ಬಾರ್ ಗೆ ಹೋಗೋರು, ವೆರೈಟಿ ಮದ್ಯದ ಬಗ್ಗೆ ರಿಸರ್ಚ್ ಮಾಡಿದ್ರೆ ಸಾಲೋದಿಲ್ಲ. ಯಾವ ಯಾವ ಹೊಸ ಬ್ರ್ಯಾಂಡ್ ಬಂದಿದೆ ಅಂತ ಟೇಸ್ಟ್ ಮಾಡಿದ್ರೆ ಮುಗಿಲಿಲ್ಲ. ಮದ್ಯದ ಬಾಟಲಿ ಗಾತ್ರ ಎಷ್ಟಿರುತ್ತೆ, ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ತಿಳಿದ್ಕೊಳ್ಳಿ.
ವೈನ್ ಹೆಸರು ಕೇಳ್ತಿದ್ದಂತೆ ಕೆಲವರು ನೈಟ್ ಮೂಡ್ ಗೆ ಹೋದ್ರೆ ಮತ್ತೆ ಕೆಲವರು ಪಾರ್ಟಿ ಮೂಡ್ ಗೆ ಹೋಗಿರ್ತಾರೆ. ಇತ್ತೀಚಿನ ದಿನಗಳಲ್ಲಿ ಆಲ್ಕೋಹಾಲ್ ಸೇವನೆ ಸಾಮಾನ್ಯ ಎನ್ನುವಂತಾಗಿದೆ. ಮಹಿಳೆಯರಿಂದ ಹಿಡಿದು ಮಕ್ಕಳು ಕೂಡ ವೈನ್ ಸೇವಿಸೋದು ಕಾಮ್ ಆಗ್ತಿದೆ. ವೈನ್ ಹಳೆಯದಾದಷ್ಟು ರುಚಿ ಹೆಚ್ಚು. ಅದ್ರಲ್ಲಿರುವ ಕೆಮಿಕಲ್ ಕಾರಣಕ್ಕೆ ವೈನ್ ರುಚಿ ಹೆಚ್ಚಾಗ್ತಾ ಹೋಗುತ್ತದೆ. ಇದೇ ಕಾರಣಕ್ಕೆ ಹಳೆ ವೈನ್ ಗೆ ಬೆಲೆ ಕೂಡ ಜಾಸ್ತಿ. ನಾವಿಂದು ವೈನ್ ರುಚಿ ಬಗ್ಗೆ ಆಗ್ಲಿ ಅದರ ಸೇವನೆಯಿಂದ ಆಗುವ ಲಾಭ, ನಷ್ಟದ ಬಗ್ಗೆ ಆಗ್ಲಿ ಹೇಳ್ತಿಲ್ಲ. ನಾವು ವೈನ್ ಬಾಟಲಿ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೆವೆ.
ನೀವು ಯಾವುದೇ ವೈನ್ (Wine ) ಶಾಪಿಗೆ ಹೋಗಿ ವೈನ್ ಬಾಟಲಿ (Bottle) ಕೇಳಿ, ನಿಮಗೆ 500 ಮಿಲಿ ಲೀಟರ್ ಬಾಟಲಿ ಸಿಗೋದಿಲ್ಲ. ಒಂದು ಲೀಟರ್ ಬಾಟಲಿಯಲ್ಲೂ ಮದ್ಯ (Alcohol) ಸಿಗೋದಿಲ್ಲ. ನಿಮಗೆ ಬಾರ್ ಮಾಲೀಕ 750 ಮಿಲಿ ಲೀಟರ್ ಬಾಟಲಿ ನೀಡ್ತಾನೆ. ಅನೇಕರು ಇದನ್ನು ಗಮನಿಸಿರ್ತಾರೆ. ಮತ್ತೆ ಕೆಲವರು ವೈನ್ ಸಿಕ್ಕಿದ ಖುಷಿಯಲ್ಲಿ ಮನೆಗೆ ಬರ್ತಾರೆ. ನಾವಿಂದು ವೈನ್ ಬಾಟಲಿ ಏಕೆ 750 ಮಿಲಿ ಲೀಟರ್ ಹೊಂದಿರುತ್ತೆ ಎಂಬುದನ್ನು ಹೇಳ್ತೆವೆ.
ಆರಂಭದಲ್ಲಿ ಮದ್ಯವನ್ನು ಬ್ಯಾರಲ್ (Barrel) ನಲ್ಲಿ ಇರಿಸಲಾಗ್ತಾ ಇತ್ತು. 18ನೇ ಶತಮಾನ ಶುರುವಾಗ್ತಿದ್ದಂತೆ ಜನರು ಬದಲಾದ್ರು. ಮದ್ಯವನ್ನು ಇಡುವ ವ್ಯವಸ್ಥೆ ಕೂಡ ಬದಲಾಯ್ತು. ಮದ್ಯವನ್ನು ಇಡಲು ಗಾಜಿನ ಬಾಟಲಗಿಂತ ಯೋಗ್ಯವಾದದ್ದು ಯಾವುದೂ ಇಲ್ಲ ಎಂದು ಅವರು ಮನಗಂಡರು. ಆ ದಿನಗಳಲ್ಲಿ ಬಾಟಲಿಗಳನ್ನು ತಯಾರಿಸಲು 'ಗ್ಲಾಸ್ ಬ್ಲೋಯಿಂಗ್' ತಂತ್ರವನ್ನು ಬಳಸಲಾಗುತ್ತಿತ್ತು.
ಥೈರಾಯ್ಡ್‌ನಿಂದ ಜೀರ್ಣಕ್ರಿಯೆ ಸುಧಾರಿಸೋವರೆಗೆ ಹಿತ್ತಾಳೆ, ಕಬ್ಬಿಣ, ಯಾವ ಪಾತ್ರೆ ಅಡುಗೆಗೆ ಬೆಸ್ಟ್?
ಗ್ಲಾಸ್ ಬ್ಲೋಯಿಂಗ್ ತಂತ್ರದಲ್ಲಿ, ಟೊಳ್ಳಾದ ಲೋಹದ ಪೈಪ್‌ನ ಒಂದು ತುದಿಗೆ ಗಾಜನ್ನು ಅಳವಡಿಸಲಾಗುತ್ತಿತ್ತು. ನಂತ್ರ ಅದನ್ನು 2000 ಡಿಗ್ರಿಗಿಂತ ಹೆಚ್ಚು ಬಿಸಿಯಲ್ಲಿ ಆಕಾರ ನೀಡಲಾಗುತ್ತಿತ್ತು. ಬಿಸಿ ಗಾಜು, ಪೈಪ್ ನ ಎಲ್ಲ ಕಡೆ ಸುತ್ತಿಕೊಂಡ ನಂತ್ರ ಸ್ಟೀಲ್ ಪ್ಲೇಟ್ ನಲ್ಲಿ ಉರುಳಿಸಿ ಅದಕ್ಕೆ ಆಕಾರ ನೀಡಲಾಗ್ತಿತ್ತು. ನಂತರ ಟೊಳ್ಳಾದ ಪೈಪ್ ಮೂಲಕ ಗಾಳಿ ಹಾಕುವ ಮೂಲಕ ಗಾಜಿನೊಳಗೆ ಗಾಳಿಯನ್ನು ತುಂಬಿಸಿ, ಬಾಟಲಿಯ ಗಾತ್ರವನ್ನು ಹೆಚ್ಚು ಮಾಡಲಾಗ್ತಿತ್ತು. ಸಾಮಾನ್ಯ ಮನುಷ್ಯನ ಶ್ವಾಸಕೋಶದಲ್ಲಿ ಕೇವಲ 700 ಮಿಲಿಯಿಂದ 800 ಮಿಲಿ ಗಾಳಿಯನ್ನು ಹೊರಗೆ ಬಿಡುವ ಸಾಮರ್ಥ್ಯವಿರುತ್ತದೆ. ಹಾಗಾಗಿ ಆ ಸಂದರ್ಭದಲ್ಲಿ 750 ಮಿಲಿ ಲೀಟರನ್ನು ಅತ್ಯುತ್ತಮ ಗಾತ್ರವೆಂದು ಪರಿಗಣಿಸಿದ್ರು. ಹಾಗಾಗಿಯೇ ಆಗಿನ ವೈನ್ ಬಾಟಲಿಗಳು 750 ಮಿಲಿ ಲೀಟರ್ ಗಾತ್ರದಲ್ಲಿ ಬರ್ತಿದ್ದವು.
ಈಗ್ಲೂ ಬದಲಾಗಿಲ್ಲ ಗಾತ್ರ : ಆಗ ಬೇರೆ ಯಾವುದೇ ಮಾರ್ಗವಿರದ ಕಾರಣ, ಸಾಮರ್ಥ್ಯಕ್ಕೆ ತಕ್ಕಂತೆ ಬಾಟಲಿ ತಯಾರಿಸಲಾಗ್ತಿತ್ತು. ಆದ್ರೀಗ ಮಷಿನ್ ನಲ್ಲಿ ಬಾಟಲಿ ಸಿದ್ಧವಾಗುತ್ತದೆ. ಕಂಪನಿಗಳು ನಾನಾ ಆಕಾರವನ್ನು ಬಾಟಲಿಗೆ ನೀಡ್ತಾರೆ. ಆದ್ರೂ 750 ಮಿಲಿ ಲೀಟರ್ ಮಾತ್ರ ಬದಲಾಗಿಲ್ಲ. ಹೊಸ ಹೊಸ ಆಕಾರ ನೀಡಿದ್ರೂ ಗಾತ್ರವನ್ನು ಹಿಂದಿನಂತೆ ಕಾಯ್ದುಕೊಳ್ಳಲು ಎಲ್ಲ ಕಂಪನಿಗಳು ಮುಂದಾಗಿವೆ. ಇದಲ್ಲದೆ ಅಮೆರಿಕಾದಲ್ಲಿ ಬಾಟಲಿಗಳ ಗಾತ್ರ 750 ಎಂಎಲ್ ಇರಬೇಕೆಂದು ನಿಯಮ ಮಾಡಲಾಗಿತ್ತು. ಅದನ್ನು ಬೇರೆ ದೇಶದವರು ಫಾಲೋ ಮಾಡಿದ್ರು. ಇದೇ ಕಾರಣಕ್ಕೆ ಎಲ್ಲ ಮದ್ಯದ ಬಾಟಲಿಗಳ ಗಾತ್ರ 750 ಎಂಎಲ್ ನಲ್ಲಿಯೇ ಲಭ್ಯವಿದೆ.
ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎಂದರೇನು? ಅದರ ಲಕ್ಷಣ, ಕಾರಣಗಳ ಬಗ್ಗೆ ಇಲ್ಲಿದೆ ಮಾಹಿತಿ
ಕೆಲ ಕಂಪನಿಗಳು ಈಗ್ಲೂ ಗ್ಲಾಸ್ ಬೋಯಿಂಗ್ ವಿಧಾನವನ್ನೇ ಬಳಸುತ್ತಿವೆ. ಬೇರೆ ಬೇರೆ ಡಿಸೈನ್ ಗೆ ಬೇರೆ ಬೇರೆ ತಂತ್ರಗಳನ್ನು ಬಳಸಿ, ಬೋಯಿಂಗ್ ವಿಧಾನದಲ್ಲಿಯೇ ಬಾಟಲಿ ತಯಾರಿಸುತ್ತಿವೆ.