ಕೊಡಗಿನಲ್ಲಿ ವರುಣನ ಆರ್ಭಟ ನೋಡಲು ಈ ವಿಡಿಯೋ ನೋಡಲೇಬೇಕು

Aug 17, 2018, 12:36 PM IST

ಮಡಿಕೇರಿ (ಆ. 17): ಕೊಡಗು ಸುತ್ತಮುತ್ತ ಪ್ರದೇಶಗಳಲ್ಲಿ  ವರುಣನ ಆರ್ಭಟ ಮುಂದುವರಿದಿದ್ದು, ರಕ್ಷಣೆಗೆ ರಾಜ್ಯ ವಿಪತ್ತು ನಿರ್ವಹಣಾ ತಂಡ ಆಗಮಿಸಿದೆ. 

ನಿವಾಸಿಗಳನ್ನು ದುಬಾರಿ ರ‍್ಯಾಫ್ಟಿಂಗ್ ಟೀಂನಿಂದ ಸ್ಥಳಾಂತರಿಸಲಾಗುತ್ತಿದೆ. ಕೊಡಗು ಜಿಲ್ಲೆಗೆ ಸಂಪರ್ಕಿಸುವ ಪ್ರಮುಖ ರಸ್ತೆಗಳು ಬಂದ್ ಆಗಿವೆ.  ರಕ್ಷಣಾ ಕಾರ್ಯ ಕೈಗಳ್ಳಲು ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನೀರು ಉಕ್ಕಿ ಹರಿದು, ಕುವೆಂಪು, ಸಾಯಿ, ಕಾವೇರಿ, ಗಂಧದ ಕೋಟಿ ಬಡಾವಣೆಯ ಮನೆಗಳು ಮುಳುಗಡೆಯಾಗಿವೆ. ಪ್ರವಾಹ  ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ. ರಾ. ಮಹೇಶ್ ಭೇಟಿ ನೀಡಿದ್ದಾರೆ. ಬಡಾವಣೆಯಲ್ಲಿ ವಾಹನಗಳು, ಮನೆಯ ಸಾಮಾಗ್ರಿಗಳು ತೇಲುತ್ತಿದ್ದು, ಜಿಲ್ಲೆಯ ಜನರು ಕಂಗಾಲಾಗಿದ್ದಾರೆ.

ಕೊಡಗಿನ ಪರಿಸ್ಥಿತಿ ತಿಳಿದುಕೊಳ್ಳಲು ಈ ವಿಡಿಯೋ ನೋಡಿ