WEB SPECIAL
Nov 14, 2018, 10:02 AM IST
ಈ ಮುದ್ದು ಪುಟಾಣಿಯ ಹೆಸರು ಸಾಯಿ ಕೀರ್ತನಾ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗೆಯ ಪಕ್ಕದಲ್ಲಿರುವ ಉಂಬಳೆಬೈಲು ಎಂಬ ಪುಟ್ಟ ಊರಿನ ಕುವರಿ ಈಕೆ. ಶುಭಾ-ರಾಜೇಂದ್ರ ದಂಪತಿಯ ಮುದ್ದು ಮಗಳು.ಈಕೆಯ ಬಾಯಲ್ಲಿ ಪುರಾಣ ಕತೆಗಳನ್ನು ಕೇಳುವುದೇ ಒಂದು ಸೊಗಸು. ಮಲೆನಾಡಿನ ಕವಿ ಶ್ರೀನಿವಾಸ ಉಡುಪ ಅವರ ಕವನ ಕುಂಭಕರ್ಣನ ನಿದ್ದೆ ಹೇಗಿತ್ತು ಅಂತ ಕೀರ್ತನಾ ಹೇಳೋದು ಕೇಳಿ.
ಜಾನಿ ಜಾನಿ ಎಸ್ ಪಾಪ ಎಂದು ಹೇಳುವ ಮಕ್ಕಳೇ ಇರುವ ಈ ಕಾಲದಲ್ಲಿ ಅಚ್ಚ ಕನ್ನಡದ ಕವಿತೆಗಳನ್ನು ಮುದ್ದಾಗಿ, ಆದ್ರೆ ಸ್ಪಷ್ಟವಾಗಿ ಹೇಳುವ ಕೀರ್ತನಾಗೆ ಇನ್ನೂ ಏಳು ವರ್ಷವೂ ತುಂಬಿಲ್ಲ. ಸಣ್ಣ ತರಲೆ, ತುಂಟತನ ಮಾಡುತ್ತಾ ಆಟವಾಡುತ್ತಾ ಇರುವ ಕೀರ್ತನಾ ಅರಳು ಹುರಿದಂತೆ ಮಾತಾಡುವ ಚಿನಕುರಳಿ. ಕವನ ಹೇಳಲು ಪ್ರಾರಂಭಿಸಿದ್ರೆ ಕೇಳುಗರೆಲ್ಲಾ ಗಪ್ಚುಪ್.. ಶಿವಮೊಗ್ಗದ ಸಾಹಿತಿ ರಾಮಮೂರ್ತಿ ತೆಮೆಮನೆಯವರ ಕವನ ಅಳಿಲಿನ ಸೇವೆ ಕೀರ್ತನಾಳ ಬಾಯಲ್ಲಿ ಎಷ್ಟು ಚೆಂದ ಕೇಳುತ್ತದೆ ನೀವೇ ನೋಡಿ..