು ಘೋಷಿಸಿಕೊಂಡಿದ್ದಾರ

4,086 ಶಾಸಕರ ಪೈಕಿ 3,145 ಶಾಸಕರು ಸಲ್ಲಿಸಿರುವ ಅಫಿಡವಿಟ್‌ಗಳನ್ನು ಪರಿಶೀಲಿಸಿದ ಬಳಿಕ ಈ ವರದಿ ಸಿದ್ಧಗೊಳಿಸಲಾಗಿದೆ ಎಂದು "ಎಸೋಸಿಯೇಷನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾಮ್ಸ್‌ì' ಮತ್ತು "ನ್ಯಾಷನಲ್‌ ಇಲೆಕ್ಷನ್‌ ವಾಚ್‌' ಹೇಳಿಕೊಂಡಿವೆ.  ಆದರೆ 941 ಶಾಸಕರು ತಮ್ಮ ಆದಾಯವನ್ನೇ ಘೋಷಣೆ ಮಾಡಿಲ್ಲ!

click me!
Last Updated Sep 19, 2018, 9:29 AM IST
click me!