ಸ್ವಂತ ದೇಶ ನಿರ್ಮಾಣ ಮಾಡಲು ಹೊರಟ ನಿತ್ಯಾನಂದ/ ಈಕ್ವೆಡಾರ್ ನಲ್ಲಿ ದ್ವೀಪ ಖರೀದಿಸಿದ ಸ್ವಾಮಿ/ ತಮಿಳು ನಾಡು ಮೂಲದ ಸ್ವಾಮೀಜಿ ಬಿಡದಿ ನಿತ್ಯಾನಂದ ಅಂತಲೇ ಪ್ರಸಿದ್ಧಿ
ಬೆಂಗಳೂರು(ಡಿ. 03) ಸ್ವಯಂ ಘೋಷಿತ ದೇವ ಮಾನವನೆಂದೇ ಹೇಳಿಕೊಳ್ಳುವ ಅತ್ಯಾಚಾರದ ಆರೋಪ ಎದುರಿಸುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ನಕಲಿ ಪಾಸ್ ಪೋರ್ಟ್ ಬಳಸಿ ದೇಶ ತೊರೆದಿರುವ ನಿತ್ಯಾ ಸದ್ಯ ಎಲ್ಲಿದ್ದಾನೆ ಎಂಬ ಯಕ್ಷ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು. ಈಗ ಅದಕ್ಕೆಲ್ಲ ಉತ್ತರ ಸಿಕ್ಕಿದೆ.
ಆಶ್ರಮಗಳ ನಂತರ ಈಗ ತನ್ನದೇ ಆದ ದೇಶ ಕಟ್ಟಲು ನಿತ್ಯಾ ಮುಂದಾಗಿದ್ದಾನೆ. ಈಕ್ವೆಡಾರ್ ಎಂಬಲ್ಲಿ ದ್ವೀಪ ಖರೀದಿ ಮಾಡಿದ್ದು, ಇದು ನನ್ನದೇ ದೇಶ ಎಂದು ಹೇಳಿಕೊಳ್ಳುತ್ತಿರುವ ಬಗ್ಗೆ ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.
ದೇಶಕ್ಕಾಗಿ ಧ್ವಜ, ಲಾಂಛನ, ಪ್ರತ್ಯೇಕ ಪಾಸ್ ಪೋರ್ಟ್ ನ್ನು ಸಿದ್ದಪಡಿಸಿಕೊಂಡಿದ್ದಾನೆ. ಅಲ್ಲದೇ ಈ ದೇಶಕ್ಕೆ 'ಕೈಲಾಸ' ಎಂದು ಹೆಸರಿಟ್ಟಿದ್ದಾನೆ. ಈ ಪ್ರದೇಶವು ಟ್ರಿನಿಡಾಡ್ ಮತ್ತು ಟೊಬ್ಯಾಗೊಗೆ ಹತ್ತಿರವಾಗಿದೆ. ಇದನ್ನು ಹಿಂದೂ ರಾಷ್ಟ್ರವೆಂದು ಕರೆದಿದ್ದಾನೆ. ಈ ದೇಶಕ್ಕೆ ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ರಚಿಸಿದ್ದು, ಈ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆ ಸಹ ನೀಡಿದ್ದಾನೆ ಎನ್ನಲಾಗಿದೆ.
ಅಹಮದಾಬಾದ್ ಬಿಟ್ಟ ನಿತ್ಯಾ ಶಿಷ್ಯರು ಎಲ್ಲಿಗೆ ಹೋದರು?
ಕೈಲಾಸ ದೇಶವು ರಾಜಕೀಯದಿಂದ ಮುಕ್ತವಾಗಿದ್ದು, ಎಲ್ಲ ಮಾನವರು ಪ್ರಬುದ್ಧರಾಗಿ ಬದುಕಬಹುದು ಎಂದು ತನ್ನದೇ ಶೈಲಿಯಲ್ಲಿ ಹೇಳಿದ್ದಾನೆ. ಕೈಲಾಸ ದೇಶದ ಪಾಸ್ ಪೋರ್ಟ್ ನ ಎರಡು ಮಾದರಿಗಳು ಈಗಾಗಲೇ ಅಂತಿಮವಾಗಿದ್ದು, ಒಂದು ಬಂಗಾರದ ಬಣ್ಣದ್ದಾಗಿದೆ. ಇನ್ನೊಂದು ಕೆಂಪು ಬಣ್ಣದ್ದಾಗಿವೆ ಎಂದು ಹೇಳಲಾಗಿದೆ ದೇಶ ಎರಡು ಲಾಂಛನಗಳಿದ್ದು, ಒಂದರಲ್ಲಿ ನಿತ್ಯಾನಂದ, ಇನ್ನೊಂದರಲ್ಲಿ ನಂದಿ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ.
ನಿತ್ಯಾನಂದನಿಗಾಗಿ ಗುಜರಾತ್ ಮತ್ತು ಕರ್ನಾಟಕದ ಪೊಲೀಸರು ಬಲೆ ಬೀಸುತ್ತಲೇ ಇದ್ದಾರೆ. ನಿತ್ಯಾನಂದ ಕಳ್ಳ ದಾರಿಯಲ್ಲಿ ದೇಶ ತೊರೆದಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮಕ್ಕಳನ್ನು ಹಿಂಸಿಸುತ್ತಾನೆ ಎಂಬ ಆರೋಪದಲ್ಲಿ ಆತನ ಅಹಮದಾಬಾದ್ ಆಶ್ರಮದ ಮೇಲೂ ದಾಳಿಯಾಗಿತ್ತು.