"ಗುಡ್ಡದ ಹುಲಿ ಗಡಬಡಿಸಲಿಕ್ಕೆ ಹತ್ತಿತು.ಕಾಂಗ್ರೆಸ್, ಬಿಜೆಪಿ ನಾ ಮುಂದು ತಾ ಮುಂದು ಎಂದು ಕಚ್ಚಾಟ ನಡೆಯಿತು. ಕಾಂಗ್ರೆಸ್ ಕಲ್ಲಾಗಿ ನೋಡುತ್ತಾ ನಿಂತಿತು... ಬಿಜೆಪಿ ಬೆಲ್ಲವಾಯ್ತು, ಬೇವಾಯ್ತು.. ಕಹಿಯಾಯ್ತಲೇ ಗಾಣಮಿನಿ.. ಇದು ವಿಜಯಪುರ ಜಿಲ್ಲೆಯ ಮಖಣಾಪುರ ಗ್ರಾಮದ ಕಲ್ಲೂರು ಸಿದ್ಧ ನುಡಿದಿರುವ ಭವಿಷ್ಯ ವಾಣಿ.
ವಿಜಯಪುರ (ಏ.12) "ಗುಡ್ಡದ ಹುಲಿ ಗಡಬಡಿಸಲಿಕ್ಕೆ ಹತ್ತಿತು.ಕಾಂಗ್ರೆಸ್, ಬಿಜೆಪಿ ನಾ ಮುಂದು ತಾ ಮುಂದು ಎಂದು ಕಚ್ಚಾಟ ನಡೆಯಿತು. ಕಾಂಗ್ರೆಸ್ ಕಲ್ಲಾಗಿ ನೋಡುತ್ತಾ ನಿಂತಿತು... ಬಿಜೆಪಿ ಬೆಲ್ಲವಾಯ್ತು, ಬೇವಾಯ್ತು.. ಕಹಿಯಾಯ್ತಲೇ ಗಾಣಮಿನಿ.. ಇದು ವಿಜಯಪುರ ಜಿಲ್ಲೆಯ ಮಖಣಾಪುರ ಗ್ರಾಮದ ಕಲ್ಲೂರು ಸಿದ್ಧ ನುಡಿದಿರುವ ಭವಿಷ್ಯ ವಾಣಿ.
ಈ ಭವಿಷ್ಯವಾಣಿಯ ಪ್ರಕಾರ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ತಿಕ್ಕಾಟದಲ್ಲಿ ಕಾಂಗ್ರೆಸ್ ಕಲ್ಲಾಗಿ ನಿಂತು ನೋಡುವ ಪರಿಸ್ಥಿತಿ ಬರುತ್ತದೆ. ಬಿಜೆಪಿ ಬೆಲ್ಲವಾಗುತ್ತದೆ ಕೊನೆಗೆ ಕಹಿಯಾಗುತ್ತದೆ ಎಂದು ಹೇಳುವ ಮೂಲಕ ಎರಡೂ ಪಕ್ಷಗಳಿಗೆ ಭವಿಷ್ಯದ ಮೂಲಕ ಎಚ್ಚರಿಕೆ ನೀಡಿರುವ ಕಲ್ಲೂರು ಸಿದ್ಧ.
'ರಾಜನೇ ಮತ್ತೆ ರಾಜನಾಗುವ ಯೋಗ..' ಗುಳೇದಗುಡ್ಡದ ಯುಗಾದಿ ಭವಿಷ್ಯವಾಣಿ! ಮತ್ತೊಮ್ಮೆ ಪ್ರಧಾನಿಯಾಗ್ತಾರಾ ಮೋದಿ?
ಯಾರು ಕಲ್ಲೂರು ಸಿದ್ಧ?
ಕಲ್ಲೂರು ಸಿದ್ದ ಸಾಕ್ಷಾತ್ ಶಿವನ ಸೇವಕನಾಗಿದ್ದಾನೆ. ಪ್ರತಿವರ್ಷ ಯುಗಾದಿ ಬಳಿಕ ಕಲ್ಲೂರು ಸಿದ್ಧನ ಭವಿಷ್ಯ ನುಡಿಯುತ್ತಾನೆ. ಶಿವನೇ ಕಲ್ಲೂರು ಸಿದ್ಧನ ಮೂಲಕ ಭವಿಷ್ಯ ಹೇಳಿಸುತ್ತಾನೆ ಎಂಬ ನಂಬಿಕೆ ಜನರದ್ದು. ಹೀಗಾಗಿ ಕಲ್ಲೂರು ಸಿದ್ಧನ ಭವಿಷ್ಯ ಕೇಳಲು ಜನರು ಕಾತುರದಿಂದ ಕಾಯುತ್ತಾರೆ. ನಡುರಾತ್ರಿಯಲ್ಲಿ ಮುಖಕ್ಕೆ ಕೆಂಪು ಮುಖವಾಡ ಧರಿಸಿ ನುಡಿಯುವ ಭವಿಷ್ಯವಾಣಿಗೆ ಸಾವಿರಾರು ಜನರು ಸೇರುತ್ತಾರೆ. ರಾಜಕೀಯ, ಮಳೆ ಬೆಳೆ ಅವಘಡ ಸೇರಿದಂತೆ ರಾಜ್ಯ ರಾಷ್ಟ್ರದ ಬೆಳವಣಿಗೆ ಬಗ್ಗೆ ಭವಿಷ್ಯ ನುಡಿಯುವ ಕಲ್ಲೂರು ಸಿದ್ಧ. ವಿಶೇಷವೆಂದರೆ ಕಾಂಗ್ರೆಸ್, ಬಿಜೆಪಿ ಇತರೆ ರಾಜಕೀಯ ಪಕ್ಷಗಳ ಹೆಸರು ಸಮೇತವಾಗಿಯೇ ಭವಿಷ್ಯ ನುಡಿಯಲಾಗುತ್ತದೆ. ಸಾಕ್ಷಾತ್ ಪರಶಿವನ ನಾಲಗೆ ಮೇಲೆ ಕುಳಿತು ನುಡಿ ಕೊಡುತ್ತಾನೆ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ.
ಈ ಬಾರಿ ಮಳೆಯ ಭವಿಷ್ಯದ ಬಗ್ಗೆಯೂ ನುಡಿದಿದ್ದು, ಮುಂಗಾರು ಮಳೆ ಉತ್ತಮವಾಗಲಿದೆ. ಉತ್ತಮ ಬೆಳೆ ಬರಲಿದೆ ಎಂಬ ಬಗ್ಗೆ ಕಲ್ಲೂರು ಸಿದ್ಧ ಭವಿಷ್ಯ ನುಡಿದಿರುವುದು ಈ ಭಾಗದ ರೈತರು ಸಂತಸಗೊಂಡಿದ್ದಾರೆ.