New Year 2024: ಜನವರಿ ಒಂದನ್ನೇ ಹೊಸ ವರ್ಷವನ್ನಾಗಿ ಆಚರಿಸೋದು ಏಕೆ?

By Suvarna News  |  First Published Dec 29, 2023, 10:56 AM IST

ಹೊಸ ವರ್ಷ ಬರ್ತಿದೆ. ಹೊಸ ನಿರೀಕ್ಷೆ, ಆಸೆಗಳು ಚಿಗುರುತ್ತಿವೆ. ನ್ಯೂ ಇಯರ್ ಸಂದರ್ಭದಲ್ಲಿ ಜನರು ಒಂದಿಷ್ಟು ಹೊಸ ವಿಷ್ಯಗಳನ್ನು ತಿಳಿದುಕೊಳ್ಳಲು ಆಸಕ್ತಿ ಹೊಂದಿರುತ್ತಾರೆ. ಈ ಸಮಯದಲ್ಲಿ ನಾವು ಕ್ಯಾಲೆಂಡರ್ ಶುರುವಾಗಿದ್ದು ಹೇಗೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.


ಪ್ರತಿ ವರ್ಷ ಡಿಸೆಂಬರ್ 31ನೇ ದಿನಾಂಕವನ್ನು ವರ್ಷಾಂತ್ಯವಾಗಿ ಆಚರಣೆ ಮಾಡಲಾಗುತ್ತದೆ. ಡಿಸೆಂಬರ್ 31ರ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಹೊಸ ವರ್ಷ ಆರಂಭವಾಗುತ್ತದೆ. ಜನವರಿ ಒಂದನೇ ದಿನವನ್ನು ಹೊಸ ವರ್ಷದ ಮೊದಲ ದಿನವನ್ನಾಗಿ ಸಂಭ್ರಮಿಸಲಾಗುತ್ತದೆ.  2023ಕ್ಕೆ ಗುಡ್ ಬೈ ಹೇಳಿ ಇಡೀ ಜಗತ್ತು 2024ನ್ನು ಸ್ವಾಗತಿಸಲು ಕೆಲವೇ ದಿನಗಳು ಬಾಕಿ ಇದೆ. ಕೆಲವೊಂದು ವಿಷ್ಯಗಳ ಬಗ್ಗೆ ನಮಗೆ ನಾನಾ ಪ್ರಶ್ನೆಗಳಿರುತ್ತವೆ. ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಜನವರಿ ಒಂದನೇ ದಿನವನ್ನು ನಾವ್ಯಾಕೆ ಹೊಸವರ್ಷವೆಂದು ಆಚರಣೆ ಮಾಡುತ್ತೇವೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. 

ಜನವರಿ (January) ಒಂದನೇ ದಿನವನ್ನೇ ವರ್ಷದ ಮೊದಲ ದಿನವನ್ನಾಗಿ ಆಚರಣೆ ಮಾಡೋದು ಏಕೆ? : ಕ್ರಿಸ್ತಪೂರ್ವದ ಕಾಲದಲ್ಲಿ ಇದು ಜಾರಿಗೆ ಬಂದಿದೆ. ಕ್ರಿಸ್ತಪೂರ್ವ 45 ಕ್ಕಿಂತ ಮೊದಲು ರೋಮನ್ (Roman) ಸಾಮ್ರಾಜ್ಯದಲ್ಲಿ ಕ್ಯಾಲೆಂಡರ್ ಬಳಕೆಯಲ್ಲಿತ್ತು. ನುಮಾ ಪೊಂಪಿಲಸ್ ರೋಮ್ ನ ಆಗಿನ ರಾಜನಾಗಿದ್ದ. ರೋಮನ್ ಕ್ಯಾಲೆಂಡರ್ (Calendar) ನಲ್ಲಿ 10 ತಿಂಗಳುಗಳಿದ್ದವು. ವರ್ಷದಲ್ಲಿ 310 ದಿನಗಳು ಮತ್ತು ವಾರದಲ್ಲಿ 8 ದಿನಗಳಿದ್ದವು. ಸ್ವಲ್ಪ ಸಮಯದ ನಂತ್ರ ನುಮಾ ಕ್ಯಾಲೆಂಡರ್ ಬದಲಾವಣೆ ಮಾಡಲು ನಿರ್ಧರಿಸಿದ. ಆ ಸಮಯದಲ್ಲೇ ಅವರು ಜನವರಿಯನ್ನು ಕ್ಯಾಲೆಂಡರ್ ನ ಮೊದಲ ತಿಂಗಳು ಎಂದು ಪರಿಗಣಿಸಿದರು. ಜನವರಿ 1 ರಂದು ಹೊಸ ವರ್ಷವನ್ನು ಆಚರಿಸುವ ಪ್ರವೃತ್ತಿಯು 1582 AD ನಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಪರಿಚಯಿಸಿದ ನಂತರ ಪ್ರಾರಂಭವಾಯಿತು ಎನ್ನಲಾಗುತ್ತದೆ.

Tap to resize

Latest Videos

TRENDING : ಚಮತ್ಕಾರ..! ಕೊನೆಯವರೆಗೂ ಹೋರಾಟ ನಡೆಸಿ ಪತ್ನಿ ಬದುಕಿಸಿದ ಪತಿ..

1582 ರ ಮೊದಲು ಹೊಸ ವರ್ಷ ವಸಂತಕಾಲದಲ್ಲಿ ಅಂದ್ರೆ ಮಾರ್ಚ್‌ ನಲ್ಲಿ ಆರಂಭವಾಯಿತು. ನುಮಾ ನಿರ್ಧಾರದ ನಂತರ ವರ್ಷದ ಆರಂಭ ಜನವರಿಯಿಂದ ಶುರುವಾಯಿತು. ಆದ್ರೆ ಮಾರ್ಚ್ ತಿಂಗಳ ಹೆಸರು ಮಾರ್ಚ್ ಎಂದು ಇರಲಿಲ್ಲ. ರೋಮನ್ ದೇವರು ಮಾರ್ಸ್ ಎಂದು ಮಾರ್ಚ್ ತಿಂಗಳನ್ನು ಅವರು ಹೆಸರಿಸಿದರು. ಮಾರ್ಸ್, ರೋಮನ್ನರ  ಯುದ್ಧದ ದೇವರು.

ಕೆಲಸ ಯಾವಾಗ ಹೋಗ್ಬಿಡುತ್ತೋ ಅನ್ನೋ ಭಯದಿಂದ ದೂರ 

ಇನ್ನು ರೋಮನ್ ದೇವರು ಜಾನಸ್ ಹೆಸರಿನಿಂದ ಜನವರಿಯನ್ನು ಹೆಸರಿಸಲಾಗಿದೆ. ಈ ದೇವರು ಎರಡು ಬಾಯಿಗಳನ್ನು ಹೊಂದಿದ್ದ. ಮುಂದಿನ ಬಾಯಿಯನ್ನು ಆರಂಭ ಎಂದು, ಹಿಂದಿನ ಬಾಯಿಯನ್ನು ಅಂತ್ಯವೆಂದು ಪರಿಗಣಿಸಲಾಗಿತ್ತು. 
ನುಮಾ, ವರ್ಷದ ಆರಂಭಕ್ಕೆ ಜಾನಸ್ ದೇವರನ್ನು ಆಯ್ಕೆ ಮಾಡಿಕೊಂಡರು. ಹಾಗಾಗಿ ಜನವರಿಯನ್ನು ಅವರು ವರ್ಷದ ಮೊದಲ ವರ್ಷವೆಂದು ಪರಿಗಣಿಸಿದ್ರು.

ಗ್ರೆಗೋರಿಯನ್ ಕ್ಯಾಲೆಂಡರ್ ರಚನೆಯಾಗಿದ್ದು ಹೇಗೆ?: ಇನ್ನು ಗ್ರೆಗೋರಿಯನ್ ಕ್ಯಾಲೆಂಡರ್ ಹಿಂದೆಯೂ ಒಂದು ಕಥೆ ಇದೆ. ಯೇಸುಕ್ರಿಸ್ತನ ಜನನಕ್ಕಿಂತ ಮೊದಲು ಅಂದ್ರೆ 46 ವರ್ಷಗಳ ನಂತ್ರ ರೋಮನ್ ರಾಜ ಜೂಲಿಯಸ್ ಸೀಸರ್ ಕ್ಯಾಲೆಂಡರ್ ತಯಾರಿಸಿದ. ಹೊಸ ಲೆಕ್ಕಾಚಾರದ ಮೇಲೆ ಆತ ಕ್ಯಾಲೆಂಟರ್ ರಚನೆ ಮಾಡಿದೆ. ಇದಕ್ಕೆ ರಾಜ ಜೂಲಿಯಸ್ ಸೀಸರ್, ಗಸಿಜರ್ ಎಂದು ಹೆಸರಿಟ್ಟ. ಜನವರಿ ಒಂದನ್ನು ಆತ ಹೊಸ ವರ್ಷದ ಆರಂಭವೆಂದು ಘೋಷಿಸಿದ. 
ಭೂಮಿಯು ಸೂರ್ಯನ ಸುತ್ತ 365 ದಿನಗಳು ಮತ್ತು 6 ಗಂಟೆಗಳ ಕಾಲ ಸುತ್ತುತ್ತದೆ ಎಂದು ಅವರು ಪರಿಗಣಿಸಿದ್ರು. ಜನವರಿ ಮತ್ತು ಫೆಬ್ರವರಿ ತಿಂಗಳುಗಳನ್ನು ಸೇರಿಸಿದಾಗ  ಅದು ಸೂರ್ಯನ ಲೆಕ್ಕಾಚಾರಗಳೊಂದಿಗೆ ಹೊಂದಿಕೆಯಾಗಲಿಲ್ಲ. ನಂತ್ರದ ದಿನಗಳಲ್ಲಿ ಇದರ ಬಗ್ಗೆ ಆಳವಾದ ಅಧ್ಯಯನ ನಡೆಯಿತು. 

ಕ್ಯಾಲೆಂಡರ್ ರಚನೆಯನ್ನು ಸೂರ್ಯ ಹಾಗೂ ಚಂದ್ರನ ಚಲನೆ ಮೇಲೆ ನಿರ್ಧರಿಸಲಾಗುತ್ತದೆ. ಚಂದ್ರನ ಚಕ್ರವನ್ನು ಆಧರಿಸಿದ ಕ್ಯಾಲೆಂಡರ್ 354 ದಿನಗಳನ್ನು ಹೊಂದಿದೆ. ಸೂರ್ಯ ಚಕ್ರದಲ್ಲಿ ಮಾಡಿದ ಕ್ಯಾಲೆಂಡರ್ 365 ದಿನಗಳನ್ನು ಹೊಂದಿದೆ. ಗ್ರೆಗೋರಿಯನ್ ಕ್ಯಾಲೆಂಡರ್ ಸೂರ್ಯನ ಚಕ್ರವನ್ನು ಆಧರಿಸಿದೆ.  

click me!