ಸುಲಭವಾಗಿ ದುಡ್ಡು ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

 |  First Published Apr 25, 2018, 1:26 PM IST

ಎಷ್ಟು ದುಡಿದರೂ ಉಳಿಸ್ಲಿಕ್ಕೇ ಆಗೋಲ್ಲ ಎಂಬುವುದು ಎಲ್ಲರ ದೂರು. ದುಡಿದ ಹಣ ಎಲ್ಲಿ ಹೋಗುತ್ತೆ, ಹೇಗೆ ಖರ್ಚಾಗುತ್ತೆ ಎಂಬ ಲೆಕ್ಕವೇ ಬಹುತೇಕರಿಗೆ ಸಿಗೋಲ್ಲ. ಆದರೆ, ದುಡ್ಡಿನ ವಿಷಯದಲ್ಲಿ ಶಿಸ್ತನ್ನು ರೂಢಿಸಿಕೊಳ್ಳುವುದನ್ನು ಕಲಿಯಬೇಕು. ಅದು ಹೇಗೆ ಸಾಧ್ಯ? ಓದಿ ಈ ಲೇಖನವನ್ನು...


ಯಾಕೋ ಕೈಯಲ್ಲಿ ದುಡ್ಡೇ ಉಳಿಯೋಲ್ಲ. ಇದು ಎಲ್ಲರೂ ಹೇಳೋ ಸಾಮಾನ್ಯವಾದ ಮಾತು. ಆದರೆ, ದುಡ್ಡನ್ನು ಸರಿಯಾದ ಯೋಜನೆ ಮಾಡಿ ಖರ್ಚು ಮಾಡಿದರೆ, ಜೀವನದಲ್ಲಿ ಅಂದು ಕೊಂಡಿದ್ದನ್ನು ಸಾಧಿಸಬಹುದು. ಇಲ್ಲಿದೆ ಹಣ ಉಳಿಸಲು ಕೆಲವು ಟಿಪ್ಸ್...
- ಸಾಧ್ಯವಾದಷ್ಟು ಸಾಲ ಮಾಡಿ ಆಸ್ತಿ ಕೊಳ್ಳುವುದನ್ನು ನಿಲ್ಲಿಸಿ. ಸಾಲ ಮಾಡಿದರೂ ಸೂಕ್ತವಾಗಿ ತೀರಿಸುವಷ್ಟು ನಿಮ್ಮ ಆದಾಯವಿರುವಂತೆ ನೋಡಿಕೊಳ್ಳಿ. ಹಣದ ಹರಿವು ಹೇಗಿದೆ ನೋಡಿಕೊಳ್ಳಿ. ಆಸ್ತಿ ಕೊಂಡರೂ, ಅದಕ್ಕಿಂತ ಹೆಚ್ಚಿನ ಮೌಲ್ಯದ ಸಾಲ ನಿಮ್ಮದಾಗಬಾರದು.
- ಶೇ.15-20ರಷ್ಟು ಆದಾಯವನ್ನು ಮೊದಲ ವೇತನಿದಿಂದಲೇ ಉಳಿಸಲು ಯತ್ನಿಸಿ.
-  ದಿನಾ ಬಳಸೋಲ್ಲವೆಂದರೆ ಕಾರನ್ನು ಕೊಳ್ಳಲು ಹೋಗಬೇಡಿ.
- ಮ್ಯೂಚುಯಲ್ ಫಂಡ್‌ ಮೇಲೆ ಹೂಡಿಕೆ ಮಾಡುವಾಗ ಮಾರುಕಟ್ಟೆ ರಿಸ್ಕ್ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ.
- ಮದುವೆ, ಮುಂಜಿಯಂಥ ಕಾರ್ಯಕ್ರಮಗಳನ್ನು ಆದಷ್ಟು ಸರಳವಾಗಿ ಮಾಡಿ.
- ನಿಮ್ಮ ಆಸ್ತಿಯ ಶೇ.20ರಷ್ಟು ಭಾಗವನ್ನು ಅಗತ್ಯ ಬಿದ್ದಾಗ ಬಳಸುವಂತಿರಬೇಕು.
- ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡರೆ ಬ್ಯಾಂಕಿನಲ್ಲಿ ಠೇವಣಿ ಇಡುವುದು ವೇಸ್ಟ್. ಸೇವಿಂಗ್ಸ್ ಬ್ಯಾಂಕ್ ಅಕೌಂಟ್‌ನಲ್ಲಿ ದೊಡ್ಡ ಮೊತ್ತದ ಠೇವಣಿ ಇಡಬೇಡಿ.
- ಷೇರಿನ ಮೇಲೆ ಬಂಡವಾಳ ಹೂಡುವುದಾದರೆ, ಮಾರಕಟ್ಟೆ ಮೇಲೆ ಹದ್ದಿನ ಕಣ್ಣಿಡಬೇಕು.
- ಷೇರಿನ ಮೇಲೆ ಹೂಡಿಕೆ ಮಾಡಿದ್ದರೆ, ಅದಕ್ಕಾಗಿಯೇ ಬೇರೆ ಖಾತೆಯನ್ನು ನಿರ್ವಹಿಸಿ. ಇದರಿಂದ ನೀವು ಮಾಡಿರುವ ವೆಚ್ಚ ಮತ್ತು ಲಾಭದ ಮೇಲೆ ಸ್ಪಷ್ಟ ಲೆಖ್ಖ ಸಿಗುತ್ತದೆ.
- ಕಾರು ಅಥವಾ ಮನೆ ಯಾವತ್ತೂ ಮನುಷ್ಯನನ್ನು ಶ್ರೀಮಂತಗೊಳಿಸುವುದಿಲ್ಲ. ಆದರೆ, ಏನು ಉಳಿಸಿದರೆ, ಎಲ್ಲಿ ಹೂಡಿಕೆ ಮಾಡಿದ್ದೀರಿ ಎಂಬುವುದು ಮುಖ್ಯ.
- ಹೂಡಿಕೆಗೆ ವಿಮೆ ಒಳ್ಳೆಯ ಆಯ್ಕೆಯಲ್ಲ. ಇದು ರಿಸ್ಕ್ ಮ್ಯಾನೇಜ್‌ಮೆಂಟ್ ಟೂಲ್ ಅಷ್ಟೆ.
- ಕ್ರೆಡಿಟ್ ಕಾರ್ಡ್ ಅನ್ನು ಅನಗತ್ಯವಾಗಿ ಬಳಸಬೇಡಿ. ಅಗತ್ಯಕ್ಕೆ ತಕ್ಕಂತೆ ಇದನ್ನು ಬಳಸಬೇಕೇ ಹೊರತು, ಆಸೆಗಳನ್ನು ಪೂರೈಸಿಕೊಳ್ಳಲು ಉಪಯೋಗಿಸಬಾರದು.
- ಸಾಯೋ ಮುಂಚೆ ಎಲ್ಲ ಕ್ರೆಡಿಟ್ ಕಾರ್ಡ್‌ಗಳನ್ನು ಕ್ಯಾನ್ಸಲ್ ಮಾಡಿ. ಅಥವಾ ನಿಮ್ಮ ಕುಟುಂಬಕ್ಕೆ ಖಾತೆ, ಕ್ರೆಡಿಟ್ ಕಾರ್ಡ್ಸ್, ಸಾಲ, ಉಳಿತಾಯ ಎಲ್ಲ ವಿವರಗಳು ಗೊತ್ತಿರಲಿ.
- ನಿಮ್ಮ ಮೇಲೆ ಮೊದಲು ಹೂಡಿಕೆ ಮಾಡಿಕೊಳ್ಳಿ, ನಂತರ ಉಳಿದರ ಮೇಲೆ ಹೂಡಲು ಚಿಂತಿಸಿ.
- ಆದಾಯ ಹಾಗೂ ಉಳಿತಾಯ ಸೂಕ್ತವಾಗಿರುವಂತೆ ನೋಡಿಕೊಳ್ಳಿ. ಸುಮ್ ಸುಮ್ಮನೆ ಸಾಲ ಮಾಡಬೇಡಿ. ತೀರಿಸಿಕೊಳ್ಳುವುದಾದರೆ ಮಾತ್ರ ಸಾಲ ಮಾಡಿ.
- ಭವಿಷ್ಯಕ್ಕೆಂದು ಸದಾ ಒಂದಿಷ್ಟು ಉಳಿತಾಯವಿರಲಿ. 
- ತುರ್ತು ಕಾಲಕ್ಕೆ ಬಳಸಲು ಒಂದಿಷ್ಟು ಹಣವಿರಲಿ.
- ವೈಯಕ್ತಿಕ ಜೀವನ ಮತ್ತು ಆರೋಗ್ಯ ಜೀವನದ ಮುಖ್ಯ ಹೂಡಿಕೆಗಳು. ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಫಿಟ್ ಆಗಿರಲು ವರ್ಕ್‌ಔಟ್ ಮಾಡಿ.
- ಸಾವಿನ ಮೇಲೆ ಯಾರಿಗೂ ಇರೋಲ್ಲ ಹಿಡಿತ. ಅದ್ಯಾವಾಗ ಬರುತ್ತೋ, ಸದಾ ಸನ್ನದ್ಧರಾಗಿರಿ. ನಿಮ್ಮ ಅವಲಂಬಿತರಿಗೆಂದು ವಿಮೆ ಮಾಡಿಸಿಡಿ
- ಉಯಿಲು ಬರೆದಿಡಿ. ಇದು ಅನಗತ್ಯ ಗೊಂದಲವನ್ನು ಬಗೆಹರಿಸಲು ಸಹಕರಿಸುತ್ತದೆ.

click me!