ಬಾರ್, ಪಬ್‌ಗಳಲ್ಲಿ ಮದ್ಯದ ಜೊತೆ ಚಿಪ್ಸ್ ಮುರುಕು ತಿಂಡಿ ಬ್ಯಾನ್?

By Web DeskFirst Published Nov 21, 2018, 1:48 PM IST
Highlights

ಬಾರ್, ಹೋಟೆಲ್‌ಗಳು, ಪಬ್‌ಗಳಲ್ಲಿ ಧೂಮಪಾನ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ಇದೀಗ ಬಟಾಟೆ ಚಿಪ್ಸ್ ಹಾಗೂ ಮುರುಕು ತಿಂಡಿ ಗಳಿಗೂ ನಿಷೇಧ ಹೇರಲಾಗಿದೆ. 

ಬೆಂಗಳೂರು :  ಬಾರ್, ಹೋಟೆಲ್‌ಗಳು, ಪಬ್‌ಗಳಲ್ಲಿ ಧೂಮಪಾನ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ಇದೀಗ ಬಟಾಟೆ ಚಿಪ್ಸ್ ಹಾಗೂ ಮುರುಕು ತಿಂಡಿ ಗಳಿಗೂ ನಿಷೇಧ ಹೇರಲಾಗಿದೆ. ಬಾರ್‌ಗೆ ಬಂದವರು ಬರಿ ಕುಡಿಯುವುದನ್ನು ಬಿಟ್ಟು ಮುರುಕು ತಿಂಡಿಗ ಳನ್ನು ತಿನ್ನುವುದರಲ್ಲೇ ಕಾಲ ಹರಣ ಮಾಡುತ್ತಾರೆ. 

ರಾತ್ರಿ  12 ಗಂಟೆಯಾದರೂ ಮನೆಗೆ ಹೋಗದೇ ಬಾರ್‌ನಲ್ಲಿಯೇ ಉಳಿಯುತ್ತಾರೆ. ಹೀಗಾಗಿ ಮುರುಕು ತಿಂಡಿಗಳನ್ನು ನಿಷೇಧಿಸಿದರೆ ಬೇಗನೆ ಮನೆ ಸೇರಿಕೊಳ್ಳು ತ್ತಾರೆ ಎಂದು ಸಮಿತಿಯೊಂದು ಸರ್ಕಾರಕ್ಕೆ ವರದಿ ನೀಡಿದೆ. 

ಹೀಗಾಗಿ ಬಾರ್, ಪಬ್‌ಗಳಲ್ಲಿ ಮುರುಕು ತಿಂಡಿ ತಿನ್ನುವುದಕ್ಕೆ ನಿಷೇಧ ಹೇರಲಾಗಿದೆ. ಅಲ್ಲದೇ ಬಾರ್‌ಗಳ ಸುತ್ತಮುತ್ತ 100 ಮೀಟರ್ ದೂರದಲ್ಲಿ ಎಲ್ಲೂ ಇಂತಹ ತಿಂಡಿಗಳ ಮಾರಾಟ ನಿಷೇಧಿಸಲಾಗಿದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.

click me!