ನಟಿ ಪೂನಂ ಪಾಂಡೆ ಹಠಾತ್ ನಿಧನ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ತನ್ನ ಬದುಕನ್ನು ತನ್ನದೇ ರೀತಿಯಲ್ಲಿ ಬದುಕಿದ್ದ ಪೂನಂ ಪಾಂಡೆ ಅವರ ಜೀವನದ ಪ್ರತಿ ಹಂತ ಕೂಡ ವಿವಾದವೇ. ವಿವಾದಗಳ ಮೂಲಕವೇ ಪ್ರಖ್ಯಾತಿ ಪಡೆದ ಸೋಶಿಯಲ್ ಮೀಡಿಯಾ ಸ್ಟಾರ್ ಇದ್ದರೆ ಅದು ಪೂನಂ ಪಾಂಡೆ ಮಾತ್ರ.
ನವದೆಹಲಿ (ಫೆ.2): ನಟಿ ಪೂನಂ ಪಾಂಡೆ 32ನೇ ವಯಸ್ಸಿನಲ್ಲಿಯೇ ನಿಧನರಾಗಿದ್ದಾರೆ. ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗಿದ್ದ ಪೂನಂ ಪಾಂಡೆ ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ತಮ್ಮ ಮನೆಯಲ್ಲಿ ಫೆಬ್ರವರಿ 1 ರಂದು ಸಾವು ಕಂಡಿದ್ದಾರೆ ಎಂದು ಅವರ ಟೀಮ್ ಖಚಿತಪಡಿಸಿದೆ. ಅವರ ಅಂತ್ಯಸಂಸ್ಕಾರ ಅವರ ಊರಿನಲ್ಲಿಯೇ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದರ ನಡುವೆ ಪೂನಂ ಪಾಂಡೆ ಬದುಕಿನ ಕೆಲವು ವಿಚಾರಗಳು ಬಹಿರಂಗವಾಗಿದೆ. ಹಿಂದಿನಲ್ಲಿ ಕಂಗನಾ ರಣಾವತ್ ನಡೆಸಿಕೊಡುತ್ತಿದ್ದ ಲಾಕ್‌ಅಪ್ ಶೋಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಪೂನಂ ಪಾಂಡೆ ತಮ್ಮ ವೈಯಕ್ತಿಕ ಜೀವನದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಪೂನಂ ಪಾಂಡೆ ಅವರ ತಂದೆ-ತಾಯಿಗೆ ಮಗಳು ನಟಿ ಹಾಗೂ ಮಾಡೆಲ್ ಆಗುವುದು ಸುತಾರಾಂ ಇಷ್ಟವಿರಲಿಲ್ಲ. ಅದರಲ್ಲು ಸಿನಿಮಾರಂಗ ನಮ್ಮಂತ ಮಧ್ಯಮವರ್ಗದ ಕುಟುಂಬದವರಿಗಲ್ಲ ಎಂದು ಹೇಳುತ್ತಿದ್ದರು ಎಂದು 2015ರಲ್ಲಿ ತಮ್ಮ ಸಂದರ್ಶನವೊಂದರಲ್ಲಿ ಪೂನಂ ಪಾಂಡೆದ ಹೇಳಿದ್ದರು. ನಾನು ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕು ಎನ್ನುವುದು ನಮ್ಮ ತಂದೆಯ ಆಸೆಯಾಗಿತ್ತು. ಅದು ಸಾಧ್ಯವಾಗದೇ ಇದ್ದುದಕ್ಕೆ ನನಗೆ ಬೇಸರವಿದೆ ಎಂದಿದ್ದರು.
ಅದರಲ್ಲೂ ತಮ್ಮ ಮೊದಲ ಬಿಕಿನಿ ಫೋಟೋಶೂಟ್ ಬಗ್ಗೆಯೂ ಪೂನಂ ಹೇಳಿದ್ದರು. ಮ್ಯಾಗಝೀನ್‌ವೊಂದರಲ್ಲಿ ತಮ್ಮ ಮೊದಲ ಬಿಕಿನಿ ಫೋಟೋಶೂಟ್ ಬಂದಾಗ ಅವರ ತಾಯಿ ವಿದ್ಯಾ ಪಾಂಡೆ ಸಿಟ್ಟಿಗೆದ್ದು ಹೀಗಿದ್ದರು. ನಿನ್ನನ್ನಲ್ಲ, ಈ ಫೋಟೋ ತಗೆದ್ನಲ್ಲ ಅವನಿಗೆ ಮೊದಲು ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ನನ್ನ ತಾಯಿ ಹೇಳಿದ್ದರು ಎಂದು ಪೂನಂ ತಿಳಿಸಿದ್ದರು.
ಇನ್ನು ಲಾಕ್‌ಅಪ್ ಕಾರ್ಯಕ್ರಮದಲ್ಲಿ ಮುರಿದು ಹೋದ ತಮ್ಮ ಮದುವೆ ಹಾಗೂ ಕುಟುಂಬದ ಬಗ್ಗೆ ಅವರು ಮಾತನಾಡಿದ್ದರು. ಇದೇ ಕಾರ್ಯಕ್ರಮದಲ್ಲಿ ಪೂನಂ ಪಾಂಡೆ ಅವರ ತಾಯಿ ವಿದ್ಯಾ ಪಾಂಡೆ ಕೂಡ ಬಂದಿದ್ದರು. ಸಮಾಜದಲ್ಲಿ ನನಗೆ ಕೆಟ್ಟ ಹೆಸರಿದ್ದ ಕಾರಣಕ್ಕೆ ನನ್ನ ಕುಟುಂಬ ಕೂಡ ನನ್ನ ಜೊತೆಗೆ ಇದ್ದಿರಲಿಲ್ಲ ಎಂದು ಪೂನಂ ಪಾಂಡೆ ಹೇಳಿದ್ದರು.
'ಇದು 3-4 ವರ್ಷದ ಹಿಂದಿನ ಮಾತು. ನನ್ನ ಕುಟುಂಬ ಅಂದರೆ ತಂದೆ, ತಾಯಿ ಹಾಗೂ ನನ್ನ ಸಹೋದರಿ ಎಲ್ಲರೂ ಒಟ್ಟಿಗೆ ಬದುಕುತ್ತಿದ್ದಾರೆ. ಆದರೆ, ನಾನು ಅವರ ಮಗಳು ಎನ್ನುವ ಕಾರಣಕ್ಕಾಗಿ ಅಲ್ಲಿನ ಸಮಾಜ ಅವರನ್ನು ಒಬ್ಬಂಟಿಯಾಗಿ ಮಾಡಿಬಿಟ್ಟಿದ್ದರು. ಅದರೆ, ನನ್ನ ಕುಟುಂಬ ನನಗೆ ಏನನ್ನೂ ಹೇಳಿರಲಿಲ್ಲ. ಯಾನು ಯಾರಿಗೂ ಏನನ್ನೂ ಕೆಟ್ಟದು ಬಯಸಿಲ್ಲ. ನನಗೇನು ಸರಿ ಅನಿಸಿದ್ಯೋ ಅದನ್ನೇ ನಾನು ಮಾಡಿದ್ದೇನೆ ಎಂದು ಪೂನಮ್ ಹೇಳಿದ್ದಾರೆ. ಒಮ್ಮೆ ನಾನು ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದಾಗ, ನನ್ನ ಕುಟುಂಬ ಸದಸ್ಯರೇ ನನಗೆ ಒಳಗೆ ಬರಲು ಅವಕಾಶ ನೀಡಲಿಲ್ಲ. ನಾನೇ ತಪ್ಪು ಮಾಡಿದ್ದೇನೆ ಎಂದು ಅವರು ಅಂದುಕೊಂಡಿದ್ದರು. ಇದರಿಂದಾಗಿ ನನ್ನ ಮನಸ್ಸೇ ಮುರಿದು ಹೋಗಿತ್ತು. ಕನಿಷ್ಠ ನನ್ನನ್ನು ಭೇಟಿ ಮಾಡಿ ಮತ್ತು ನನ್ನನ್ನು ನಿರ್ಣಯಿಸುವ ಮೊದಲು ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಎಂದು ಅವರು ಮನವಿ ಮಾಡಿದ್ದರು.
Breaking: ಕ್ಯಾನ್ಸರ್‌ನಿಂದ ನಟಿ ಪೂನಮ್ ಪಾಂಡೆ ನಿಧನ!
ಇನ್ನು ಸ್ಯಾಮ್ ಬಾಂಬೆ ಜೊತೆಗಿನ ಮದುವೆಯ ಹಾಗೂ ಅದು ಮುರಿದು ಹೋದ ಬಗ್ಗೆ ಮಾತನಾಡಿದ್ದ ಪೂನಂ, ಆ ನಾಲ್ಕು ವರ್ಷಗಳಲ್ಲಿ ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಆದರೆ, ಯಾವುದನ್ನೂ ಕಂಟ್ರೋಲ್ ಮಾಡಲು ನನ್ನಿಂದ ಆಗಲಿಲ್ಲ. ಬಹುಶಃ ಸ್ವಲ್ಪ ತಾಳ್ಮೆಯಿಂದ ಇದ್ದಿದ್ದರೆ ನನ್ನ ಮದುವೆ ಉಳಿಯುತ್ತಿತ್ತು. ನನ್ನ ಜೀವನದಲ್ಲಿ ನಾನು ಸಾಧನೆ ಮಾಡುತ್ತೇನೆ ಎಂದು ಅನಿಸುತ್ತಿಲ್ಲ. ನನ್ನ ಸಾವಿಗೆ ಮರುಕಪಡೋರು ಯಾರೂ ಇರೋದಿಲ್ಲ ಎಂದು ಹೇಳಿದ್ದರು.
ಬೋಲ್ಡ್ ಫೋಟೋಸ್, ಸೆಕ್ಸೀ ಲುಕ್‌ನಿಂದ ಫೇಮಸ್ ಆಗಿದ್ದ ಹಾಟ್ ನಟಿ ಪೂನಂ ಪಾಂಡೆ