ಮಕ್ಕಳ ಅಲರ್ಜಿಗೆ ಹೀಗೊಂದು ಕಾರಣ, ಎಚ್ಚರ!

 |  First Published Jun 25, 2018, 1:48 PM IST

ಮಗುವಿಗೆ ಅಲರ್ಜಿಯಂತಹ ಸೂಚನೆಗಳು(ಉರಿಯೂತ/ಕೆಲ ಆಹಾರ ಸೇವನೆ ನಂತರ ಊತ, ಕೆರೆತ, ಮೂಗು ಸುರಿಯುವುದು/ಮೂಗು ಕಟ್ಟಿಕೊಳ್ಳುವುದು/ನಿಯಮಿತ ಸೀನು,ಉಬ್ಬಸ/ಕೆಮ್ಮು) ಕಂಡುಬಂದರೆ ಅಲರ್ಜಿ ನಿರ್ವಹಣೆಯಲ್ಲಿ ವಿಶೇಷವಾಗಿ ತರಬೇತಿ ಪಡೆದ ತಜ್ಞರನ್ನು ಸಂಪರ್ಕಿಸಿ ಅದನ್ನು ಗುರುತಿಸಿ, ಪರೀಕ್ಷಿಸಿ ಚಿಕಿತ್ಸೆ ಪಡೆಯುವುದು ಅಗತ್ಯ. ರೋಗತಡೆಯೇ ಚಿಕಿತ್ಸೆಗಿಂತ ಸದಾ ಉತ್ತಮ.


ನಮ್ಮ ರೋಗ ನಿರೋಧಕ ವ್ಯವಸ್ಥೆ ಪರಿಸರದಲ್ಲಿರುವ ಹಾನಿಕಾರಕವಲ್ಲದ ಅಂಶಗಳನ್ನು ಹಾನಿಕಾರಕ ಎಂದು ತಪ್ಪಾಗಿ ಗ್ರಹಿಸಿದಾಗ ಅಲರ್ಜಿ ಉಂಟಾಗುತ್ತದೆ. ಅಲರ್ಜಿ ಕಳೆದ ಎರಡು ದಶಕಗಳಿಂದ ಅಪಾಯಕಾರಿ ಮಟ್ಟದಲ್ಲಿ ಅದರಲ್ಲೂ ಭಾರತದಂತಹ ದೇಶಗಳಲ್ಲಿ ಹೆಚ್ಚಾಗುತ್ತಿದೆ. ಮಕ್ಕಳು ಈ ಬಗೆಯ ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಹೆಚ್ಚು.

ಅಲರ್ಜಿ.. ಅಬಾಲವೃದ್ಧರಾದಿಯಾಗಿ ಎಲ್ಲರೂ ಇದರಿಂದ ಬಳಲುವವರೇ. ಈ ಸೀಸನ್‌ನಲ್ಲಿ ಮಕ್ಕಳಲ್ಲಿ ಅಲರ್ಜಿ ಸಮಸ್ಯೆ ಹೆಚ್ಚಾಗುತ್ತಿದೆ. ಶೇ.20ರಷ್ಟು ಜನಸಂಖ್ಯೆಗೆ ಅಲರ್ಜಿಗಳಿರಬಹುದು ಎಂದು ಅಂದಾಜಿಸಲಾಗಿದ್ದು ಕೆಲವರಿಗೆ ಅಲ್ಪ, ಕೆಲವರಿಗೆ ಗಂಭೀರವಾಗಿರುತ್ತದೆ. ಪಾಶ್ಚಿಮಾತ್ಯ ಜಗತ್ತಿನಲ್ಲಿ ಫುಡ್ ಅಲರ್ಜಿಗಳು ಹೆಚ್ಚಾಗಿದ್ದು ಭಾರತದಲ್ಲಿ ಅದು ಬಹಳ ಅಪರೂಪ. ಆದರೆ ಇದು ಅತ್ಯಂತ ವೇಗವಾಗಿ ಬದಲಾಗುತ್ತಿದ್ದು ನಾವು ಕೂಡಲೇ ಸಕ್ರಿಯರಾಗಬೇಕಿದೆ! 

Tap to resize

Latest Videos

undefined

ಆಹಾರ ಪದಾರ್ಥಗಳ ಅಲರ್ಜಿ ಫುಡ್ ಅಲರ್ಜಿಗಳಲ್ಲಿ ನಟ್ ಅಲರ್ಜಿ(ಕಡಲೇಕಾಯಿ ಬೀಜ) ಜೀವಕ್ಕೆ ಹಾನಿಕಾರಕವಾಗಬಲ್ಲದು. ನಮ್ಮ ದೇಶದವರು ಇದನ್ನು ಕೇಳಿಯೇ ಇಲ್ಲ.  ವಿದೇಶದಲ್ಲಿ ಜನಿಸಿದ ಭಾರತೀಯ ಮಕ್ಕಳಲ್ಲಿ ಹೆಚ್ಚು ಗಂಭೀರ ಅಲರ್ಜಿಗಳನ್ನು ಮತ್ತು ಅಲ್ಲಿನ ಸ್ಥಳೀಯ ಜನಸಂಖ್ಯೆಯಲ್ಲೂ ನಾವು ಈಗ ಕಾಣುತ್ತಿದ್ದೇವೆ. ಈ ಸಮಸ್ಯೆ ನಮ್ಮ ದೇಶದಲ್ಲೂ ಉಂಟಾಗಬಹುದು. ನಮ್ಮ ದೇಶದಲ್ಲಿ ಆಹಾರ ಉತ್ಪಾದನೆ ಮತ್ತು ಲೇಬಲಿಂಗ್‌ನ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದಿಲ್ಲ. 

ಫುಡ್ ಅಲರ್ಜಿ ಇದ್ದರೆ ಅದು ಅಪಾಯಕಾರಿ. ಬೀದಿಬದಿಯ ಆಹಾರ ಪದಾರ್ಥಗಳ ಸೇವನೆ ನಿಲ್ಲಿಸಿದರೆ, ಪಾರ್ಟಿ, ಫಂಕ್ಷನ್‌ಗಳಲ್ಲಿ ಆಹಾರ ಸೇವಿಸುವಾಗ ಎಚ್ಚರ ವಹಿಸುವುದು ಈ ನಿಟ್ಟಿನಲ್ಲಿ ಅತ್ಯವಶ್ಯಕ. ಅತಿ ಸ್ವಚ್ಛತೆಯೂ ಅಲರ್ಜಿಗೆ ಕಾರಣ ಅಲರ್ಜಿ ಏಕೆ ಹೆಚ್ಚಾಗುತ್ತದೆ, ನಮ್ಮ ಪರಿಸರ ಮತ್ತು ಜೀವನಶೈಲಿಯಲ್ಲಿ ಯಾವುದು ಈ ಬದಲಾವಣೆ ತಂದಿದೆ? ಸಂಶೋಧನೆ ಮುಂದುವರೆಯುತ್ತಿದೆ. ನಾವು ಈಗ ಹೆಚ್ಚು ಸ್ವಚ್ಛವಾಗಿದ್ದೇವೆ. ನಾವು ಸ್ವಚ್ಛವಾಗಿದ್ದಷ್ಟೂ ರೋಗ ಪ್ರತಿರೋಧಕ ವ್ಯವಸ್ಥೆಗೆ ಕಡಿಮೆ ಕೆಲಸವಾಗುತ್ತದೆ. ಆದ್ದರಿಂದ ಪರಿಸರದಲ್ಲಿರುವ ಹಾನಿಕಾರಕವಲ್ಲದ ಫುಡ್ ಪ್ರೊಟೀನ್, ಧೂಳಿನ ಕಣಗಳು, ಪುಷ್ಪರೇಣು ಇತ್ಯಾದಿಯನ್ನು ಗುರಿಯಾಗಿಸಿಕೊಳ್ಳುತ್ತದೆ. ನಮ್ಮ ಆಧುನಿಕ ಪರಿಸರ ಮತ್ತು ಜೀವನಶೈಲಿ ಅಲರ್ಜಿಗಳ ಹೆಚ್ಚಳಕ್ಕೆ ಪ್ರಮುಖ ಕಾರಣ. ನಾವು ಈಗ ಗಾಳಿ, ಬೆಳಕು ಸರಿಯಿಲ್ಲದ ಸ್ಥಳಗಳಲ್ಲಿ ವಾಸಿಸುತ್ತೇವೆ ಮತ್ತು ಹೊರಾಂಗಣದಲ್ಲಿ ಬಹಳ ಕಡಿಮೆ ಕಾಲ ಕಳೆಯುತ್ತೇವೆ. ವಾಯುಮಾಲಿನ್ಯದ ಮಟ್ಟ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿದೆ. ನಾವು ಫಾಸ್ಟ್ ಫುಡ್ ಸೇವಿಸುತ್ತೇವೆ ಮತ್ತು ಸಾಂಪ್ರದಾಯಿಕ ಜೀವನಶೈಲಿ ಮತ್ತು ಆಹಾರಸೇವನೆಯ ಅಭ್ಯಾಸಗಳಿಂದ ದೂರವಾಗಿದ್ದೇವೆ. 

ಹೆರಿಗೆ ವೇಳೆ ಅಲರ್ಜಿ ಕೆಲ ರೀತಿಗಳಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಲು ನೆರವಾಗುತ್ತಿರುವ ಆಧುನಿಕ ಔಷಧಗಳು ಅಲರ್ಜಿಗಳ ಹೆಚ್ಚಳಕ್ಕೆ ಕೊಡುಗೆ ನೀಡಿವೆ. ಸಿಸೇರಿಯನ್ ಮೂಲಕ ಜನಿಸುವ ಮಗುವಿಗೆ ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ. ಆದ್ದರಿಂದ ಆಮಗುವಿನ ರೋಗ ಪ್ರತಿರೋಧ ವ್ಯವಸ್ಥೆಯ ಮೇಲೂ ಪರಿಣಾಮ ಉಂಟು ಮಾಡುತ್ತದೆ. ಜೀವನದ ಪ್ರಾರಂಭಿಕ ಘಟ್ಟದಲ್ಲಿ ಆ್ಯಂಟಿ ಬಯೋಟಿಕ್ಸ್ ಬಳಕೆ ಅಲರ್ಜಿಗಳ ರಿಸ್ಕ್ ಹೆಚ್ಚಿಸುತ್ತದೆ. ಆದರೆ ದುರಾದೃಷ್ಟವಶಾತ್ ಕೆಲವೊಮ್ಮೆ ಅವುಗಳ ಬಳಕೆ ತಪ್ಪಿಸಲಾಗದು.

ಅಭ್ಯಾಸಗಳಿಂದ ದೂರವಾಗಿದ್ದೇವೆ. ಹೆರಿಗೆ ವೇಳೆ ಅಲರ್ಜಿ ಅಭ್ಯಾಸಗಳಿಂದದೂರವಾಗಿದ್ದೇವೆ. ಹೆರಿಗೆ ವೇಳೆ ಅಲರ್ಜಿ ಕೆಲ ರೀತಿಗಳಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಲು ನೆರವಾಗುತ್ತಿರುವ ಆಧುನಿಕ ಔಷಧಗಳು ಅಲರ್ಜಿಗಳ ಹೆಚ್ಚಳಕ್ಕೆ ಕೊಡುಗೆ ನೀಡಿವೆ. ಸಿಸೇರಿಯನ್ ಮೂಲಕ ಜನಿಸುವ ಮಗುವಿಗೆ ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ. ಆದ್ದರಿಂದ ಆಮಗುವಿನ ರೋಗ  ಪ್ರತಿರೋಧ ವ್ಯವಸ್ಥೆಯ ಮೇಲೂ ಪರಿಣಾಮ ಉಂಟು ಮಾಡುತ್ತದೆ. ಜೀವನದ ಪ್ರಾರಂಭಿಕ ಘಟ್ಟದಲ್ಲಿ ಆ್ಯಂಟಿ ಬಯೋಟಿಕ್ಸ್ ಬಳಕೆ ಅಲರ್ಜಿಗಳ ರಿಸ್ಕ್ ಹೆಚ್ಚಿಸುತ್ತದೆ. ಆದರೆ ದುರಾದೃಷ್ಟವಶಾತ್ ಕೆಲವೊಮ್ಮೆ ಅವುಗಳ ಬಳಕೆ ತಪ್ಪಿಸಲಾಗದು.

ಅಲರ್ಜಿಗೆ ಸಿಂಪಲ್ ಟಿಪ್ಸ್

  • ಸ್ವಚ್ಛತೆ ಒಳ್ಳೆಯದೇ ಆದರೂ ಅದರ ಕುರಿತು ಅತಿಯಾದ ಗೀಳು ಒಳ್ಳೆಯದಲ್ಲ. ಮಕ್ಕಳು ಹೊರಗಡೆ ಕಾಲ ಕಳೆಯುವುದು ಮತ್ತು ಅವರ ಕೈಗಳು ಗಲೀಜಾಗುವುದು ಬಹಳ ಮುಖ್ಯ. ಪ್ರಾಣಿಗಳೊಂದಿಗೆ ಹೊಲಗಳಲ್ಲಿ ವಾಸಿಸುವ ಜನರಿಗೆ ಅಲರ್ಜಿ ಪ್ರಮಾಣ ಕಡಿಮೆ. 
  • ಮಕ್ಕಳಲ್ಲಿ 6 ತಿಂಗಳ ವಯಸ್ಸಿನವರೆಗೆ ಸ್ತನ್ಯಪಾನವನ್ನು ಉತ್ತೇಜಿಸಬೇಕು. ಸ್ತನ್ಯಪಾನದಿಂದ ಮಗುವಿಗೆ ಹಲವು ಬಗೆಯ ಅನುಕೂಲಗಳಿದ್ದು ಅಲರ್ಜಿಯ ವಿರುದ್ಧ ರಕ್ಷಣೆಯನ್ನೂ ನೀಡುತ್ತದೆ.
  • ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಒಳಗೊಂಡ ಸಮತೋಲನದ ಆಹಾರ ಉಪಯುಕ್ತ. ಆಹಾರಗಳ ಕುರಿತು ಅನಗತ್ಯ ನಿಯಂತ್ರಣ ಗರ್ಭಿಣಿಯರು ಮತ್ತು ಮಕ್ಕಳಿಗೆ
  • ಒಳ್ಳೆಯದಲ್ಲ. ಸಾಂಪ್ರದಾಯಿಕ ಭಾರತೀಯ ಆಹಾರ ಹಾಗೂ ಸ್ತನ್ಯಪಾನ ಯಾವುದೇ ಬಗೆಯ ಅಲರ್ಜಿ ಉಂಟಾಗಲು ತಡೆಯೊಡ್ಡುತ್ತದೆ.
  • ವಾಯುಮಾಲಿನ್ಯ ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. 

 

ಡಾ.ನಂದನಾ ಬಾಲಾ

click me!