ಮಕ್ಕಳ ಸಿಟ್ಟನ್ನು ನಿಭಾಯಿಸುವುದು ಹೇಗೆ?

By Web Desk  |  First Published May 12, 2019, 3:49 PM IST

ನಿಮ್ಮ ಮಗು ಸಿಟ್ಟಿನ ಕೊಟ್ಟೆ ಇರಬಹುದು. ಅದನ್ನು ನಿಭಾಯಿಸುವ ಭರದಲ್ಲಿ ನೀವೆಷ್ಟು ಕೋಪ ತೋರಿಸುತ್ತಿದ್ದೀರಿ ಎಂದು ಯೋಚಿಸಿದ್ದೀರಾ? ಮಗುವಿಗೆ ಸಿಟ್ಟು ಮಾಡಲು  ನೀವೇ ಮಾದರಿಯಾಗಬೇಡಿ. ಅದನ್ನು ಯಶಸ್ವಿಯಾಗಿ ನಿಭಾಯಿಸಲು ಕಲಿಯಿರಿ. 


ಯಾವುದೇ ಎಮೋಶನ್ ಇರಬಹುದು, ಅದನ್ನು ನಿಭಾಯಿಸುವುದು ಮಕ್ಕಳಿಗೆ ಕಷ್ಟವೇ. ಅದರಲ್ಲೂ ಬೇಗ ಸಿಟ್ಟುಗೊಳ್ಳುವ ಮಕ್ಕಳು ಅದರಿಂದಾಗಿ ಹಲವು ನೆಗೆಟಿವ್ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಇಂಥ ಮಕ್ಕಳನ್ನು ನೋಡಿಕೊಳ್ಳಲು ಪೋಷಕರಿಗೆ ಬಹಳ ತಾಳ್ಮೆ ಬೇಕು. ಈ ಮಕ್ಕಳ ಕೋಪವನ್ನು ನಿಭಾಯಿಸಲು ಹೀಗೆ ಮಾಡಿ. 

ಮಕ್ಕಳ ಮಾತನ್ನೂ ಕೇಳಿ

Latest Videos

undefined

ನಮಗೆ ಮುಖ್ಯವಲ್ಲವೆನಿಸಿದ್ದು ಮಕ್ಕಳಿಗೆ ಬಹಳ ಮುಖ್ಯವೆನಿಸಬಹುದು. ನೀವು ಕೆಂಪು ಸಾಕ್ಸ್ ಹಾಕಲು ಹೋದಾಗ, ನೀಲಿ ಬಣ್ಣದ್ದೇ ಬೇಕೆಂದು ಹಟ ಹಿಡಿದರೆ, ಅದನ್ನೇ ಹಾಕಿ. ಎರಡೂ ಒಂದೇ, ಅದೇನು ದೊಡ್ಡ ವಿಷಯ ಎಂದು ನಿಮಗನಿಸೀತು. ಆದರೆ, ಮಕ್ಕಳ ಲೋಕದಲ್ಲಿ ಅವರಿಗೆ ಅದೇ ದೊಡ್ಡ ವಿಷಯ. ಅವರ ಎಮೋಶನ್ಸ್‌ಗೆ ಬೆಲೆ ಕೊಡುವುದು ಬಹಳ ಮುಖ್ಯ.

ಅವರದ್ದೇ ಆದ ಸ್ಪೇಸ್ ನೀಡಿ

ಮಗುವಿಗೆ ಸಿಟ್ಟು ಬಂದಾಗ ಹೊಡೆಯುವುದು ಇನ್ನಿತರೆ ದೈಹಿಕವಾಗಿ ನೋವು ಮಾಡುವ ವರ್ತನೆ ತೋರಬಹುದು. ಇದಕ್ಕಾಗಿಯೇ ಮನೆಯಲ್ಲಿ ಕಾಮ್ ಡೌನ್ ಕಾರ್ನರ್ ನಿರ್ಮಿಸಿ ಸಿಟ್ಟು ಬಂದಾಗ ಹೊಡೆಯಲು ತಲೆದಿಂಬನ್ನೋ, ಟೆಡ್ಡಿಯನ್ನೋ ನೀಡಿ. ಮಗುವಿಗೆ ತನ್ನ ಕೋಪ ಹೊರಹಾಕಲು ಅವಕಾಶ ಮಾಡಿಕೊಡಿ. ಅದರದ್ದೇ ಆದ ಸ್ಪೇಸ್ ನೀಡಿ. ಹಾಗಂತ ಮಗುವನ್ನು ಏಕಾಂಗಿಯಾಗಿಸಬೇಡಿ. 

ಸಿಟ್ಟು ಮಾಡುವುದು ತಪ್ಪೇನಲ್ಲ

ಎಮೋಶನ್‌ಗಳು ನಮ್ಮ ಬೆಳವಣಿಗೆಯ ಸಾಮಾನ್ಯ ಭಾಗ. ಪ್ರತಿದಿನವೂ ವಿವಿಧ ರೀತಿಯ ಭಾವನೆಗಳನ್ನು ಅನುಭವಿಸುತ್ತೇವೆ. ಹಾಗೆಯೇ ಸಿಟ್ಟು ಕೂಡಾ. ಸಿಟ್ಟು ಮಾಡಿದೊಡನೆ ಕೆಟ್ಟವರೇ ಆಗಬೇಕಿಲ್ಲ. ಸಿಟ್ಟು ಬರುವುದು ಸಾಮಾನ್ಯ ಸಂಗತಿ. ಹೀಗಾಗಿ, ಮಗುವಿಗೆ ನೀವು ಪನಿಶ್‌ಮೆಂಟ್ ನೀಡಬೇಕೆಂದಿದ್ದರೆ ಅದು ಅವರ ವರ್ತನೆಗಾಗಿಯೇ ಹೊರತು ಎಮೋಶನ್‌ಗಲ್ಲ ಎಂಬುದು ಅರ್ಥವಾಗುವಂತೆ ನಡೆದುಕೊಳ್ಳಿ. 

ಅತಿಯಾದ ಪ್ರತಿಕ್ರಿಯೆ ಬೇಡ

ಮಗು ಸಿಟ್ಟು ಮಾಡಿತೆಂದು ನೀವೂ ಕೋಪಗೊಂಡರೆ ಶಾಂತವಾಗಿರುವುದನ್ನು ಮಗು ಯಾರನ್ನು ನೋಡಿ ಕಲಿಯಬೇಕು? ನಿಧಾನವಾದ ಧ್ವನಿಯಲ್ಲಿ ತಿಳಿ ಹೇಳಿದರೆ ಮಕ್ಕಳು ಬೇಗ ಸಿಟ್ಟಿನಿಂದ ಹೊರಬರುತ್ತಾರೆ. ಇಲ್ಲವೇ ಅವರ ಗಮನವನ್ನು ಆಸಕ್ತಿಯ ಬೇರೆ ಸಂಗತಿಗಳತ್ತ ತಿರುಗಿಸಿ.

ಅವರ ಮಾತನ್ನು ಕೇಳಿ

ಮಕ್ಕಳಿಗೆ ಪೋಷಕರು ತಮ್ಮ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನ ತೋರಿದರೆ ಅದರಿಂದ ಬಹಳಷ್ಟು ಆತ್ಮವಿಶ್ವಾಸ ಬರುತ್ತದೆ. ಅದರಲ್ಲೂ ಅವರು ಕೋಪಗೊಂಡಾಗ ಅದಕ್ಕೆ ಕಾರಣವನ್ನು ಕಣ್ಣಿನಲ್ಲಿ ಕಣ್ಣಿಟ್ಟು ಕೇಳಿಸಿಕೊಳ್ಳಿ. ಅವರಿಗೆ ಆ ಕ್ಷಣದಲ್ಲಿ ಹೇಗನಿಸುತ್ತಿದೆ ಎಂದು ಹೇಳಲು ಅವಕಾಶ ಮಾಡಿಕೊಡಿ.

click me!