ಡಿಜಿಟಲ್ ಪೇಮೆಂಟ್ ಮೂಲಕ ನಟ ಜಗ್ಗೇಶ್ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಟ್ವಿಟ್ಟರ್ ಮೂಲಕ ಬೇಸರ ಹಂಚಿಕೊಂಡಿದ್ದಾರೆ.
ಬೆಂಗಳೂರು : ನಟ ಜಗ್ಗೇಶ್ ಡಿಜಿಟಲ್ ಪೇಮೆಂಟ್ ನಿಂದ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಟ್ವಿಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ಬಾರಿ ಪೆಟ್ರೋಲ್ ಹಾಕಿಸಿಕೊಂಡು ಜಗ್ಗೇಶ ಹಣ ಪಾವತಿ ಮಾಡಿದ್ದು, ಕ್ರೆಡಿಟ್ ಕಾರ್ಡ್ ಬಳಸಿ 4380 ರೂಪಾಯಿ ಪಾವತಿಸಿದ್ದರು. ಆದರೆ ಕ್ರೆಡಿಟ್ ಕಾರ್ಡಿನಿಂದ ಮೂರು ಬಾರಿ ಹಣ ವರ್ಗಾವಣೆಯಾಗಿದೆ.
ಒಂದೇ ಬಾರಿ ಡೀಸೆಲ್ ಹಾಕಿಸಿದ್ದು, 3ಬಾರಿ ಪೆಟ್ರೋಲ್ ಬಂಕ್ ಗೆ ಹಣ ವರ್ಗಾವಣೆ ಆಗಿದೆ. ಕಾರ್ಡ್ ಬಳಕೆ ಬಗ್ಗೆ ತಿಳಿದಿದ್ದರೂ ಕೂಡ ಈ ರೀತಿಯ ಸಮಸ್ಯೆ ಎದುರಾಗಿದೆ ಎಂದು ಜಗ್ಗೇಶ್ ಬೇಸರ ಹಂಚಿಕೊಂಡಿದ್ದಾರೆ.
ಹಣ ಕಳೆದುಕೊಂಡಿದ್ದು, ಈ ಬಗ್ಗೆ ಬ್ಯಾಂಕಿಗೆ ದೂರು ನೀಡಿ ಹಣ ವಾಪಸ್ ಪಡೆಯುತ್ತೇನೆ. ಆದರೆ ಇಂತಹ ಪ್ರಕ್ರಿಯೆಗಳ ಬಗ್ಗೆ ಅರಿವಿಲ್ಲದ ಸಾಮಾನ್ಯರ ಪಾಡೇನು..? ಆದ್ದರಿಂದ ಈ ರೀತಿ ಪೇಮೆಂಟ್ ಮಾಡುವ ಸಂದರ್ಭದಲ್ಲಿ ಸೂಕ್ತ ಎಚ್ಚರಿಕೆಯಿಂದಿರಿ ಎಂದು ಟ್ವೀಟ್ ಮಾಡಿದ್ದಾರೆ.
ಸಂಸದೆ ಶೋಭಾ ಖಾತೆಗೆ ಕನ್ನ! 20 ಲಕ್ಷ ರೂ. ಗೋವಿಂದ!
ಇತ್ತೀಚೆಗೆ ಸಂಸದೆ ಶೋಭ ಕರಂದ್ಲಾಜೆ ಅವರ ಖಾತೆಯನ್ನೂ ಹ್ಯಾಕ್ ಮಾಡಿ 15 ಲಕ್ಷ ರು. ಲಪಟಾಯಿಸಲಾಗಿತ್ತು. ಇದೀಗ ಜಗ್ಗೇಶ್ ಡಿಜಿಟಲ್ ಪೇಮೆಂಟ್ ಕಿರಿ ಕಿರಿ ಅನುಭವಿಸಿದ್ದಾರೆ.
ಒಂದು ಬಾರಿ ಡೀಸಲ್ ಹಾಕಿ ನನ್ನcredit card ಯಿಂದ 3ಬಾರಿ ಪೆಟ್ರೋಲ್ ಬಂಕ್ ಗೆ ಹಣವರ್ಗಾವಣೆ ಆಗಿದೆ..ಕಾರ್ಡಿನ ಬಳಕೆಯ ಅರಿವಿದೆ ನನಗೆ ok!bankಗೆ ದೂರು ನೀಡಿ ಹಣ ವಾಪಸ್ ಪಡಿಯುವೆ!ಅರಿವಿಲ್ಲದ ಸಾಮಾನ್ಯರ ಪಾಡು?
ಎಚ್ಚರವಾಗಿರಿ ಮಹನೀಯರೆ creditcard ಬಳಸುವಾಗ!! pic.twitter.com/GIWzy5vyvd