ಮಾವು ಮತ್ತು ಗೇರು ಬೆಳೆಗಾರರಿಗೆ ಅಗತ್ಯ ಸಲಹೆಗಳು

By Suvarna News  |  First Published Feb 19, 2020, 2:41 PM IST

ಮಾವು ಮತ್ತು ಗೇರು ಬೆಳೆಗಾರರಿಗೆ ಅಗತ್ಯ ಸಲಹೆಗಳು. ಹಾಗೂ ರೋಗಾ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ಮುಂದೆ ಆಗಬಹುದಾದ ಹಾನಿಗಳನ್ನು ತಡೆಗಟ್ಟಬಹುದು. ಅದರ ಮಾಹಿತಿ ಈ ಕೆಳಗಿನಂತಿದೆ.


ಶಿವಮೊಗ್ಗ, (ಫೆ.19): ಬೇಸಿಗೆ ಶುರುವಾಗಿದೆ. ಮತ್ತೊಂದೆಡೆ ಹಣ್ಣಿನ ರಾಜ ಮಾವು ಮಾರುಕಟ್ಟೆಗೆ ಲಗ್ಗೆ ಇಡುವ ಸಮಯ. ಇದರ ಮಧ್ಯೆ ತೋಟಗಾರಿಕೆ ಇಲಾಖೆಯು ಮಾವಿನಲ್ಲಿ ಜಿಗಿಹುಳುಗಳು ಮತ್ತು ಗೇರು ಬೆಳೆಯಲ್ಲಿ ಟೀ ಸೊಳ್ಳೆ ಕೀಟಗಳ ಭಾದೆಗಳನ್ನು ತಡೆಗಟ್ಟಲು ಸೂಕ್ತ ಮುನ್ನೆಚರಿಕೆ ಕ್ರಮಗಳನ್ನು ವಹಿಸುವಂತೆ ರೈತರಿಗೆ ಸೂಚನೆ ನೀಡಿದೆ.

ಮಾವಿನಲ್ಲಿ ಜಿಗಿಹುಳುಗಳು ಮತ್ತು ಗೇರು ಬೆಳೆಯಲ್ಲಿ ಟೀ ಸೊಳ್ಳೆ ಕೀಟಗಳು ಮೃದು ಭಾಗಗಳಾದ ಚಿಗುರು ಮತ್ತು ಹೂ ಗೊಂಚಲುಗಳನ್ನು ಚೂಪಾದ ಕೊಂಬಿನಿದ ಚುಚ್ಚಿ ರಸ ಹೀರುವುದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ 25 ರಿಂದ 75 ರಷ್ಟು ಫಸಲು ನಷ್ಟವಾಗುವುದು. 

Latest Videos

undefined

ಆದ್ದರಿಂದ ರೈತರು ಈ ಹಂತದಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ಮುಂದೆ ಆಗಬಹುದಾದ ಹಾನಿಗಳನ್ನು ತಡೆಗಟ್ಟಬಹುದು ಎಂದು ತೋಟಗಾರಿಕಾ ಉಪನಿರ್ದೇಶಕರು ತಿಳಿಸಿರುತ್ತಾರೆ.

ಬಹು ಬೆಳೆ ಬೇಸಾಯ, ಉತ್ತಮ ಆದಾಯ: ಇದು 21 ವರ್ಷದ ಯುವ ರೈತನ ಚಮತ್ಕಾರ

* ಮಾವು ಮತ್ತು ಗೇರು ಗಿಡಗಳಲ್ಲಿ ಕಂಡುಬರುವ ಒಣಗಿದ ರೆಂಬೆ ಕೊಂಬೆಗಳನ್ನು ಕತ್ತರಿಸಿ ತೆಗೆಯಬೇಕು. ಕತ್ತರಿಸಿದ ಗಿಡದ ಭಾಗಕ್ಕೆ ಬೋರ್ಡೋ ಅಥವಾ ಕಾಪರ್ ಆಕ್ಸಿ ಕ್ಲೋರೈಡ್ ದ್ರಾವಣ ಹಚ್ಚಬೇಕು. 

* ಬುಡದ ಸುತ್ತಲೂ ಉಳುಮೆ ಮಾಡಿ, ಮಣ್ಣನ್ನು ಸಡಿಲಗೊಳಿಸಬೇಕು. ಗೇರು ಬೆಳೆಗೆ ಇಂದಿನಿಂದ ನೀರಾವರಿ ಪ್ರಾರಂಭಿಸಿಸಬಹುದು. ಆದರೆ ಮಾವಿನ ಬೆಳೆಗೆ ಸಣ್ಣ ಮಿಡಿಗಾಯಿ ಬರುವ ಹಂತದವರೆಗೂ ನೀರಾವರಿ ಪ್ರಾರಂಭಿಸಬಾರದು.

* ಮಾವಿನಲ್ಲಿ ಹೂ ಮೊಗ್ಗು ಹೊರಟ ನಂತರ ಹೂ ಮೊಗ್ಗು ಮತ್ತು ಚಿಗುರು ತಿನ್ನುವ ಕೀಟಗಳ ನಿಯಂತ್ರಣಕ್ಕೆ ಡೈಮಿಥೋಯೇಟ್ 1.7 ಮಿಲೀ. ಅಥವಾ ಕ್ಲೋರೋಪೈರಿಫಸ್ 2 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಇದರ ಜೊತೆಗೆ ಐ.ಐ.ಹೆಚ್.ಆರ್ ಮ್ಯಾಂಗೋ ಸ್ಪೆಷಲ್ 5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 

* ಜಿಗಿ ಹುಳು ಮತ್ತು ಬೂದಿ ರೋಗದ ನಿಯಂತ್ರಣಕ್ಕೆ ಡೆಕಾಮೆಥ್ರಿನ್ 1 ಮಿ.ಲೀ. ಆಥವಾ ಇಮಿಡಾಕ್ಲೋಪ್ರಿಡ್ 3 ಮಿ.ಲೀ. ಅಥವಾ 0.5 ಮಿ.ಲೀ ಸೈಪರ್ ಮೆಥ್ರಿನ್ ಇವುಗಳಲ್ಲಿ ಯಾವುದಾದರೂ ಒಂದು ಕೀಟನಾಶಕದ ಜೊತೆಗೆ ಕಾರ್ಬೆಂಡೆಜಿಯಂ 1 ಗ್ರಾಂ ಅಥವಾ ಮ್ಯಾಂಕೊಜೆಬ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ 25-30 ದಿನಗಳಿಗೊಮ್ಮೆ ಅವಶ್ಯಕತೆಗನುಗಣವಾಗಿ ಸಿಂಪಡಿಬೇಕು.

* ಗೋಡಂಬಿ ಬೆಳೆಯಲ್ಲಿ ಟೀ ಸೊಳ್ಳೆ ಮತ್ತು ಚಿಗುರು ತಿನ್ನುವ ಕೀಟಗಳ ನಿಯಂತ್ರಣಕ್ಕೆ ಡೈಮಿಥೋಯೇಟ್ 1.75 ಮಿ.ಲೀ ಅಥವಾ ಲ್ಯಾಂಬ್ಡಸೈಲೋಥ್ರಿನ್ 1 ಮಿ.ಲೀ. ಆಥವಾ ಕ್ಲೋರೋಪೈರಿಪಾಸ್ 50 ಇ.ಸಿ. 1.5 ಮಿ .ಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಡಿಸಬೇಕು. 

ರೈತರು ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದರಿಂದ ಮಾವು ಮತ್ತು ಗೇರು ಬೆಳೆಗಳ ಉತ್ತಮ ನಿರ್ವಹಣೆ ಮಾಡಬಹುದಾಗಿರುತ್ತದೆ.

ವಿಷೇಶ ಸೂಚನೆ: ಔಷಧ ಸಿಂಪರಣೆಯನ್ನು ಹೂ ಬಿಡುವ ಮೊದಲು ಹಾಗೂ ಕಾಯಿ ಕಟ್ಟಿದ ಸಮಯದಲ್ಲಿ ಮಾಡಬೇಕು. 

ಯಾವುದೇ ಕಾರಣಕ್ಕೂ ಹೂ ಬಿಟ್ಟ ಸಮಯದಲ್ಲಿ ಸಿಂಪರಣೆ ಮಾಡಬಾರದು, ಗಿಡಗಳು ಹೂ ಬಿಟ್ಟ ಸಮಯದಲ್ಲಿ ಸಿಂಪರಣೆ ಮಾಡುವುದರಿಂದ ಪರಾಗಸ್ಪರ್ಶ ಕ್ರಿಯೆಗೆಂದು ಬರುವ ಜೇನುನೊಣಗಳಿಗೆ ಹಾನಿಯುಂಟಾಗುತ್ತದೆ.

click me!