WEB SPECIAL

ಬೆಂಗಳೂರು ಬೆಂಗಾಳಿಗಳ ದುರ್ಗಾ ಪೂಜೆಯ ಒಂದು ಝಲಕ್

Oct 19, 2018, 9:15 PM IST

ಇಡೀ ಭಾರತ ದೇಶ ಇದೀಗ ದಸರಾ ಸಂಭ್ರಮದ ಮೂಡಿನಲ್ಲಿದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರು ದಸರಾ ಹಬ್ಬಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಾರೆ.  
ಅಂದಹಾಗೇ ದಸರಾ ಅಂದಾಕ್ಷಣ ನಮಗೆ ನೆನಪಾಗೋದು ಮೈಸೂರು ದಸರಾ ಮಾತ್ರ, ಆದರೆ ದೇಶಾದ್ಯಂತ ದಸರಾವನ್ನು ವಿಧವಿಧವಾಗಿ ಆಚರಣೆ ಮಾಡುತ್ತಾರೆ. ಕೆಲವೊಬ್ಬರು ನವಮಿ, ದಶಮಿ ಅಂದರೆ ಇನ್ನು ಕೆಲವರು ದುರ್ಗಾ ಪೂಜಾ ಅಂತ ಕರಿತಾರೆ. ದಸರಾ ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ದೇವಿಯನ್ನು ಪೂಜಿಸುತ್ತಾರೆ. 
ದಸರಾವನ್ನು ಇನ್ನೂ ವಿಜೃಂಭಣೆಯಿಂದ ಆಚರಿಸುವುದು ಬಂಗಾಳಿಗಳು. ಬಂಗಾಳದಲ್ಲಿ ದಸರಾ ಎಂದರೆ ದುರ್ಗಾ ಪೂಜೆ. ದುರ್ಗಾ ಪೂಜೆ ಬಂತೆಂದರೆಸಂಜೆ ವೇಳೆ ಹಕ್ಕಿಗಳು ಗೂಡು ಸೇರುವಂತೆ  ಬಂಗಾಳಿಗಳು ಜಗತ್ತಿನ ಎಲ್ಲೆಡೆ ಇದ್ದರೂ, ತಮ್ಮ ತವರೂರು ಸೇರುತ್ತಾರೆ. ಆದರೆ ಅನಿವಾರ್ಯ ಕಾರಣಗಳಿಂದ ತಮ್ಮ ಊರಿಗೆ ಮರಳಲಾಗದವರು, ತಾವಿದ್ದಲ್ಲೇ ದುರ್ಗಾಪೂಜೆಯನ್ನು ಬಹಳ ವಿಜೃಂಭಣೆಯೊಂದಿಗೆ ಮಾಡುತ್ತಾರೆ.

ಬೆಂಗಳೂರಿನಲ್ಲೂ ಬಹಳ ದೊಡ್ಡ ಸಂಖ್ಯೆಯಲ್ಲಿ ಬಂಗಾಳಿಗಳು ನೆಲೆಸಿದ್ದಾರೆ... ಇಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿದ್ದಾರೆ. ಹಾಗೆ ನೋಡುವುದಾದರೆಪಶ್ಚಿಮ ಬಂಗಾಳದ ಸಂಸ್ಕೃತಿಯಲ್ಲಿ  ದುರ್ಗೆಯನ್ನು ಹೇಗೆ ಆರಾಧಿಸುತ್ತಾರೆ? ಅವರ ವಿಧಿ ವಿಧಾನಗಳೇನು? ತಿಳಿದುಕೊಳ್ಳೋಣ ಇವತ್ತಿನ ಈ ಸ್ಟೋರಿಯಲ್ಲಿ....