Film Review: ನಿಜಾಮ್ ಶಾಹಿ ಮನಸ್ಥಿತಿಯನ್ನು ತಿಳಿಸುವ 'ರಜಾಕರ್' ಸಿನಿಮಾದಲ್ಲಿ ಕನ್ನಡಿಗರ ಸ್ವಾಭಿಮಾನದ ಅನಾವರಣ!

By Govindaraj SFirst Published Mar 15, 2024, 11:27 AM IST
Highlights

ರಜಾಕಾರರ ದಬ್ಬಾಳಿಕೆ ಕ್ರೌರ್ಯ, ಇವೆಲ್ಲವನ್ನೂ ತಡೆದು ಎದುರಿಸಿ ನಡೆದ ಹೋರಾಟ, ಅಂತಿಮವಾಗಿ ಭಾರತೀಯ ಸೇನೆ ರಜಾಕಾರರ ಹುಟ್ಟಡಗಿಸಿದ್ದು ಇವೆಲ್ಲವನ್ನೂ ತಿಳಿಸುವ ನೈಜ ಇತಿಹಾಸದ ಕಥಾಹಂದರ ಇರುವ ಸಿನಿಮಾ 'ರಜಾಕರ್'.

ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್

ರಜಾಕಾರರ ಹುಟ್ಟಡಗಿಸಿದ ಹೈದರಾಬಾದ್ ವಿಮೋಚನೆಯ ಕಥೆಯೇ ರಜಾಕರ್.. 1947 ರಲ್ಲಿ ಭಾರತ ಸ್ವತಂತ್ರಗೊಂಡ ಬಳಿಕ  565 ರಾಜಸಂಸ್ಥಾನಗಳ ಪೈಕಿ ಕಾಶ್ಮೀರ ಮತ್ತು ಹೈದರಾಬಾದ್ ಸಂಸ್ಥಾನಗಳು ಭಾರತದ ಒಕ್ಕೂಟದೊಂದಿಗೆ ವಿಲೀನಗೊಳ್ಳಲು ನಕಾರ ತೋರಿತ್ತು. ಈ ಪೈಕಿ ಕಾಶ್ಮೀರದ ಜೊತೆ ಭಾರತದ ಹೃದಯ ಭಾಗದಲ್ಲಿದ್ದ ಹೈದರಾಬಾದ್ ಸಂಸ್ಥಾನ ಪಾಕಿಸ್ತಾನಕ್ಕೆ ಬೆಂಬಲವನ್ನೂ ಸೂಚಿಸಿತ್ತು.  ತಾನೊಂದು ಪಾಕಿಸ್ತಾನದಂತೆಯೇ ಸ್ವತಂತ್ರ ದೇಶವಾಗಬೇಕೆನ್ನುವ ಅದರ ಬಯಕೆ ಈಡೇರುವ ಸಲುವಾಗಿ ಹುಟ್ಟಿಕೊಂಡಿದ್ದೇ ರಜಾಕಾರರ ಸೇನೆ. ತಮ್ಮ ಸಿದ್ದಾಂತ, ಉದ್ದೇಶಗಳಿಗೆ ಒಪ್ಪದ ಹೈದರಾಬಾದ್ ಸಂಸ್ಥಾನದ ಪ್ರಜೆಗಳ ಮೇಲೆ ನಡೆದಿದ್ದು ಭೀಕರ ಮಾರಣಹೋಮ. ಈ ವೇಳೆ ನಡೆದ ರಜಾಕಾರರ ದಬ್ಬಾಳಿಕೆ ಕ್ರೌರ್ಯ, ಇವೆಲ್ಲವನ್ನೂ ತಡೆದು ಎದುರಿಸಿ ನಡೆದ ಹೋರಾಟ, ಅಂತಿಮವಾಗಿ ಭಾರತೀಯ ಸೇನೆ ರಜಾಕಾರರ ಹುಟ್ಟಡಗಿಸಿದ್ದು ಇವೆಲ್ಲವನ್ನೂ ತಿಳಿಸುವ ನೈಜ ಇತಿಹಾಸದ ಕಥಾಹಂದರ ಇರುವ ಸಿನಿಮಾ 'ರಜಾಕರ್'.

ಕನ್ನಡ ಸೇರಿ ಪಂಚ ಭಾಷೆಗಳಲ್ಲಿ ನಿರ್ಮಾಣವಾಗಿರುವ ಪ್ಯಾನ್ ಇಂಡಿಯಾ ಸಿನಿಮಾ: ಯಾತ ಸತ್ಯನಾರಾಯಣ ನಿರ್ದೇಶನದಲ್ಲಿ ವೇದಿಕಾ, ಅನಸೂಯಾ, ರಾಜ್ ಅರ್ಜುನ್, ಬಾಬಿ ಸಿಂಹ ಮತ್ತು ಮಕರಂದ್ ದೇಶಪಾಂಡೆ, ಪ್ರೇಮ ಮುಂತಾದ ಕಲಾವಿದರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಮರವೀರ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಗುಡೂರು ನಾರಾಯಣರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ತೆಲುಗು,  ಹಿಂದಿ, ಮರಾಠಿ, ತಮಿಳು, ಮಲಯಾಳಂ ಮತ್ತು ಕನ್ನಡ - ಇತರ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಒಟ್ಟಾರೆಯಾಗಿ ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ತಪ್ಪಾಗಲಾರದು.

ರೆಡ್ ಡ್ರೆಸ್‌ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಸಖತ್ ಹಾಟ್: ರಾ.. ರಾ.. ರಕ್ಕಮ್ಮ.. ನೀ ತುಂಬಾ ಕ್ಯೂಟಮ್ಮಾ ಎಂದ ಫ್ಯಾನ್ಸ್‌

ಹೈದರಾಬಾದ್ ಕರ್ನಾಟಕದಲ್ಲಿ ನಡೆದ ಹೋರಾಟದ ಚಿತ್ರಣ, ಕನ್ನಡಿಗರ ಸ್ವಾಭಿಮಾನದ ಅನಾವರಣ: ಚಿತ್ರದಲ್ಲಿ 1948ರಲ್ಲಿ ಹೈದರಾಬಾದ್ ನ ಬೇರೆ ಬೇರೆ ಪ್ರಾಂತ್ಯಗಳಲ್ಲಿ ನಡೆಯುವ ರೈತ ಹೋರಾಟ, ಮಹಿಳಾ ಹೋರಾಟವನ್ನು ಚಿತ್ರಿಸಲಾಗಿದೆ. ಈ ವೇಳೆ ಹೈದರಾಬಾದ್ ಸಂಸ್ಥಾನಕ್ಕೆ ಸೇರಿದ ಕರ್ನಾಟಕದ ಕೆಲವು ಭಾಗಗಳಲ್ಲಿ ನಡೆದ ಹೋರಾಟದ ಘಟನೆಗಳನ್ನೂ ಚಿತ್ರಿಸಲಾಗಿದೆ. ಕರ್ನಾಟಕದ ಈಗಿನ ಕಲ್ಬುರ್ಗಿ, ಬೀದರ್ ಭಾಗಗಳಲ್ಲಿ ನಡೆದ ರಜಾಕಾರರ ವಿರುದ್ಧದ ಹೋರಾಟ ಕನ್ನಡಿಗರ ಸ್ವಾಭಿಮಾನವನ್ನು ಪರಿಚಯಿಸುತ್ತದೆ. ಉಳಿದಂತೆ ಆಂಧ್ರಪ್ರದೇಶ, ತೆಲಂಗಾಣದ ವಿವಿಧ ಭಾಗಗಳಲ್ಲಿ ನಡೆದ ಚಳುವಳಿಯ ದೃಶ್ಯಗಳು ಸಿನಿಮಾದಲ್ಲಿದೆ. ನರಸಿಂಹರೆಡ್ಡಿ, ರಾಜಾರೆಡ್ಡಿ, ಆಯಿಲಮ್ಮ ಮುಂತಾದ ಸ್ಥಳೀಯ ನಾಯಕರ ಮಂದಾಳತ್ವವನ್ನೂ ಚಿತ್ರ ಬೆಳಕು ಚೆಲ್ಲಬಲ್ಲದು

ವಿವಾದ ಗೆದ್ದ ಸಿನಿಮಾ ರಜಾಕರ್: ಸಿನಿಮಾ ಬಿಡುಗಡೆಗೆ ಮಾರ್ಚ್ 15ರಂದು ದಿನಾಂಕ ಗೊತ್ತುಪಡಿಸಲಾಗಿದ್ದರೂ ಚಿತ್ರದ ಕುರಿತು ಒಂದಿಷ್ಟು ಆಕ್ಷೇಪಗಳಿದ್ದವು. ಚಿತ್ರವು ಮುಸ್ಲಿಂ ಮತ್ತು ಹಿಂದುಗಳ ಭಾವನೆಗೆ ಧಕ್ಕೆ ತರಬಹುದು. ಎರಡೂ ಸಮುದಾಯಗಳ ನಡುವೆ ವಿಷ ಬೀಜ ಬಿತ್ತಬಹುದು. ಹಾಗಾಗಿ ಚಿತ್ರ ಪ್ರದರ್ಶನವನ್ನು ತಡೆಯುವಂತೆ ಎಪಿಸಿಆರ್ ನ ತೆಲಂಗಾಣ ಚಾಪ್ಟರ್ ನ ಉಪಾಧ್ಯಕ್ಷ, ಅಡ್ವೋಕೇಟ್ ಅಫ್ಸರ್ ಜಹಾನ್ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಈ ವೇಳೆ ಸೆನ್ಸರ್ ಬಗ್ಗೆ ಉಲ್ಲೇಖಿಸಿ ಘನ ನ್ಯಾಯಾಲಯ ಚಿತ್ರ A ಸರ್ಟಿಫಿಕೇಟ್ ಪಡೆದಿದ್ದು ವಯಸ್ಕರಷ್ಟೇ ನೋಡಬಹುದಾಗಿದ್ದರಿಂದ  ಮೇಲ್ಮನವಿಯನ್ನು ಉಲ್ಲೇಖಿಸಿ ಚಿತ್ರ ಪ್ರದರ್ಶನ ತಡೆಗೆ ನಿರಾಕರಿಸಿದೆ. ಮಾರ್ಚ್ 14 ರಂದು ತೀರ್ಪು ಪ್ರಕಟಗೊಂಡಿದ್ದು ಒಂದೇ ದಿನದಲ್ಲಿ ಚಿತ್ರ ದೇಶದಾದ್ಯಂತ ಬಿಡುಗಡೆಗೊಳ್ಳುತ್ತಿದೆ.

ಸಿನಿಮಾದಲ್ಲಿ ಧಾರ್ಮಿಕ ವಿಚಾರಗಳ ಪ್ರಚುರತೆ ಹೇಗೆ? ಅಸಲಿಗೆ ಚಿತ್ರದಲ್ಲಿ ಏನಿದೆ?: ಹೈದರಾಬಾದ್ ಸಂಸ್ಥಾನದ ಸ್ವತಂತ್ರ ರಾಷ್ಟ್ರದ ಕನಸಿಗೆ ಮತವೆಂಬ ದಾಳವನ್ನು ನಿಜಾಮ ಸೈನ್ಯ ಬಳಸಿಕೊಂಡಿದ್ದು ಸತ್ಯ ಸಂಗತಿ. ಮತ ಬದಲಾಯಿಸಿ ಇಲ್ಲ, ದೇಶ ಬಿಡಿ ಎಂಬ ಧೋರಣೆಯಲ್ಲೇ ರಜಾಕಾರರ ಸೈನ್ಯ ಕ್ರೌರ್ಯ ಮೆರೆದಿತ್ತು. ಆದರೆ ಇದೇ ವೇಳೆ ಕುರಾನ್ ಓದುವ ಮಾನವತಾವಾದಿ ಮುಸ್ಲಿಂ ಪ್ರಜೆಗಳೂ ಈ ಸಂಸ್ಥಾನದಲ್ಲಿ ಇದ್ದರು ಎಂಬುದನ್ನು ಚಿತ್ರ ಉಲ್ಲೇಖಿಸುತ್ತದೆ.‌ ಮತದ ದಾಳವನ್ನು ಕಾಸಿಂ ರಜ್ವಿ ಹೇಗೆ ಸ್ವಾರ್ಥಕ್ಕೆ ಬಳಸಿಕೊಂಡ ಕೊನೆಗೆ ಇಸ್ಲಾಂ ಹೆಣ್ಣುಮಗಳೊಬ್ಬಳು ಈ ಕ್ರೌರ್ಯಕ್ಕೆ ಹೇಗೆ ತೆರೆ ಎಳೆದಳು ಎಂಬ ಚಿತ್ರಣ ಹಿಂದೂ - ಮುಸ್ಲಿಂ ಸಾಮರಸ್ಯವನ್ನು ಸಾರಬಲ್ಲದು. ಹಾಗಾಗಿ ಈ ಮತೀಯವಾದವನ್ನೂ ಸಿನಿಮಾ ಬ್ಯಾಲೆನ್ಸ್ ಮಾಡಿದೆಯೆಂದೇ ಹೇಳಬಹುದು. ಉಕ್ಕಿನ ಮನುಷ್ಯನ ಗಟ್ಟಿ ನಿರ್ಧಾರಗಳು ದೇಶವನ್ನು ರಕ್ಷಿಸಿದ್ದು, ರಾಜನೀತಿಗಳು, ಕೆ.ಎಂ ಮುನ್ಷಿ, ಕೃಷ್ಣ ಮೆನನ್ ರ ಸಮಯೋಚಿತ ಸಲಹೆಗಳು, ಆಪರೇಷನ್ ಪೋಲೋದ ಯಶಸ್ವಿ ಹೇಗಾಯಿತು ಎಂಬುದನ್ನು ಸೂಕ್ಷ್ಮವಾಗಿ ಚಿತ್ರೀಕರಿಸಲಾಗಿದೆ.

ಬ್ಯಾಕ್ಲೆಸ್ ರೆಡ್‌ ಡ್ರೆಸ್‌ನಲ್ಲಿ ಟೆಂಪ್ರೆಚರ್‌ ಹೆಚ್ಚಿಸಿದ ಗಿಲ್ಲಿ ನಟಿ: ಮದುವೆ ನಂತರ ಸಿಕ್ಕಾಪಟ್ಟೆ ಬೋಲ್ಡ್ ಆದ ರಕುಲ್ ಪ್ರೀತ್

ಅದ್ಭುತ ಸಂಭಾಷಣೆ, ಉತ್ತರ ಕರ್ನಾಟಕದ ಭಾಷೆಯ ಸೊಗಡು: ಉತ್ತರ ಕರ್ನಾಟಕದ ಭಾಷಾ ಸೊಗಡು, ಜಾತ್ರೆಯ ವೈಭವದೊಂದಿದೆ ಕೆಲವೊಂದಿಷ್ಟು ಆಚರಣೆಗಳೂ ಚಿತ್ರದಲ್ಲಿದೆ. ಪ್ರತೀ ಎಳೆ ಎಳೆಯಲ್ಲೂ ಬರುವ ಪ್ಯಾಟ್ರಿಯಾಟಿಸಂ ಮ್ಯೂಸಿಕ್ ವಂದೇ ಮಾತರಂ ಗುನುಗಿಸುತ್ತದೆ. ಐದು ಭಾಷೆಗಳ ಸಿನಿಮಾ ಆದರೂ ಅದ್ಭುತ ಕನ್ನಡ ಸಂಭಾಷಣೆ ಆಗಾಗ ಪ್ರೇಕ್ಷಕನಿಗೆ ದೇಶಭಕ್ತಿ ಹುಟ್ಟಿಸುತ್ತದೆ. ಸಿನಿಮಾದಲ್ಲಿ ಹಾಡುಗಳಿಗೆ ಜಾಗ ಕಡಿಮೆಯಾದರೂ 3 ಹಾಡುಗಳು ಚಿತ್ರದಲ್ಲಿದೆ. ಹಾಗಂತ ಎಲ್ಲೂ ಬೇಕೆಂದು ತುರುಕಿದ್ದಲ್ಲ. ತುರ್ಕಿಸ್ತಾನದ ವಿರುದ್ಧ ಅವೆಲ್ಲಾ ಆಗಲೇ ಹುಟ್ಟಿದವೇನೋ ಅನ್ನಿಸುವಂತದ್ದು. ನೈಜ ಕಥೆಯಾದರೂ ಸಿನಿಮಾಕ್ಕೆ ಬೇಕಾದ ಮೇಕಿಂಗ್, ಫೈಟ್ ಸೀನ್ ಗಳು ಸಿನಿಮಾಕ್ಕೆ ಹೊಸ ಶಕ್ತಿಯನ್ನೇ ತುಂಬಿದೆ. ಒಟ್ಟಿನಲ್ಲಿ ಸಿನಿಮಾ ಪ್ರೇಕ್ಷಕರ ಹೃದಯ ತಲುಪುತ್ತದೆ. ಭಾರತದ ಹೃದಯಕ್ಕಾದ ಗಾಯವನ್ನು ಬೇರೆಡೆಗೆ ಹಬ್ಬಲು ಬಿಡದ ಸರ್ದಾರ್ ಪಟೇಲರ ದೃಢ ನಿರ್ಧಾರ ಮತ್ತೊಂದು ಪಾಕಿಸ್ತಾನವನ್ನು ನಿರ್ಮಿಸಲಿಲ್ಲ ಎಂಬ ನಿಟ್ಟುಸಿರಿನಲ್ಲಿ ಸಿನಿಮಾ ತೆರೆ ಕಾಣುತ್ತದೆ. ಇದರ ಜೊತೆಗೆ ಮಂತ್ರಿಗಳನ್ನು ನಂಬಿ ಕೆಟ್ಟ ರಾಜನ ಕಥೆಯನ್ನೂ ರಜಾಕರ್ ಸಿನಿಮಾ ಹೇಳಬಲ್ಲದು.

click me!