'ಅತ್ಯಾಚಾರಕ್ಕೆ ಬಳಸುವ ಅಂಗವನ್ನೇ ಕತ್ತರಿಸಿ' ರಾಖಿ ಆಕ್ರೋಶ

By Web Desk  |  First Published Dec 2, 2019, 4:54 PM IST

ಹೈದರಾಬಾದ್ ಅತ್ಯಾಚಾರ ಪ್ರಕರಣ/ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಿ ಎಂದ ರಾಖಿ ಸಾವಂತ್/ ಅತ್ಯಾಚಾರಕ್ಕೆ ಬಳಸುವ ಅಂಗವನ್ನೆ ಕತ್ತರಿಸಿ ಬಿಸಾಕಬೇಕು/ ಮಹಿಳೆಯರ ರಕ್ಷಣೆ ಅವರೇ ಮಾಡಿಕೊಳ್ಳಬೇಕು


ಮುಂಬೈ(ಡಿ. 02)  ದೆಹಲಿ ನಿರ್ಭಯಾ ಪ್ರಕರಣದ ರೀತಿ ಇಡೀ ದೇಶವನ್ನೇ ಆತಂಕಕ್ಕೆ ಗುರಿ ಮಾಡಿರುವ ಹೈದರಾಬಾದ್ ದಿಶಾ ಹತ್ಯಾಚಾರದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂಬ ಒತ್ತಾಯ ಎಲ್ಲ ಕಡೆಯಿಂದಲೂ ಕೇಳಿ ಬರುತ್ತಲಿದೆ. 

ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ವಿಡಿಯೋವೊಂದನ್ನು ಹಾಕಿದ್ದು ಅತ್ಯಾಚಾರಿಗಳಿಗೆ ಯಾವ ರೀತಿ ಶಿಕ್ಷೆ ನೀಡಬೇಕು ಎಂದು ವಿವರಿಸಿದ್ದಾರೆ.

Tap to resize

Latest Videos

undefined

ಹೆಣ್ಣು ಮಕ್ಕಳು ತಮ್ಮ ರಕ್ಷಣೆ ಯಾವ ರೀತಿ ಮಾಡಿಕೊಳ್ಳಬೇಕು ಎಂದು ಕೆಲ ಟಿಪ್ಸ್ ಗಳನ್ನು ನೀಡಿದ್ದಾರೆ. ಲಾರಿ ಚಾಲಕರನ್ನು ಕಠುವಾದ ಭಾಷೆಯಲ್ಲಿ ಟೀಕಿಸಿರುವ ರಾಖಿ ಕಿವಿಮಾತನ್ನು ಹೇಳಿದ್ದಾರೆ.

ಮನುಷ್ಯ ರೂಪದ ರಾಕ್ಷಸರಿದ್ದಾರೆ: ಪೋರ್ನ್‌ ಸೈಟ್‌ನಲ್ಲಿ ಪ್ರಿಯಾಂಕಾ ರೇಪ್ ವಿಡಿಯೋ ಹುಡುತ್ತಿದ್ದಾರೆ!

ಹೆದ್ದಾರಿಯಲ್ಲಿ ತೆರಳುವ ಮೊದಲು ಪೆಟ್ರೋಲ್ ಚೆಕ್ ಮಾಡಿಕೊಳ್ಳಿ, ಟೈರ್ ಗಾಳಿಯನ್ನು ಚೆಕ್ ಮಾಡಿಕೊಳ್ಳಿ, ನಿಮ್ಮ ರಕ್ಷಣೆಗೆ ಯಾರೂ ಬರುವುದಿಲ್ಲ ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ ಎಂದಿದ್ದಾರೆ. 

ಹೈದರಾಬಾದ್ ಪ್ರಕರಣದಲ್ಲಿ ಭಾಗಿಯಾದವರಿಗೆ ಗಲ್ಲು ಶಿಕ್ಷೆ ನೀಡಬೇಕು. ತಾಲಿಬಾನ್, ಗಲ್ಫ್ ದೇಶದ ಮಾದರಿಯಲ್ಲಿ ಶಿಕ್ಷೆ ನೀಡಬೇಕು.  ಶಿಕ್ಷೆ ಯಾವ ರೀತಿ ಇರಬೇಕು ಎಂದರೆ ರೇಪ್ ಮಾಡಿದವರನ್ನು ನಪುಂಸಕರನ್ನಾಗಿ ಮಾಡಬೇಕು. ರೇಪ್ ಮಾಡಲು ಬಳಸಿದ ಅಂಗವನ್ನೇ ಕತ್ತರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ಸರ್ಕಾರ, ದೇಶದ ನ್ಯಾಯಾಂಗ ವ್ಯವಸ್ಥೆ ಮಹಿಳೆಯರ ಹಿತ ಕಾಯಲು ಬದ್ಧವಾಗಬೇಕು. ಕಾನೂನಿನಲ್ಲಿ ಬದಲಾವಣೆ ತರಬೇಕಾದದ್ದು ಅತಿ ಅವಶ್ಯಕ ಎಂದು ಹೇಳಿದ್ದಾರೆ.

ಹೈವೆಯಲ್ಲಿ ಗಾಡಿ ಪಂಕ್ಚರ್ ಆಗಿದ್ದ ಕಾರಣ ದಿಕ್ಕು ಕಾಣದೇ ನಿಂತಿದ್ದ ಪಶು ವೈದ್ಯೆಯನ್ನು ಸಹಾಯ ಮಾಡುವ ನೆಪದಲ್ಲಿ ನಾಲ್ವರು ಲಾರಿ ಚಾಲಕರು ಅತ್ಯಾಚಾರ ಮಾಡಿದ್ದರು. ಆರೋಪಿಗಳನ್ನು ಬಂಧಿಸಲಾಗಿದೆ.

click me!