ಅಂಡರ್‌ವಾಟರ್‌ ಮ್ಯೂಸಿಕ್ ಸಿಸ್ಟಂ, ಹೆದ್ದಾರಿಗೆ ಸುರಂಗ ಮಾರ್ಗ; ಬಿಲ್‌ಗೇಟ್ಸ್‌ ಐಷಾರಾಮಿ ಬಂಗಲೆಯೊಳಗೆ ಏನೇನಿದೆ?

By Vinutha Perla  |  First Published May 24, 2024, 4:54 PM IST

ವಿಶ್ವದ ಎಲ್ಲಾ ಬಿಲಿಯನೇರ್‌ಗಳಂತೆ ಬಿಲ್‌ಗೇಟ್ಸ್‌ ಸಹ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಈ ಐಷಾರಾಮಿ ಬಂಗಲೆ 66,000 ಚದರ ಅಡಿಗಳಲ್ಲಿ ಹರಡಿದೆ ಮತ್ತು ಇದನ್ನು ಕ್ಸಾನಾಡು 2.0 ಎಂದು ಕರೆಯಲಾಗುತ್ತದೆ. ಏನು ಈ ಬಂಗಲೆಯ ವಿಶೇಷತೆ..ಇಲ್ಲಿದೆ ಮಾಹಿತಿ.


ಬಿಲ್ ಗೇಟ್ಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. 68 ವರ್ಷ ವಯಸ್ಸಿನ ಬಿಲ್‌ಗೇಟ್ಸ್‌ ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಫೋರ್ಬ್ಸ್ ಪ್ರಕಾರ 131 ಬಿಲಿಯನ್ ಆಸ್ತಿಯನ್ನು ಹೊಂದಿದ್ದಾರೆ. ವಿಶ್ವದ ಎಲ್ಲಾ ಬಿಲಿಯನೇರ್‌ಗಳಂತೆ ಬಿಲ್‌ಗೇಟ್ಸ್‌ ಸಹ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಈ ಮಹಲು 66,000 ಚದರ ಅಡಿಗಳಲ್ಲಿ ಹರಡಿದೆ ಮತ್ತು ಇದನ್ನು ಕ್ಸಾನಾಡು 2.0 ಎಂದು ಕರೆಯಲಾಗುತ್ತದೆ.

ಈ ಬೃಹತ್‌ ಬಂಗೆಯನ್ನು ಬರೋಬ್ಬರಿ ಏಳು ವರ್ಷಗಳ ಸಮಯ ತೆಗೆದುಕೊಂಡು ನಿರ್ಮಿಸಲಾಗಿದೆ. ಮತ್ತು ಇದಕ್ಕಾಗಿ 63 ಮಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡಲಾಯಿತು. ಆದರೆ ಮುಂಬೈನಲ್ಲಿರುವ ಮುಕೇಶ್ ಅಂಬಾನಿಯ ಆಂಟಿಲಿಯಾಕ್ಕಿಂತ ಇದು ದುಬಾರಿಯೇ?

Tap to resize

Latest Videos

undefined

ಒಂದು ಕಾಲದಲ್ಲಿ ಬಿಲಿಯನೇರ್‌ ಶ್ರೀಮಂತರಾಗಿ ಈಗ ದಿವಾಳಿಯಾಗಿರುವ ಭಾರತದ ಟಾಪ್‌ ಉದ್ಯಮಿಗಳ ಲಿಸ್ಟ್

ಬಿಲ್‌ಗೇಟ್ಸ್‌ ಮನೆಯ ಮೌಲ್ಯ USD 130 ಮಿಲಿಯನ್ ಅಂದರೆ 1080 ಕೋಟಿ ರೂ. ಎಂದು ವರದಿಯಾಗಿದೆ. ಅಂಬಾನಿಯವರ 27 ಅಂತಸ್ತಿನ ಗಗನಚುಂಬಿ ಕಟ್ಟಡ ಆಂಟಿಲಿಯಾ ಸುಮಾರು 15000 ಕೋಟಿ ರೂ. ಬೆಲೆ ಬಾಳುತ್ತದೆ. ಆದ್ದರಿಂದ, ಮುಖೇಶ್ ಅಂಬಾನಿಯವರ ಆಂಟಿಲಿಯಾ Xanadu 2.0 ಗಿಂತ ಹೆಚ್ಚು ದುಬಾರಿಯಾಗಿದೆ.

ಗೇಟ್ಸ್‌ನ Xanadu 2.0 ಹಲವು ಉನ್ನತ ಮಟ್ಟದ ವ್ಯವಸ್ಥೆಯನ್ನು ಒಳಗೊಂಡಿದೆ. 100 ಎಲೆಕ್ಟ್ರಿಷಿಯನ್ ಸೇರಿದಂತೆ ಸುಮಾರು 300 ಕಟ್ಟಡ ಕಾರ್ಮಿಕರು ಈ ಐಷಾರಾಮಿ ಬಂಗಲೆಯನ್ನು ನಿರ್ಮಿಸಿದ್ದಾರೆ. ಈ ಮಹಲು ನೀರೊಳಗಿನ ಸಂಗೀತ ವ್ಯವಸ್ಥೆ, ಹೆದ್ದಾರಿಯನ್ನು ಸಂಪರ್ಕಿಸುವ ಸುರಂಗ ಮಾರ್ಗವನ್ನು ಒಳಗೊಂಡಿದೆ. ಬಿಲ್‌ಗೇಟ್ಸ್‌ ಐಷಾರಾಮಿ ಮನೆ ಏನೆಲ್ಲಾ ವ್ಯವಸ್ಥೆಯನ್ನು ಹೊಂದಿದೆ ತಿಳಿಯೋಣ.

ವಿಶ್ವ ಬಿಲಿಯನೇರ್ ಪಟ್ಟಿ: ಕನ್ನಡಿಗರಿಗೂ ಸ್ಥಾನ, ಅಣ್ಣನ ಆಸ್ತಿ ತಮ್ಮನಿಗಿಂತ 160 ಕೋಟಿ ಹೆಚ್ಚು!

Xanadu 2.0 ಏಳು ಮಲಗುವ ಕೋಣೆಗಳು ಮತ್ತು 24 ಸ್ನಾನಗೃಹಗಳನ್ನು ಹೊಂದಿದೆ. ಆರು ಅಡಿಗೆಮನೆಗಳು, ಒಂದು ಉಗಿ ಕೊಠಡಿ,  1,000-ಚದರ ಅಡಿ ಊಟದ ಕೋಣೆ, 150 ಜನರಿಗೆ ಸ್ವಾಗತ ಹಾಲ್ ಈ ಬಂಗಲೆಯೊಳಗಿದೆ. 25,000 ಚದರ ಅಡಿಯ ಜಿಮ್ ಇಲ್ಲಿದೆ. ನೀರೊಳಗಿನ ಸಂಗೀತ ವ್ಯವಸ್ಥೆಯೊಂದಿಗೆ 60 ಅಡಿಯ ಈಜುಕೊಳ ಈ ಐಷಾರಾಮಿ ಬಂಗಲೆಯ ಹೈಲೈಟ್ ಆಗಿದೆ. ಮಾತ್ರವಲ್ಲ 2,100 ಚದರ ಅಡಿ ಗ್ರಂಥಾಲಯ, 20 ಕಾರ್ ಗ್ಯಾರೇಜ್ ವ್ಯವಸ್ಥೆಯನ್ನು ಸಹ ಒಳಗೊಂಡಿದೆ.

click me!