ಯುವಕನ ಆತ್ಮಹತ್ಯೆಗೆ ಕಾರಣವಾಯ್ತಾ ಜ್ಯೋತಿಷ್ಯ?

By Web Desk  |  First Published Nov 22, 2018, 1:11 PM IST

ಜ್ಯೋತಿಷ್ಯ ನಂಬಿದ ಕೊಡುಗು ಜಿಲ್ಲೆಯ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಈ ಯುವಕನ ಸಾವಿಗೆ ಜ್ಯೋತಿಷ್ಯ ಕಾರಣವಾಗಿದ್ದು ಹೇಗೆ? ಇಲ್ಲಿದೆ ಹೆಚ್ಚಿನ ವಿವರ.


ವಿರಾಜಪೇಟೆ (ನ.22): ಜ್ಯೋತಿಷ್ಯಕ್ಕೆ ಹೆದರಿ ಯುವಕನೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡುಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿಶೆಟ್ಟಿಗೇರಿಯಲ್ಲಿ ನಡೆದಿದೆ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

ಜಾತಕದಲ್ಲಿ ದೋಷ ಹಿನ್ನಲೆಯಲ್ಲಿ ಕಳೆದ 15 ದಿನಗಳಿಂದ ಮನನೊಂದಿದ್ದ ಯುವಕ ದೇಕಮಾಡ ಕಾರ್ಯಪ್ಪ(24) ಮನೆಯಲ್ಲಿದ್ದ ರಿವಾಲ್ವರ್‌ನಿಂದ ಗುಂಡ ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿದ್ದಾನೆ.

Tap to resize

Latest Videos

ಟಿಶೆಟ್ಟಿಗೇರಿಯ ದೇವಯ್ಯ ಮತ್ತು ಮುತ್ತಮ್ಮ ದಂಪತಿಗಳ ಪುತ್ರ ಕಾರ್ಯಪ್ಪ, ಜೀವನದಲ್ಲಿನ ಹಿನ್ನಡೆಗೆ ತನ್ನ ಜಾತಕ ಫಲವೇ ಕಾರಣ ಎಂದು ನಂಬಿದ್ದ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ.  ಇದೀಗ ಸತ್ಯಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!