ಹಾವು ಮನೆಗೆ ಬಂದಾಗ ಕೈಕಾಲು ಆಡೋದಿಲ್ಲ. ಭಯದಲ್ಲಿ ಬೆವರು ಬರುತ್ತೆ. ಈ ಸಮಯದಲ್ಲಿ ಹೆದರಿಕೆ ಬಿಟ್ಟು ಬುದ್ದಿ ಓಡಿಸಿ, ಯಾರಿಗೂ ಹಾನಿ ಮಾಡದಂತೆ ಹಾವನ್ನು ಹೇಗೆ ಓಡಿಸೋದು ನೋಡಿ.
ಹಾವಿ (Snake)ನ ಹೆಸರು ಕೇಳ್ತಿದ್ದಂತೆ ರಾತ್ರಿಯಲ್ಲೂ ಹೆದರುವ ಜನರಿದ್ದಾರೆ. ಭಾರತ (India) ದಲ್ಲೂ ಅತ್ಯಂತ ವಿಷಕಾರಿ (poisonous) ಹಾವುಗಳ ಸಂಖ್ಯೆ ಸಾಕಷ್ಟಿದೆ. ಹಾಗೆಯೇ ಮನುಷ್ಯನಿಗೆ ಹಾನಿ ಮಾಡದ ಹಾವುಗಳ ಸಂಖ್ಯೆ ಕೂಡ ಸಾಕಷ್ಟಿದೆ. ಬೇಸಿಗೆ, ಮಳೆಗಾಲದಲ್ಲಿ ಈ ಹಾವುಗಳು ತಮ್ಮ ಬಿಲದಿಂದ ಏಳುತ್ತವೆ. ಅಲ್ಲಿ, ಇಲ್ಲಿ ಹಾವುಗಳು ಕಣ್ಣಿಗೆ ಕಾಣಿಸಿಕೊಳ್ತಿರುತ್ತವೆ. ಹಳ್ಳಿಗಳಲ್ಲಿ ಹಾವಿನ ಕಾಟ ಹೆಚ್ಚು. ಮನೆಗೆ ಬಂದ ಈ ಹಾವನ್ನು ಹೇಗೆ ಓಡಿಸೋದು ಎಂಬ ಭಯ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದ. ಹಾವು ಮನೆಯ ಯಾವುದೇ ಮೂಲೆಯಲ್ಲಿ ಅಡಗಿ ಕುಳಿತಿದ್ರೂ ನೀವು ಟೆನ್ಷನ್ ಮಾಡಿಕೊಳ್ಳದೇ ನಿಮ್ಮ ಮನೆಯಲ್ಲಿರುವ ಒಂದು ವಸ್ತುವನ್ನು ಅದ್ರ ಸುತ್ತ ಮುತ್ತ ಹಾಕಿದ್ರೆ ಸಾಕು. ಹಾವು ಸದ್ದಿಲ್ಲದೆ ನಿಮ್ಮ ಮನೆ ಬಿಡುತ್ತದೆ. ನಾವಿಂದು ಹಾವು ಓಡಿಸಲು ನೀವು ಯಾವ ವಸ್ತುವನ್ನು ಬಳಸಬೇಕು ಎಂಬುದನ್ನು ಹೇಳ್ತೇವೆ.
ಹಾವು ಬರದಂತೆ ಹೀಗೆ ಮಾಡಿ : ಬೇಸಿಗೆಯಲ್ಲಿ ಹಾವು ಆಹಾರ ಅರಸಿ ಹೊರಬರುತ್ತವೆ. ಹಾವುಗಳು ಇಲಿಗಳು, ಕಪ್ಪೆಗಳು ಮತ್ತು ಮೀನುಗಳನ್ನು ತಿನ್ನುತ್ತವೆ. ಇವುಗಳ ವಾಸನೆಯನ್ನು ಹಾವು ಬೇಗ ಪತ್ತೆ ಮಾಡುತ್ತದೆ. ಯಾವ ಜಾಗದಲ್ಲಿ ಮೀನು, ಕಪ್ಪೆ ಅಥವಾ ಇಲಿ ವಾಸನೆ ಬರುತ್ತದೆಯೋ ಅಲ್ಲಿಗೆ ಹಾವು ಬರುತ್ತದೆ. ನಿಮ್ಮ ಮನೆಯಲ್ಲಿ ಇವು ಇರದಂತೆ ನೋಡಿಕೊಳ್ಳಿ. ಮರ, ಇಟ್ಟಿಗೆ ಅಥವಾ ಹಳೆಯ ವಸ್ತುಗಳನ್ನು ಕೂಡ ಮನೆಯ ಅಕ್ಕಪಕ್ಕ ಸಂಗ್ರಹಿಸಿ ಇಡಬೇಡಿ. ಹಾವು ಅನೇಕ ಬಾರಿ ಇಂಥ ವಸ್ತುಗಳ ಮಧ್ಯೆ ಅಡಗಿ ಕುಳಿತಿರುತ್ತದೆ. ಅದಕ್ಕೆ ತನ್ನನ್ನು ತಾನು ಮರೆಮಾಡಿಕೊಳ್ಳಲು ಈ ವಸ್ತುಗಳು ಸಹಾಯ ಮಾಡುತ್ತವೆ. ನಿಮ್ಮ ಮನೆಯಲ್ಲಿ ಅನುಪಯುಕ್ತ ವಸ್ತುಗಳು ಇರದಂತೆ ಮೊದಲು ನೋಡಿಕೊಳ್ಳಬೇಕು. ತೆರೆದ ಜಾಗದಲ್ಲಿ ಹಾವುಗಳು ಅಡಗಿಕೊಳ್ಳಲು ಜಾಗವಿರುವುದಿಲ್ಲ. ನೀವು ಮನೆಗೆ ಬಂದ ಹಾವನ್ನು ಓಡಿಸುವ ಪ್ರಯತ್ನ ಮಾಡಿದಾಗ ಹಾವು ಓಡಿ ಹೋಗದೆ ಇಂಥ ಜಾಗದಲ್ಲಿ ಅಡಗಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಒಂಟಿಯಾಗಿರುವ ಶೆರ್ಲಿನ್ ಚೋಪ್ರಾ ಅಮ್ಮನಾಗಲು ಸಾಧ್ಯವಿಲ್ಲ! ಕಾಡ್ತಿದೆ ಈ ರೋಗ
ಯಾವ ವಸ್ತುವನ್ನು ಸಿಂಪಡಿಸಿದ್ರೆ ಹಾವು ಓಡಿ ಹೋಗುತ್ತೆ? : ಹಾವು ಶತ್ರುವಲ್ಲ. ಅದಕ್ಕೆ ಹಾನಿ ಮಾಡದೆ ಅದು ನಿಮಗೆ ಹಾನಿ ಮಾಡುವುದಿಲ್ಲ. ಹಾವು ಮನೆಯಲ್ಲಿದ್ದರೆ ನೀವು ಭಯಪಡುವ ಬದಲು ಮನೆಯಲ್ಲಿರುವ ವಸ್ತುವನ್ನು ಬಳಸಿ. ಹಾವುಗಳು ತೀವ್ರವಾದ ವಾಸನೆಗೆ ಹೆದರುತ್ತದೆ. ಅದರಿಂದ ವಿಚಲಿತವಾಗಿ ಅಲ್ಲಿಂದ ದೂರ ಓಡುತ್ತದೆ. ಹಾವು ಅಡಗಿ ಕುಳಿತಿರುವ ಜಾಗದಲ್ಲಿ ನೀವು ಹೇರ್ ಆಯಿಲ್ ಸ್ಪ್ರೇ ಮಾಡಬಹುದು. ಇಲ್ಲವೆ ಫಿನೈಲ್, ಬೇಕಿಂಗ್ ಪೌಡರ್, ಸೀಮೆ ಎಣ್ಣೆಯನ್ನು ಸಿಂಪಡಿಸಬಹುದು. ನೀವು ಯಾವುದೇ ಕಾರಣಕ್ಕೂ ಹಾವಿನ ಮೈಮೇಲೆ ಈ ವಸ್ತುಗಳನ್ನು ಹಾಕಬೇಡಿ. ಅದ್ರಲ್ಲೂ ಫಿನೈಲ್ ಹಾಕಬೇಡಿ. ಇದು ಹಾವಿಗೆ ಹಾನಿಯುಂಟು ಮಾಡುತ್ತದೆ. ಹಾವು ಅಡಗಿರುವ ಜಾಗದ ಸುತ್ತ ಇದನ್ನು ಹಾಕಿದರೆ ಸಾಕು.
Hair Coloring: ಕೂದಲು ಬಣ್ಣ ಮಾಡುವ ಮುನ್ನ ಈ 6 ಸಲಹೆ ಪಾಲಿಸಿ
ಬಹುತೇಕರ ಮನೆಯಲ್ಲಿ ಜಿರಲೆ ಹಾಗೂ ಸೊಳ್ಳೆ ಓಡಿಸಲು ಹಿಟ್ ನಂತಹ ಕೀಟನಾಶಕ (insectivorous) ಬಳಕೆ ಮಾಡ್ತಾರೆ. ನಿಮ್ಮ ಮನೆಯಲ್ಲೂ ಇದಿದ್ದಲ್ಲಿ ನೀವು ಹಾವಿನ ಸುತ್ತ ಇದನ್ನು ಸ್ಪ್ರೇ ಮಾಡಿ. ಕೀಟನಾಶಕದ ಬಲವಾದ ವಾಸನೆಯನ್ನು ಹಾವು ಸಹಿಸುವುದಿಲ್ಲ. ಹಾವುಗಳು ವೊಮೆರೋನಾಸಲ್ ಸಿಸ್ಟಮ್ ಅಂಗವನ್ನು ಹೊಂದಿರುತ್ತವೆ. ವೊಮೆರೋನಾಸಲ್ ವ್ಯವಸ್ಥೆಯು ಆ ಚಿಕ್ಕ ರಾಸಾಯನಿಕ ಕಣಗಳನ್ನು ತೆಗೆದುಕೊಂಡು ಹಾವಿಗೆ ಅವು ಏನೆಂದು ಹೇಳುತ್ತದೆ. ಈ ರೀತಿಯಾಗಿ ಹಾವು ಕೊಳಕು, ಸಸ್ಯಗಳು ಮತ್ತು ಇತರ ಪ್ರಾಣಿಗಳಂತಹ ವಸ್ತುಗಳನ್ನು ವಾಸನೆ ಮೂಲಕವೇ ಪತ್ತೆ ಮಾಡುತ್ತವೆ. ಹಾವಿಗೆ ಕಣ್ಣು ಕಾಣುವುದಿಲ್ಲ. ನಾಲಿಗೆಯೇ ಅದರ ಶಕ್ತಿ.