ಉಪನ್ಯಾಸಕಿಗೆ ವಿದ್ಯಾರ್ಥಿ ಆವಾಜ್! ಕರ್ನಾಟಕದ್ದೇ ವಿಡಿಯೋ ಯಾವ ಜಿಲ್ಲೇದು?

Jan 16, 2019, 4:50 PM IST

ತಾಯಿಗೆ ಪೊರಕೆಯಿಂದ ಹೊಡೆದ ಮಗನ ವಿಚಾರ ದೊಡ್ಡ ಸುದ್ದಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಈಗ ಮತ್ತೊಂದು ಅದೆ ತೆರನಾದ ವಿಡಿಯೋ ವೈರಲ್ ಆಗುತ್ತಿದೆ. ಕಾಲೇಜಿನಲ್ಲಿ ಮಹಿಳಾ ಉಪನ್ಯಾಸಕರೊಬ್ಬರು ಪಾಠ ಮಾಡುತ್ತಿರುವ ವೇಳೆ ವಿದ್ಯಾರ್ಥಿಯೊಬ್ಬ ಲೆಕ್ಚರರ್‌ಗೆ ಅವಾಜ್ ಹಾಕುತ್ತಾನೆ. ಇದು ನಮ್ಮ ಕ್ಲಾಸು ನೀವೆ ಹೊರಕ್ಕೆ ಹೋಗಿ ಎಂಬ ರೀತಿಯಲ್ಲಿ ಮಾತನಾಡುತ್ತಾರೆ. ಉಳಿದ ವಿದ್ಯಾರ್ಥಿಗಳು ಇದನ್ನೇ ಅನುಸರಿಸಿ ನಗುತ್ತಾರೆ. ಎಲ್ಲಿಗೆ ಬಂದಿದೆ ನಮ್ಮ ಶಿಕ್ಷಣ ವ್ಯವಸ್ಥೆ ಎಂಬ ಪ್ರಶ್ನೆಗಳನ್ನು ಕೇಳಿ ವಿಡಿಯೋ ಶೇರ್ ಆಗುತ್ತಿದೆ. ಕನ್ನಡದಲ್ಲಿಯೇ ಮಾತನಾಡಿರುವುದರಿಂದ ಇದು ಕರ್ನಾಟಕದ್ದೇ ವಿಡಿಯೋ ಎಂಬುದು ಖಾತ್ರಿಯಾಗಿದೆ. ಕಾಲೇಜಿಗೆ ಮೊಬೈಲ್ ಕೊಂಡೊಯ್ಯುವಂತೆ ಇಲ್ಲ ಎಂಬ ನಿಯಮ ಇದೆ. ಆದರೆ ಹಿಂಬದಿಯ ವಿದ್ಯಾರ್ಥಿಯೊಬ್ಬ ಪುಂಡ ವಿದ್ಯಾರ್ಥಿಯ ಬಣ್ಣ ಬಯಲು ಮಾಡಿದ್ದಾನೆ.