ಅಪ್ರಾಪ್ತೆಯ ಅತ್ಯಾಚಾರ : ಸಾವಿರಾರು ಕೋಟಿ ಒಡೆಯನಿಗೆ ಸಾಯುವವರೆಗೆ ಜೈಲು

First Published Apr 25, 2018, 4:46 PM IST
Highlights

ಸಂತ್ರಸ್ತ ಬಾಲಕಿ  ಉತ್ತರ ಪ್ರದೇಶ ಮೂಲದವಳಾಗಿದ್ದು, ಆಶ್ರಮದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಳು. ಫೋಕ್ಸೋ ಕಾಯಿದೆಯಡಿ ಮಕ್ಕಳ ಮೇಲಿನ ಅತ್ಯಾಚಾರ ಅಪರಾಧದ ಸೆಕ್ಷನ್ ಹಾಗೂ ಪ.ಜಾ ಹಾಗೂ ಪ.ಪಂ ಕಾಯಿದೆಯಡಿ ಬಂಧಿಸಲಾಗಿತ್ತು.

ನವದೆಹಲಿ(ಏ.25): ಅಪ್ರಾಪ್ತೆಯೊಬ್ಬಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋದ್'ಪುರ ವಿಶೇಷ ನ್ಯಾಯಾಲಯ ಸ್ವಯಂಘೋಷಿತ ದೇವ ಮಾನವ ಅಸರಾಂ ಬಾಪು'ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಪು ಅನುಯಾಯಿಗಳಾದ ಶಿಲ್ಪಿ ಹಾಗೂ ಶರದ್ ಅವರಿಗೆ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಉಳಿದ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದೆ. 16 ವರ್ಷದ ಅಪ್ರಾಪ್ತೆ ಮೇಲೆ 2013ರ ಆ.15 ಮತ್ತು 16ರಂದು ಜೋದ್'ಪುರದ ಮನಾಯ್ ಆಶ್ರಮದಲ್ಲಿ ಅತ್ಯಾಚಾರವೆಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವಮಾನವ ಆ.13, 2013ರಿಂದ ಸೆರೆವಾಸ ಅನುಭವಿಸುತ್ತಿದ್ದಾರೆ.

ಸಂತ್ರಸ್ತ ಬಾಲಕಿ  ಉತ್ತರ ಪ್ರದೇಶ ಮೂಲದವಳಾಗಿದ್ದು, ಆಶ್ರಮದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಳು. ಫೋಕ್ಸೋ ಕಾಯಿದೆಯಡಿ ಮಕ್ಕಳ ಮೇಲಿನ ಅತ್ಯಾಚಾರ ಅಪರಾಧದ ಸೆಕ್ಷನ್ ಹಾಗೂ ಪ.ಜಾ ಹಾಗೂ ಪ.ಪಂ ಕಾಯಿದೆಯಡಿ ಬಂಧಿಸಲಾಗಿತ್ತು. ಬಾಪುಗೆ ಲಕ್ಷಾಂತರ ಅಭಿಮಾನಿಗಳಿರುವ ಕಾರಣ ರಾಜಸ್ಥಾನ, ಹರ್ಯಾಣ ಹಾಗೂ ಗುಜರಾಜ್ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಪಾಕಿಸ್ತಾನಲ್ಲಿ ಹುಟ್ಟಿ ಭಾರತದಲ್ಲಿ 10 ಸಾವಿರ ಕೋಟಿ ಒಡೆಯನಾದ

ಮೂಲಗಳ ಪ್ರಕಾರ 1941ರಲ್ಲಿ ಪಾಕಿಸ್ತಾನದ ಸಿಂಧ ಪ್ರಾಂತ್ಯದ ಬೇರಾನಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ  ಆಸಾರಾಂ ದೇಶ ವಿಭಜನೆಯ ನಂತರ ಈತನ ಪೋಷಕರು ಅಹಮದಾಬಾದ್'ಗೆ ವಲಸೆ ಬಂದರು. ಆತನ ಮೂಲ ಹೆಸರು ಅಸುಮಲ್ ಸಿರುಮಲಾನಿ. 10ನೇ ವಯಸ್ಸಿನಲ್ಲಿಯೇ ತಂದೆ ನಿಧನ ಹೊಂದಿದ ಕಾರಣ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. 1960ರ ಸಧಕದ ನಂತರ ಹಿಮಾಲಯಕ್ಕೆ ಹೋಗಿ ಬಂದ ನಂತರ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ. 1964ರಲ್ಲಿ ಆಸಾರಾಂ ಎಂದು ಮರುನಾಮಕರಣ ಮಾಡಲಾಯಿತು.

2008ರಲ್ಲಿ ಶುರುವಾಯಿತು ಕಂಟಕ

ಈತನ ಆಶ್ರಮದಲ್ಲಿ ವಾಸಿಸುತ್ತಿದ್ದ ಸಂಬಂಧಿಗಳಿಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ನಂತರ ತೊಂದರೆ ಆವರಿಸಿತು. ಇಬ್ಬರ ಸಾವಿಗೆ ಸಂಬಂಧಿಸಿದಂತೆ ರಾಜಸ್ಥಾನ ಸರ್ಕಾರ ಬಾಪುವಿನ 9 ಅನುಯಾಯಿಗಳ ವಿರುದ್ಧ ಸಿಐಡಿ ತನಿಖೆಗೆ ಆದೇಶಿಸಿತು. 2013ರಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಾಗ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು.

click me!