Sep 19, 2018, 3:44 PM IST
ಕೊಪ್ಪಳ(ಸೆ.19): ಪೊಲೀಸ್ ಕ್ವಾಟರ್ಸ್ ಗೆ ನೊಣದ ಕಾಟ ಅಂತಾ ನಿನ್ನೆಯಷ್ಟೇ ನಿಮ್ಮ ಸುವರ್ಣ ನ್ಯೂಸ್ ನ ಬಿಗ್ 3 ಯಲ್ಲಿ ವರದಿ ಪ್ರಸಾರವಾಗಿತ್ತು.
ಇಂದು ಕೊಪ್ಪಳದ ಬಸಾಪೂರದಲ್ಲಿರುವ ಪೊಲೀಸ್ ಹೆಡ್ ಕ್ವಾಟರ್ಸ್ ಗೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು.
ಸ್ಥಳದಲ್ಲೇ ಪರಿಹಾರ ನೀಡಿದ ಜಿಲ್ಲಾಧಿಕಾರಿ ಸುನೀಲ್ ಕುಮಾರ್, ಕ್ವಾಟರ್ಸ್ ಪಕ್ಕದಲ್ಲಿರುವ ಕೋಳಿ ಫಾರಂ ಮಾಲೀಕರಿಗೆ ತಾಕೀತು ಮಾಡಿದ್ದಾರೆ. ಬಿಗ್ 3 ವರದಿಯಿಂದ ಪೊಲೀಸ್ ಕ್ವಾಟರ್ಸ್ ನಲ್ಲಿರುವ ೩೮ ಕುಟುಂಬಗಳು ನೆಮ್ಮದಿಯ ನಿದ್ದೆ ಮಾಡುವಂತಾಗಿದೆ.