ತಿಮಿಂಗಿಲ ಹೊಟ್ಟೆಯಲ್ಲಿ ಸಿಕ್ತು 115 ಪ್ಲಾಸ್ಟಿಕ್ ಕಪ್ಸ್!

By Web DeskFirst Published Nov 21, 2018, 3:10 PM IST
Highlights

ಸುಲವೇಸಿ ಸಮುದ್ರ ತೀರದಲ್ಲಿ ಸತ್ತು ಬಿದ್ದಿದ್ದ 9.5 ಮೀಟರ್ ಉದ್ದದ ತಿಮಿಂಗಿಲವನ್ನ ರಕ್ಷಣಾ ತಂಡ ಮೇಲೆಕ್ಕಿತ್ತಿ ಪರೀಕ್ಷೆ ನಡೆಸಿತ್ತು. ಸಾವಿಗೆ ಕಾರಣ ತಿಳಿಯಲು ವೈದ್ಯರ ಹಾಗೂ ಸಂಶೋಧಕರ ತಂಡ ಪರೀಕ್ಷೆ ನಡೆಸಿತ್ತು. ಪರೀಕ್ಷೆ ವೇಳೆ ತಿಮಿಂಗಲ ಹೊಟ್ಟೆಯಲ್ಲಿ ಸಿಕ್ಕ ವಸ್ತುಗಳಿಗೆ ಜಗತ್ತೆ ಅಚ್ಚರಿಗೊಂಡಿದೆ.
 

ಇಂಡೋನೇಷಿಯಾ(ನ.21): ಅತೀಯಾದ ಪ್ಲಾಸ್ಟಿಕ್ ಬಳಕೆ ಹಾಗೂ ಮಾನವನ  ಪ್ರಕೃತಿ ನಿರ್ಲಕ್ಷ್ಯಕ್ಕೆ ಇದೀಗ ಸಮುದ್ರದ ತಿಮಿಂಗಿಲವೊಂದು ಬಲಿಯಾಗಿದೆ. ಇಂಡೋನೇಷಿಯಾದ ಸಮುದ್ರ ತೀರದಲ್ಲಿ ಸತ್ತು ಬಿದ್ದಿದ್ದ ತಿಮಿಂಗಿಲ ಹೊಟ್ಟೆಯಲ್ಲಿ 5.9 ಕೆಜಿ ಪ್ಲಾಸ್ಟಿಕ್ ವಸ್ತುಗಳು ಪತ್ತೆಯಾಗಿದೆ.

ಸುಲವೇಸಿ ಪ್ರಾವಿನ್ಸ್ ತೀರದ ಬಳಿ ಸತ್ತು ತೇಲಾಡುತ್ತಿದ್ದ ತಿಮಿಂಗಿಲವನ್ನ ವಾಕಟೊಬಿ ನ್ಯಾಶನಲ್ ಪಾರ್ಕ್ ಸಿಬ್ಬಂಧಿಗಳು ಕ್ರೇನ್ ಸಹಾಯದಿಂದ ಮೇಲಕ್ಕಿತ್ತಿದ್ದಾರೆ.  ಬಳಿಕ ತಿಮಿಂಗಿಲ ಸಾವಿಗೆ ಕಾರಣ ತಿಳಿಯಲು ವೈದ್ಯಕೀಯ ಹಾಗೂ ಸಂಶೋಧಕರ ತಂಡಕ್ಕೆ ಸೂಚಿಸಲಾಗಿತ್ತು.

ವೈದ್ಯರ ತಂಡ ತಿಮಿಂಗಿಲ ಹೊಟ್ಟೆಯನ್ನ ಸೀಳಿದಾಗ ಅಚ್ಚರಿ ಕಾದಿತ್ತು. ಬರೋಬ್ಬರಿ 115 ಪ್ಲಾಸಿಕ್ ಕಪ್, ಎರಡು ಜೊತೆ ಚಪ್ಪಲ್, 25 ಪ್ಲಾಸ್ಟಿಕ್ ಬ್ಯಾಗ್ ಹಾಗೂ 1000ಕ್ಕೂ ಹೆಚ್ಚು ಪ್ಲಾಸ್ಟಿಕ್ ವೇಸ್ಟ್‌ಗಳು ಪತ್ತೆಯಾಗಿದೆ. ತಿಮಿಂಗಲ ಸಾವಿಗೆ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಕೂಡ ಪ್ರಮುಖ ಕಾರಣ ಎಂದು ವೈದ್ಯರು ವರದಿ ನೀಡಿದ್ದಾರೆ.

ಪ್ಲಾಸ್ಟಿಕ್ ಬಳಕೆ ಹಾಗೂ ಮಾಲಿನ್ಯದಲ್ಲಿ ಇಂಡೋನೇಷಿಯಾ 2ನೇ ಸ್ಥಾನದಲ್ಲಿದೆ. ಮೊದಲ ಸ್ಥಾನವನ್ನ ಚೀನಾ ಆಕ್ರಮಿಸಿಕೊಂಡಿದೆ. ಇಂಡೋನೇಷಿಯಾ ಪ್ರತಿ ವರ್ಷ3.2 ಮಿಲಿಯನ್ ಟನ್  ಪ್ಲಾಸ್ಟಿಕ್ ವೇಸ್ಟ್ ತುಂಬಿಕೊಳ್ಳುತ್ತಿದೆ. ಇದರಿಂದ ಇಂಡೋನೇಷಿಯಾ ಮಾತ್ರವಲ್ಲ ಇಡೀ ಜಗತ್ತೆ ಅಪಾಯಕ್ಕೆ ಸಿಲುಕಲಿದೆ.

click me!
Last Updated Nov 21, 2018, 3:10 PM IST
click me!