ಗೋ ಹತ್ಯೆ ನಿಲ್ಲಬೇಕು. ಅದಕ್ಕೋಸ್ಕರ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ತರಬೇಕು. ಕಾಶ್ಮೀರದ ಒಂದು ಇಂಚು ಭೂಮಿಯನ್ನೂ ಪಾಕಿಸ್ತಾನಕ್ಕೆ ಬಿಟ್ಟುಕೊಡಲ್ಲ. ಅದಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು. ಬಿಜೆಪಿಯವರು ರಾಷ್ಟ್ರವಾದಿಗಳು, ಕೋಮು ವಾದಿಗಳಲ್ಲ. ಉಗ್ರಗಾಮಿಗಳ ಸದೆಬಡಿಯಲು ಮೋದಿಜಿ ನೇರ ಆದೇಶ ನೀಡಿದ್ದು ಅವರು ಸಮರ್ಥ ನಾಯಕರು - ಕೆ.ಎಸ್.ಈಶ್ವರಪ್ಪ
ಹೊಸಪೇಟೆ[ಅ.28]: ಆದಷ್ಟು ಬೇಗ ರಾಮ ಹುಟ್ಟಿದ ಜಾಗದಲ್ಲಿ ರಾಮಂದಿರ ಆಗೇ ಆಗುತ್ತದೆ. ಅದಕ್ಕೊಸ್ಕರ ಈ ಚುನಾವಣೆಯನ್ನು ನಾವು ಗೆಲ್ಲಲೇಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ಪರವಾಗಿ ಮತಯಾಚಿಸಿ, ಬಿಜೆಪಿ ಮಂಡಲ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.ಅಯೋಧ್ಯೆಯಲ್ಲಿ ರಾಮಮಂದಿರದ ಬಗ್ಗೆ ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ವಿರೋಧಿಗಳು ನಗುತ್ತಿದ್ದರು. ಆದರೆ ಪ್ರಸ್ತುತ ಆದಷ್ಟು ಬೇಗನೆ ರಾಮ ಮಂದಿರ ನಿರ್ಮಾಣವಾಗುತ್ತದೆ. ಇದಕ್ಕಾಗಿ ನಾವು ಈ ಚುನಾವಣೆ ಗೆಲ್ಲಬೇಕು ಎಂದರು.
ಗೋ ಹತ್ಯೆ ನಿಲ್ಲಬೇಕು. ಅದಕ್ಕೋಸ್ಕರ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ತರಬೇಕು. ಕಾಶ್ಮೀರದ ಒಂದು ಇಂಚು ಭೂಮಿಯನ್ನೂ ಪಾಕಿಸ್ತಾನಕ್ಕೆ ಬಿಟ್ಟುಕೊಡಲ್ಲ. ಅದಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು. ಬಿಜೆಪಿಯವರು ರಾಷ್ಟ್ರವಾದಿಗಳು, ಕೋಮು ವಾದಿಗಳಲ್ಲ. ಉಗ್ರಗಾಮಿಗಳ ಸದೆಬಡಿಯಲು ಮೋದಿಜಿ ನೇರ ಆದೇಶ ನೀಡಿದ್ದು ಅವರು ಸಮರ್ಥ ನಾಯಕರು ಎಂದರು.
ಬಳ್ಳಾರಿಗೆ ರಾಹುಲ್ ಬರಲಿ: ಈ ಹಿಂದೆ 21 ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. 21 ರಾಜ್ಯಗಳಲ್ಲಿ ರಾಹುಲ್ ಗಾಂಧಿ ಪ್ರಚಾರ ಮಾಡಿದ ಕಾರಣಕ್ಕೆ ಅಲ್ಲೆಲ್ಲ ಗೆಲ್ಲಲಿಲ್ಲ. ಅದಕ್ಕಾಗಿ ರಾಹುಲ್ ಗಾಂಧಿ ಅವರನ್ನು ಬಳ್ಳಾರಿಗೆ ಬನ್ನಿ ಎಂದು ಕರೆಯುತ್ತಿದ್ದೇನೆ. ಕಾಂಗ್ರೆಸ್ ಮುಂದಿನ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಅಲ್ಲ ಎಂದು ಚಿದಂಬರಂ ಹೇಳಿದ್ದಾರೆ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಮೌನಿಬಾಬಾ ಆಗಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಹಾಲಪ್ಪ ಆಚಾರ್, ಮಾಜಿ ಶಾಸಕರಾದ ಎಚ್.ಆರ್. ಗವಿಯಪ್ಪ, ಶಶಿಲ್ ನಮೋಶಿ, ಬಿಜೆಪಿ ಮುಖಂಡ ರಾಮಲಿಂಗಪ್ಪ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಮುಖಂಡರಾದ ಕೆ. ಬಿ. ಶ್ರೀನಿವಾಸ ರೆಡ್ಡಿ, ಅನಂತ ಪದ್ಮನಾಭ, ಕವಿರಾಜ್ ಅರಸು, ರಾಮಲಿಂಗಪ್ಪ, ಜಂಬಾನಹಳ್ಳಿ ವಂಸತ, ಕಟಗಿ ರಾಮಕೃಷ್ಣ, ಗುದ್ಲಿ ಪರುಶುರಾಮ, ಗೌಡ್ರು ರಾಮಚಂದ್ರ ಇತರರಿದ್ದರು.