ನಮ್ಮ ಕಥೆಕೂಟಕ್ಕೆ 6ನೇ ವರ್ಷದ ಹುಟ್ಟುಹಬ್ಬ ಸಂಭ್ರಮ

By Santosh Naik  |  First Published Jun 13, 2022, 5:08 PM IST

ಈ ಕಥಾಕೂಟದಲ್ಲಿ ದೊಡ್ಡ ದೊಡ್ಡ ಬರಹಗಾರರು, ಈಗಾಗಲೆ ಹಲವಾರು ಕತೆ ಬರೆದು ಗುರುತಿಸಿಕೊಂಡವರು ಮಾತ್ರ ಇಲ್ಲ. ಬದಲಿಗೆ ಈ ಕಥೆಕೂಟದಿಂದ ಗುರುತಿಸಿಕೊಂಡ ಕತೆಗಾರರು ಬಹಳಷ್ಟು ಜನರಿದ್ದಾರೆ. ಇನ್ನು ಕೆಲವರು ಕಥೆ ಕೂಟ ಎಂಬ ಸಾಹಿತ್ಯ ಶಾಲೆಯಲ್ಲೆ ಮೊದಲ ಬಾರಿಗೆ ಕತೆ ಬರೆದವರು ಇದ್ದಾರೆ. ಈ ರೀತಿ ಕತೆ ಬರೆಸಿದ ಕೀರ್ತಿ ಕಥಾಕೂಟದ ಸಾರತಿ ಗೋಪಾಲ ಕೃಷ್ಣ ಕುಂಟಿನಿ ಅವರಿಗೆ ಸಲ್ಲಬೇಕು.
 


ಬೆಂಗಳೂರು (ಜೂನ್ 13): ಸಾಮಾಜಿಕ ಜಾಲತಾಣ ವಾಟ್ಸಪ್ (Whatsapp) ಎಂಬ ತಂತ್ರಜ್ಞಾನ ಅಚ್ಚರಿಯಲ್ಲಿ ಕಥೆಕೂಟ ಎಂಬ ಸಾಹಿತ್ಯಿಕ ವಾಟ್ಸಪ್ ಗ್ರೂಪ್ ( literature  Whatsapp Group) ಅದ್ಭುತ ಅಂತ ಹೇಳಬಹುದು. ಇದೀಗ ಎಲ್ಲರ ಪ್ರೀತಿಯ ಕಥೆಕೂಟಕ್ಕೆ (Namma Kathe Koota) ಇದೇ 26ರಂದು 6ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನಲೆ ಕಥೆಕೂಟದ ಹಿರಿಯ, ಕಿರಿಯ ಕತೆಗಾರರೆಲ್ಲರ ಜೊತೆಯಾಗಿ ರಾಜ್ಯ ಮಟ್ಟದ ಕಥಾಕೂಟ ಸಮಾವೇಶ ಬೆಂಗಳೂರಿನಲ್ಲಿ ನಡೆಯಲಿದೆ.

ಇಂದು ಸಾಮಾಜಿಕ ಜಾಲತಾಣಗಳು (Social Media) ಬಹುತೇಕ ಜನರ ಜೀವನದ ಭಾಗವಾಗಿದೆ. ಪ್ರಸ್ತುತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ, ಧರ್ಮ-ಜಾತಿಎಂಬ ವಿಷಯದ ಸುತ್ತಲೆ ಸುತ್ತುತ್ತಿದೆ. ಇದು ಮಾನಸಿಕ ನೆಮ್ಮದಿಯನ್ನ ಹಾಳುಮಾಡಲು ಹಾಗೆ ವಿಷ ಬೀಜ ಬಿತ್ತಲು ಕಾರಣವಾಗ್ತ ಇದೆ ಎಂಬ ಅಸಮಧಾನ, ಗೊಣಗಾಟ ಬಹುತೇಕರದ್ದು.

ಇನ್ನು ಇದೇ ಕಾರಣಕ್ಕಾಗಿಯೆ ಸಾಮಾಜಿಕ ಜಾಲ ತಾಣಗಳನ್ನ ಬಳಸಿಕೊಳ್ಳುವವರ ಸಂಖ್ಯೆ ಬಹಳ ದೊಡ್ಡ ಸಂಖ್ಯೆಯಲ್ಲಿದೆ. ಆದರೆ ಸಾಮಾಜಿಕ ಜಾಲತಾಣವನ್ನ ಸಾಹಿತ್ಯವನ್ನ ಬೆಳೆಸಲು, ಸಾಹಿತ್ಯಿಕ ವಾತಾವರಣವನ್ನ ಸೃಷ್ಟಿಸಲು ಬಳಸಿಕೊಳ್ಳಲು ಯೋಚಿಸಿದವರು ಕೆಲವೇ ಕೆಲವರು. ಇಂತಹ ಹೊಳಹು ಮೂಡಿದ ತಕ್ಷಣ ವಾಟ್ಸಾಪ್ನಲ್ಲಿ ಕಥೆಕೂಟ  ಎಂಬ ಸಾಹಿತ್ಯ ಪಾಠ ಶಾಲೆ, ಕಥಾ ಶಾಲೆ, ಕಥಾ ಸಾಮ್ರಾಜ್ಯವನ್ನೆ ಕಟ್ಟಿದವರು  ಪತ್ರಕರ್ತರಾದ ಗೋಪಾಲ ಕೃಷ್ಣ ಕುಂಟಿನಿ ಹಾಗೆ ಜೋಗಿ .

Tap to resize

Latest Videos

undefined


ಈ ಕಥಾಕೂಟದಲ್ಲಿ ದೊಡ್ಡ ದೊಡ್ಡ ಬರಹಗಾರರು, ಈಗಾಗಲೆ ಹಲವಾರು ಕತೆ ಬರೆದು ಗುರುತಿಸಿಕೊಂಡವರು ಮಾತ್ರ ಇಲ್ಲ. ಬದಲಿಗೆ ಈ ಕಥೆಕೂಟದಿಂದ ಗುರುತಿಸಿಕೊಂಡ ಕತೆಗಾರರು ಬಹಳಷ್ಟು ಜನರಿದ್ದಾರೆ. ಇನ್ನು ಕೆಲವರು ಕಥೆ ಕೂಟ ಎಂಬ ಸಾಹಿತ್ಯ ಶಾಲೆಯಲ್ಲೆ ಮೊದಲ ಬಾರಿಗೆ ಕತೆ ಬರೆದವರು ಇದ್ದಾರೆ. ಈ ರೀತಿ ಕತೆ ಬರೆಸಿದ ಕೀರ್ತಿ ಕಥಾಕೂಟದ ಸಾರತಿ ಗೋಪಾಲ ಕೃಷ್ಣ ಕುಂಟಿನಿ ಅವರಿಗೆ ಸಲ್ಲಬೇಕು.


ಒಂದು ಕುಟುಂಬವೆನ್ನುವ ಭಾವನೆ:
ಇನ್ನು ಈ ಕತಾ ಶಾಲೆಯಲ್ಲಿ ಒಟ್ಟು 49  ಜನರು ದೇಶ ವಿದೇಶಗಳ ವಿದ್ಯಾರ್ಥಿಗಳಿದ್ದಾರೆ. ಹಾಗೆ ಎಲ್ಲಾ ವಯೋಮಾನದವರು, ಬೇರೆ ಬೇರೆ ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಇದ್ದಾರೆ. ಆದರೆ ಕತೆ ಬರೆಯುವಾಗ ನಾವೆಲ್ಲ ಕಥಾಕೂಟದ ವಿದ್ಯಾರ್ಥಿಗಳಂತೆ ಬರೆಯುತ್ತೇವೆ. ಕಥೆ ಕೂಟ ಇಂದು ಕೇವಲ ಒಂದು ವಾಟ್ಸಾಪ್‌ ಗ್ರೂಪ್‌ಗೆ ಮಾತ್ರ ಸೀಮಿತವಾಗಿಲ್ಲ. ಒಂದು ಕುಟುಂಬವೆಂಬ ಭಾವನೆ ಇದೆ.

ಇಲ್ಲಿರುವವರೆಲ್ಲ ಪ್ರತಿಯೊಬ್ಬರ ಕತೆಯನ್ನ ಪ್ರೀತಿಯಿಂದ ಓದುತ್ತಾರೆ. ಹಾಗೆ ಕತೆಯನ್ನ ತಿದ್ದಿಕೊಳ್ಳಬೇಕು ಅಂದಾಗ ಪ್ರೀತಿಯಲ್ಲೆ ಕಿವಿ ಹಿಂಡುತ್ತಾರೆ. ಹಾಗೆ ಯಾವರೀತಿಯಲ್ಲಿ ಕತೆಯನ್ನ ಚೆಂದಗಾಣಿಸಬಹುದಿತ್ತು ಅನ್ನೋದನ್ನು ತಿಳಿಸುತ್ತಾರೆ. ಹೊಸದಾಗಿ ಕತೆ ಬರೆಯುವವರು ಈ ಎಲ್ಲಾ ಅಂಶಗಳನ್ನ ತಲೆಯಲ್ಲಿ ಇಟ್ಟು ಕೊಂಡು ಕತೆಯನ್ನ ಚಂದಗಾಣಿಸಲು ಪ್ರಯತ್ನ ಪಡಬಹುದು. ಹೀಗೆ ತಿದ್ದಿ ಬೆಳೆಸಿದ ಕತೆಗಾರರ ಅನೇಕ ಪುಸ್ತಕಗಳನ್ನ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿವೆ. ಹಾಗೂ ಅವುಗಳಿಗೆ ವ್ಯಾಪಕ ಮೆಚ್ಚುಗೆಯು ದೊರೆತಿದೆ.  


ಕಥಾ ಕೂಟದಲ್ಲಿ ಕಥೆಗಳನ್ನ ಬರೆಯಲು ಬೇರೆ ಬೇರೆ ಸರಣಿಗಳನ್ನ ಆಯೋಜಿಸಲಾಗುತ್ತೆ.ಕತೆ ಬರೆಯಲು ಬೇರೆ ಬೇರೆ ವಿಷಯಗಳನ್ನ, ಘಟನೆಗಳನ್ನ ಕೊಡಲಾಗುತ್ತೆ. ಹಾಗೆ ಕತೆಯನ್ನ ಕಥೆಕೂಟಕ್ಕೆ ಹಾಕಲು ಒಂದು ನಿರ್ಧಿಷ್ಟ ದಿನಾಂಕವನ್ನು ಕೊಡಲಾಗುತ್ತೆ. ಆ ದಿನಾಂಕಕ್ಕೆ ಕತೆ ಹಾಕಲು ಆಗಿಲ್ಲ ಅಂದ್ರೆ ನಮ್ಮ ಉದಾಸೀನಕ್ಕೆ ಹಿರಿಯಲು ಮದ್ದು ಅರೆಯುತ್ತಾರೆ. 

ಸಾ.ನಾ ರಮೇಶ್‌ನವರ 'ಕಾಡು ಮಲ್ಲೆ' ಕವನ ಸಂಕಲನ ಬಿಡುಗಡೆ

ಇನ್ನು ಕಥೆಕೂಟ ಕೇವಲ ಕಥೆ ಮಾತ್ರ ಬರೆಸಲ್ಲ. ಬದಲಿಗೆ ಒಂದು ಕತೆಯನ್ನ ಹೇಗೆ ಓದಬೇಕು? ಯಾವರೀತಿ ನೆನಪಿಟ್ಟುಕೊಳ್ಳಬೇಕು? ಯಾವ ರೀತಿ ಟಿಪ್ಪಣಿ ತಯಾರಿಸಬೇಕು? ಹೊಸ ತಲೆಮಾರಿನ ಬರಹಗಾರರನ್ನ ಓದೋದು ಎಷ್ಟು ಮುಖ್ಯ? ಹಾಗೆ ಹಳೆ ತಲೆಮಾರಿನ ಸಾಹಿತಿಗಳನ್ನ ಯಾಕೆ ಓದಬೇಕು? ಎಷ್ಟು ಓದಬೇಕು? ಪಾಶ್ಚಿಮಾತ್ಯ ಸಾಹಿತ್ಯಗಳು ಯಾವರೀತಿ ಇರುತ್ತೆ ಅನ್ನೋದ್ರ ಕುರಿತು ತಿಳಿಸಿಕೊಡ್ತಾರೆ. ಅದರ ಬಗ್ಗೆ ಚಚೆ೯ಯು ನಡೆಯುತ್ತದೆ. ಹಾಗೆ ಬೇರೆ ಬೇರೆಯವರು ಬರೆದ ಒಳ್ಳೆ ಒಳ್ಳೆ ಕತೆಗಳನ್ನ ಇಲ್ಲಿ ಓದಿಸ್ತಾರೆ.

ಇನ್ನು ಕಥೆಕೂಟಕ್ಕೆ ಆಗಾಗ ಹೊಸ ಸದಸ್ಯರು ಸೇರಿಕೊಳ್ತಾರೆ. ಅವರ ಕತೆಗಳನ್ನ, ಅನುಭವಗಳನ್ನ ಉಳಿದವರು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಕಥೆಕೂಟದಲ್ಲಿ ಇಂದು ಕತೆಗಳ ಬಳ್ಳಿಗಳು ಒಂದಕ್ಕೊಂದು ಹೆಣೆದು ಬಹಳ ಗಟ್ಟಿಯಾಗಿ ನಿಂತಿದೆ. 

70ನೇ ವರ್ಷದ ಸಂಭ್ರಮ: ನಮ್ಮ ಮಲ್ಲೇಪುರಂ

ಸಮಾವೇಶ ಉದ್ಘಾಟನೆ ಮಾಡಲಿರುವ ಬಿಎಸ್ ಲಿಂಗದೇವರು: ಕಥೆಕೂಟ ವಾಟ್ಸಾಪ್ ಗ್ರೂಪ್ ಅಂದ ಮಾತ್ರಕ್ಕೆ ಆನ್ಲೈನ್ನಲ್ಲಿ ಮಾತ್ರ ಕತೆಗಳ ಕುರಿತು ಪಾಠ ನಡೆಸೋದಕ್ಕೆ ಸೀಮಿತವಾಗಿಲ್ಲ. ಬದಲಿಗೆ ಆಗಾಗ ಸಮಾವೇಶಗಳು ನಡೆಸಲಾಗುತ್ತೆ. ಈಗಾಗಲೆ ಕಥೆಕೂಟದ ಮೂರು ಬೃಹತ್ ಸಮಾವೇಶ ರಾಜ್ಯದ ಬೇರೆ ಬೇರೆ ಕಡೆ ನಡೆದಿದೆ. ಈ ಬಾರಿಯ ಕಥೆಕೂಟದ ನಾಲ್ಕನೇ ರಾಜ್ಯಮಟ್ಟದ ಬೃಹತ್ ಸಮಾವೇಶ ಹಾಗೆ ಆರನೇ ವಾಷಿ೯ಕೋತ್ಸವ ಇದೇ 25,26ರಂದು ನಡೆಯಲಿದೆ.

ಆ ಸಮಾವೇಶದಲ್ಲಿ ಕತೆಗಳ ಓದು, ಕತೆ ಕಟ್ಟುನ ರೀತಿ, ನಮ್ಮೊಳಗಿನ ಕತೆಗೆ ಹೇಗೆ ಜೀವ ನೀಡೋದು ಸೇರಿ ಅನೇಕ ವಿಶಿಷ್ಟವಾದ ಗೋಷ್ಠಿ ನಡೆಯಲಿದೆ. ಖ್ಯಾತ ನಿರ್ದೇಶಕ ಬಿ ಎಸ್ ಲಿಂಗದೇವರು ಸಮಾವೇಶ ಉದ್ಘಾಟಿಸಲಿದ್ದಾರೆ. ವ್ಯಾಟ್ಸ್ ಆಪ್ ಗ್ರೂಪ್ ಅಡ್ಮಿನ್ ಗೋಪಾಲಕೃಷ್ಣ ಕುಂಟಿನಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಥೆಗಾರ ಜೋಗಿ  ನಾನು ಮತ್ತೆ ಕತೆ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಈ ಎರಡೂ ದಿನಗಳ ಲೈವ್ ಕಾರ್ಯಕ್ರಮವನ್ನು ಬುಕ್ ಬ್ರಹ್ಮ ಫೇಸ್ ಬುಕ್ ನಲ್ಲಿ ನೋಡಬಹುದು ಇಲ್ಲಿ ನೀವೆಲ್ಲರು ನಮ್ಮೊಂದಿಗೆ ಜೊತೆಯಾಗಬಹುದು.

click me!