* ಭಾರತೀಯ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಶುಕ್ರದೆಸೆ, ಸಖತ್ ವಹಿವಾಟು
* 2025ರ ಹೊತ್ತಿಗೆ ಈ ಮಾರುಕಟ್ಟೆಯ ಒಟ್ಟು ವಹಿವಾಟು ದುಪ್ಪಟ್ಟಾಗಲಿದೆ ಎಂಬ ಅಭಿಪ್ರಾಯ
* ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಶುರುವಾಗಿದೆ
Tech Desk: ಕೋವಿಡ್ (Covid-19) ಸಾಂಕ್ರಾಮಿಕ ಸ್ಥಿತಿಯು ನಮ್ಮ ಬದುಕಿನ ಬಹಳಷ್ಟು ಚಿತ್ರಣಗಳನ್ನು ಬದಲಿಸಿದೆ. ನ್ಯೂ ನಾರ್ಮನಲ್ ಲೈಫ್‌ಗೆ ಹೊಂದಾಣಿಕೆಯಾಗುವಂತೆ ಮಾಡಿದೆ. ಶಿಕ್ಷಣದಿಂದ ಹಿಡಿದು ಎಲ್ಲದರಲ್ಲೂ ಬದಲಾವಣೆಗೆ ಕಾರಣವಾಗಿದೆ. ಪರಿಣಾಮ, ಇದು ತಾಂತ್ರಿಕ ಅಗತ್ಯಗಳನ್ನು ಪೂರೈಸಲು, ಇಲ್ಲವೇ ಸಂಶೋಧನೆಗೂ ದಾರಿ ಮಾಡಿಕೊಟ್ಟಿದೆ. ಇದರ ಮತ್ತೊಂದು ಮಗ್ಗುಲವೇ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆ (Second hand smartphone Market) ವಿಸ್ತರಣೆ. ಹೌದು, ಭಾರತೀಯ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆ ಯಾರೂ ಊಹಿಸದ ರೀತಿಯಲ್ಲಿ ಬೆಳವಣಿಗೆಯನ್ನು ದಾಖಲಿಸುತ್ತಿದೆ ಎಂದು ವರದಿಗಳು ಹೇಳುತ್ತಿವೆ.
ಮುಂದಿನ ಮೂರು ವರ್ಷಗಳಲ್ಲಿ ಅಂದರೆ 2025ರ ಹೊತ್ತಿಗೆ ಭಾರತೀಯ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯ ಮೌಲ್ಯವು ದುಪ್ಪಟ್ಟು ಆಗಲಿದೆ. ಹೆಚ್ಚು ಕಡಿಮೆ ಅದರ ವಹಿವಾಟವು 5.6 ಬಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಇದು ಅಂದಾಜ 34,500 ಕೋಟಿ ರೂಪಾಯಿಯಾಗಲಿದೆ! ಸಾಮಾನ್ಯವಾಗಿ ಹೊಸ ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯ ವಿಸ್ತರಣೆಯು ಸಹಜ.ಆದರೆ, ಅದರ ಜತೆಗೆ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯೂ ವಿಸ್ತರಣೆಯಾಗುತ್ತಿರುವದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
undefined
ಇದನ್ನೂ ಓದಿ: Meta Fastest Super Computer: ಫೇಸ್‌ಬುಕ್‌ನಿಂದ ವಿಶ್ವದ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್!
ಭಾರತೀಯ ಸ್ಮಾರ್ಟ್‌ಫೋನ್ ಉದ್ಯಮದ ಬೆಳವಣಿಗೆಯನ್ನು ಸದಾ ವಿಶ್ಲೇಷಣೆ ಮಾಡುವ, ನಿಗಾ ಇಡುವ ಐಸಿಇಎ (India Cellular and Electronics Association -ICEA) ಮತ್ತು ಸಂಶೋಧನಾ ಸಂಸ್ಥೆ ಐಡಿಸಿ (IDC) ಎರಡು ಸಂಸ್ಥೆಗಳು ಜತೆಗೂಡಿ ತಯಾರಿಸಿರುವ ವರದಿಯಲ್ಲಿ ಈ ಮಾಹಿತಿಯು ಬಹಿರಂಗಗೊಂಡಿದ್ದು, 2025ರ ಹೊತ್ತಿಗೆ ಭಾರತೀಯ ಸೆಕೆಂಡ್ ಮಾರುಕಟ್ಟೆಯು ವಹಿವಾಟು ಅಂದಾಜು 43,500 ಕೋಟಿ ರೂಪಾಯಿಗೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಗ್ರಾಹಕರು ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 25 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ವ್ಯಾಪಾರ ಮಾಡಿ 2.3 ಶತಕೋಟಿ ಡಾಲರ್ (ಸುಮಾರು 17,250 ಕೋಟಿ ರೂಪಾಯಿ) ಆದಾಯವನ್ನು ಸೃಷ್ಟಿಸಿದ್ದಾರೆ. ಭಾರತೀಯ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಂದು ಸ್ಮಾರ್ಟ್‌ಫೋನ್ ಬೆಲೆ ಸರಾಸರಿ 94 ಡಾಲರ್ (ಸುಮಾರು 7,050 ರೂ.) ಆಗಿದೆ. ಅಥವಾ ಸಂಶೋಧನಾ ವರದಿಯಾ ಪ್ರಕಾರ ಅದು 6,900 ರೂಪಾಯಿ ಆಗಿರುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: No.1 Smartpone ಒಪ್ಪೋ, ವಿವೋ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಆ್ಯಪಲ್, 6 ವರ್ಷದ ಬಳಿಕ ಚೀನಾದಲ್ಲಿ ಮೋಡಿ!
ಭಾರತವು ತನ್ನ ಕಾರ್ಮಿಕ ವೆಚ್ಚವನ್ನು ನಿಯಂತ್ರಿಸುವ ಮೂಲಕ ಮರು-ಉತ್ಪಾದನೆ ಮತ್ತು ಮರು-ವಾಣಿಜ್ಯದ ಜಾಗತಿಕ ಕೇಂದ್ರವಾಗುವ ಪ್ರಯತ್ನ ಮಾಡುತ್ತಿದೆ. ಮರು-ವಾಣಿಜ್ಯದ ಆಳವಾದ ಬೆಳವಣಿಗೆಯು ವೈಶಿಷ್ಟ್ಯದ ಫೋನ್‌ಗಳಿಂದ ಸ್ಮಾರ್ಟ್‌ಫೋನ್‌ಗಳಿಗೆ ವಲಸೆಯನ್ನು ಸಕ್ರಿಯಗೊಳಿಸುವ ಮೂಲಕ ಡಿಜಿಟಲ್ ವಿಭಜನೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಬೆಳವಣಿಗೆಯು ಇ-ತ್ಯಾಜ್ಯದಲ್ಲಿ ಗಮನಾರ್ಹ ಇಳಿಕೆಯಾಗುವುದನ್ನು ಖಚಿತಪಡಿಸುತ್ತದೆ. ಏಕೆಂದರೆ ಮರುಬಳಕೆಯು ಜನರಿಗೆ ಹೊಸ ರೂಢಿಯಾಗಲಿದೆ ಎಂದು ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (India Cellular and Electronics Association) ಅಧ್ಯಕ್ಷ ಪಂಕಜ್ ಮೊಹಿಂದ್ರೂ (Pankaj Mohindroo) ವರದಿಯ ಬಿಡುಗಡೆಯ ಸಂದರ್ಭದಲ್ಲಿ ಹೇಳಿದರು.
ಅತಿ ಹೆಚ್ಚು ಮಾರಾಟವಾಗುವ ಸಾಧನ: ಭಾರತೀಯ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಶೇ.95ರಷ್ಟು ಸ್ಮಾರ್ಟ್‌ಫೋನ್‌ಗಳು ಅವರ ಇರುವ ಸ್ಥಿತಿಯಲ್ಲಿ ಮಾರಾಟವಾಗುತ್ತವೆ. ಉಳಿದ ಶೇ.5ರಷ್ಟು ಸ್ಮಾರ್ಟ್‌ಫೋನ್‌ಗಳಿಗೆ ಸಣ್ಣಪುಟ್ಟ ರಿಪೇರಿ, ಮರು ವಿನ್ಯಾಸಗೊಳಿಸುವ ಅಗತ್ಯವಿರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಸಾಧನಗಳ ಪೈಕಿ ಸ್ಮಾರ್ಟ್‌ಫೋನ್‌ಗಳು ಪ್ರಸ್ತುತ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಾಧನ(ಶೇಕಡಾ 90 ಕ್ಕಿಂತ ಹೆಚ್ಚು)ಗಳಾಗಿವೆ. ಆ ನಂತರದಲ್ಲಿ ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಗೇಮಿಂಗ್ ಕನ್ಸೋಲ್‌ಗಳು ಮತ್ತು ಕ್ಯಾಮೆರಾಗಳಂತಹ ಸಾಧನಗಳ ಪ್ರಮಾಣವು ಹೆಚ್ಚುತ್ತಿದೆ ಎಂದು ವರದಿ ಹೇಳಿದೆ.
ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಖರೀದಿಸುವ ಶೇಕಡಾ 78 ರಷ್ಟು ಬಳಕೆದಾರರ ಮಾಸಿಕ ಆದಾಯವು 30 ಸಾವಿರ ರೂ.ಗಿಂತ ಕಡಿಮೆಯಿದೆ ಎಂದು ವರದಿ ಅಂದಾಜಿಸಿದೆ. ಶೇಕಡಾ 18 ರಷ್ಟು ಮಂದಿಯ ಮಾಸಿಕ ಆದಾಯ ರೂ. 30,000-ರೂ 50,000. ಇದು ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್‌ಗಳ ಬೇಡಿಕೆಯನ್ನು ಹೆಚ್ಚಿಸುವಲ್ಲಿ ಕೈಗೆಟುಕುವ ಬೆಲೆ ಶ್ರೇಣಿಯನ್ನು ಪ್ರಮುಖ ಅಂಶವನ್ನಾಗಿ ಮಾಡಿದೆ ಎಂದು ವರದಿಯಲ್ಲಿ ವಿಶ್ಲೇಷಣೆ ಮಾಡಲಾಗಿದೆ.