ಮತ್ತೊಂದು ನಿರ್ಭಯಾ ಪ್ರಕರಣ:ಗುಪ್ತಾಂಗಕ್ಕೆ ರಾಡ್, ನರಳಿ ಜೀವ ಬಿಟ್ಟ 3ರ ಕಂದ

By Web DeskFirst Published Nov 13, 2018, 9:36 PM IST
Highlights

ಅತ್ಯಾಚಾರದ ವಿರುದ್ಧ ಎಷ್ಟು ಕಠಿಣ ಕಾನೂನು ಬಂದ್ರೂ ಅತ್ಯಾಚಾರ ಪ್ರಕರಣ ಮಾತ್ರ ನಿಲ್ಲುತ್ತಿಲ್ಲ. ಗುರುಗ್ರಾಮ್ ನಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ ನಡೆದಿದೆ. ಬಾಲಕಿ ಮೇಲೆ  ಕಾಮುಕನೊಬ್ಬ ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದ್ದಾನೆ.

ನವದೆಹಲಿ, [ನ.13]:  ಗುರುಗ್ರಾಮ್ ನಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ ಬೆಳಕಿಗೆ ಬಂದಿದೆ.

3 ವರ್ಷದ ಬಾಲಕಿ ಮೇಲೆ ಕಾಮುಕರು ಅತ್ಯಾಚಾರವೆಸಗಿ ಗುಪ್ತಾಂಗಕ್ಕೆ ರಾಡ್ ತುರುಕಿ ಪೈಶಾಚಿಕ ಕೃತ್ಯ ಮೆರೆದಿದ್ದಾರೆ.

ಭಾನುವಾರ ನಾಪತ್ತೆಯಾಗಿದ್ದ 3 ವರ್ಷದ ಬಾಲಕಿ ಸೋಮವಾರ ಮನೆಯೊಂದರಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವ ಸಿಕ್ಕಿದೆ. ಬಾಲಕಿ ಸ್ಥಿತಿ ನೋಡಿ ವೈದ್ಯರೇ ದಂಗಾಗಿದ್ದಾರೆ.

  ಅತ್ಯಾಚಾರದ ಬಳಿಕ ಬಾಲಕಿ ಗುಪ್ತಾಂಗಕ್ಕೆ ಮರದ ತುಂಡನ್ನು ತುರುಕಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ.

ಪಕ್ಕದ ಮನೆಯ ವ್ಯಕ್ತಿಯೇ ಈ ಕೃತ್ಯವೆಸಗಿದ್ದಾನೆ ಎನ್ನಲಾಗ್ತಿದೆ. ಭಾನುವಾರ ಬೆಳಿಗ್ಗೆ ಮನೆ ಮುಂದೆ ಆಡ್ತಿದ್ದ ಬಾಲಕಿಯನ್ನ ಕರೆದೊಯ್ದಿದ್ದಾನೆ ಎಂದು ಹೇಳಲಾಗುತ್ತಿದೆ.

 ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

click me!
Last Updated Nov 13, 2018, 9:37 PM IST
click me!