ಅಮರ್ ಜವಾನ್ ಜ್ಯೋತಿಗೆ ಕಡೆಯ ಗಣರಾಜ್ಯ ನಮನ?

By Web DeskFirst Published 18, Jan 2019, 9:10 AM IST
Highlights

ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಮಡಿದ ಸೈನಿಕರಿಗೆ ಗಣರಾಜ್ಯ ದಿನದಂದು ಗೌರವ ಕೊಡುವುದು ಸಂಪ್ರದಾಯ | ಈ ವರ್ಷದಿಂದ ಈ ಸಂಪ್ರದಾಯಕ್ಕೆ ಕೊನೆ? 

ನವದೆಹಲಿ (ಜ. 18): ಗಣರಾಜ್ಯೋತ್ಸವದ ದಿನ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ಇಲ್ಲಿನ ಇಂಡಿಯಾ ಗೇಟ್ ಬಳಿ 1972 ರಲ್ಲಿ ನಿರ್ಮಾಣಗೊಂಡ ಅಮರ್ ಜವಾನ್ ಜ್ಯೋತಿ ಸ್ಮಾರಕ
ದಲ್ಲೇ ಗೌರವ ಸಲ್ಲಿಸುವುದು ಇದುವರೆಗೆ ನಡೆದ ಸಂಪ್ರದಾಯ.

ಆದರೆ 2020 ರಿಂದ ಈ ಸಂಪ್ರದಾಯದಲ್ಲಿ ಬದಲಾವಣೆ ಸಾಧ್ಯತೆ ಇದೆ. ಇದುವರೆಗೆ ಅಮರ್‌ಜ್ಯೋತಿ ಸ್ಮಾರಕದ ಬಳಿ ನಡೆಯುತ್ತಿದ್ದ ಗೌರವ ನಮನ ಕಾರ್ಯಕ್ರಮ ಇನ್ನು ಮುಂದೆ ಇಂಡಿಯಾ ಗೇಟ್ ಬಳಿ ನೂತನವಾಗಿ ನಿರ್ಮಾಣಗೊಂಡ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ನಡೆಯುವ ಸಾಧ್ಯತೆ ಇದೆ.

ನರೇಂದ್ರ ಮೋದಿ ನೇತೃ ತ್ವದ ಬಿಜೆಪಿ ಸರ್ಕಾರ ಹೊಸ ಸ್ಮಾರಕ ನಿರ್ಮಾಣಕ್ಕೆ ನಿರ್ಧಾರ ತೆಗೆದುಕೊಂಡು, ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದೆ. ಈ ವರ್ಷ ಗಣರಾಜ್ಯೋತ್ಸವದ ದಿನದಂದೇ ಉದ್ಘಾಟಿಸಿ ರಾಷ್ಟ್ರಕ್ಕೆ ಅರ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯದ ಹೇಸರು ಹೇಳಲು ಇಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

 

Last Updated 18, Jan 2019, 9:25 AM IST