Jan 11, 2019, 1:33 PM IST
ಕಾಲೇಜುಗಳಲ್ಲಿ ಆ್ಯನುವಲ್ ಡೇ, ಕಾಲೇಜ್ ಡೇ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಗೊತ್ತು. ಆದರೆ ಕಾಲೇಜಿನಲ್ಲಿ ಸೀಮಂತ ಶಾಸ್ತ್ರ ನಡೆಯುವುದು ಕೇಳಿದ್ದೀರಾ? ಇಂತದ್ದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ ಕೊಡಗಿನ ಗೋಣಿಕೊಪ್ಪದಲ್ಲಿರುವ ಕಾಲೇಜು. ಎಂ ಕಾಂ ವಿದ್ಯಾರ್ಥಿನಿಯೊಬ್ಬರಿಗೆ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಹಪಾಠಿಗಳೆಲ್ಲಾ ಸೇರಿ ಸೀಮಂತ ಕಾರ್ಯ ಮಾಡಿದ್ದಾರೆ. ವಿದ್ಯಾರ್ಥಿನಿಯನ್ನು ಖುಷಿಖುಷಿಯಾಗಿ ಬೀಳ್ಕೊಟ್ಟಿದ್ದಾರೆ.