ಕನಸಿನಲ್ಲಿ ಹಳೇ ಪ್ರೇಮಿ ಕಾಡಲು ಕಾರಣವೇನು ಗೊತ್ತಾ?

By Anusha Shetty  |  First Published Jan 6, 2020, 11:13 AM IST

ಕನಸಿನಲ್ಲಿ ಹಳೇ ಪ್ರೇಮಿ ಕಾಣಿಸಿಕೊಂಡಾಗ ಮೂಡ್ ಹಾಳಾಗುವುದು ಸಹಜ. ಹಾಗಂತ ನಿಮ್ಮ ಈಗಿನ ಸಂಬಂಧದಲ್ಲಿ ಹುಳುಕಿರುವ ಕಾರಣ ಅಂಥ ಕನಸು ಬೀಳುತ್ತಿದೆ ಎಂದು ಭಾವಿಸಬೇಕಿಲ್ಲ. ನೀವು  ಈಗಿನ ಸಂಗಾತಿ ಜೊತೆಗೆ ಖುಷಿ ಖುಷಿಯಿಂದ ಇರುವ ಕಾರಣಕ್ಕೇ ಇಂಥ ಕನಸು ಬೀಳುತ್ತಿದೆ.


ಬದುಕಿನಲ್ಲಿ ಇನ್ನೆಂದೂ ಆತ ಅಥವಾ ಆಕೆ ಮುಖವನ್ನೇ ನೋಡಬಾರದು ಎಂದು ನಿಶ್ಚಯಿಸಿಕೊಂಡು ಸಂಬಂಧ ಕಡಿದುಕೊಂಡ ಎಷ್ಟೋ ವರ್ಷಗಳ ಬಳಿಕ ನಿಮ್ಮ ಕನಸಿನಲ್ಲಿ ಆ ಪ್ರೇಮಿ ಕಾಣಿಸಿಕೊಂಡರೆ ಹೇಗಾಗುತ್ತದೆ? ಬೆಚ್ಚಿ ಬಿದ್ದು ಎದ್ದು ಕೂರುವ ನೀವು ಆ ರಾತ್ರಿ ಮತ್ತೆ ನಿದ್ರೆಗೆ ಜಾರುವುದು ಅನುಮಾನವೇ. ಹಾಗಂತ ನಿಮ್ಮ ಎಕ್ಸ್ ಗರ್ಲ್‍ಫ್ರೆಂಡ್ ಅಥವಾ ಬಾಯ್‍ಫ್ರೆಂಡ್ ಕನಸಿನಲ್ಲಿ ಬಂದ ತಕ್ಷಣ ನೀವು ಹಳೆಯ ಸಂಬಂಧಕ್ಕೆ ಹಿಂತಿರುಗಲು ಬಯಸುತ್ತಿದ್ದೀರಿ ಎಂದರ್ಥವಲ್ಲ. ಅಥವಾ ನೀವು ನಿಮ್ಮ ಈಗಿನ ಸಂಗಾತಿ ಜೊತೆಗೆ ನೆಮ್ಮದಿಯಿಂದಿಲ್ಲ ಎಂದು ಭಾವಿಸಬೇಕಿಲ್ಲ. ಈ ರೀತಿ ರಾತ್ರಿ ಕನಸಿನಲ್ಲಿ ನಿಮ್ಮ ಎಕ್ಸ್ ಕಾಣಿಸುತ್ತಿದ್ದಾರೆ ಎಂದರೆ ನೀವು ಈಗಿನ ಸಂಗಾತಿಯೊಂದಿಗೆ ಸಂತೃಪ್ತಿಯ ಜೀವನ ಸಾಗಿಸುತ್ತಿದ್ದೀರಿ ಎಂದೇ ಅರ್ಥ. ಸಂಗಾತಿಯೊಂದಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿರುವವರಿಗೆ ಆಗಾಗ ಇಂಥ ಕನಸು ಬೀಳುವುದು ಮಾಮೂಲು ಅಂತೆ.



ಮತ್ತೇಕೆ ಕಾಣಿಸುತ್ತವೆ?: ಕನಸುಗಳು ನಮ್ಮ ಯೋಚನೆಗಳ ಪರಿಧಿಯನ್ನು ಮೀರಿರುತ್ತವೆ. ನಮ್ಮ ಕಲ್ಪನೆಗೂ ಮೀರಿದ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ನಮ್ಮ ಒಳಮನಸ್ಸು ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನದಲ್ಲಿರುತ್ತದೆ. ಅದು ನಿಮ್ಮ ಬಾಲ್ಯ, ಯೌವನ, ಪ್ರೀತಿ, ಬ್ರೇಕ್‍ಅಪ್ ಹೀಗೆ ಯಾವ ವಿಚಾರಕ್ಕೆ ಬೇಕಾದರೂ ಸಂಬಂಧಿಸಿರಬಹುದು. ಈ ಸಮಸ್ಯೆಗಳು ಆಯಾ ಕಾಲಘಟ್ಟದಲ್ಲಿ ಬಗೆಹರಿಯದಿದ್ದಾಗ ಮನಸ್ಸು ಅದನ್ನು ಬದುಕಿನ ಮುಂದಿನ ಹಂತಕ್ಕೂ ಕೊಂಡೊಯ್ಯುತ್ತದೆ. ನೀವೆಂದಾದ್ರೂ ನಿಮಗೆ ಅಂಥ ಕನಸು ಏಕೆ ಬೀಳುತ್ತಿದೆ ಎಂಬ ಬಗ್ಗೆ ಪರಿಶೀಲಿಸಿದ್ದೀರಾ? ಇಲ್ಲವಾದರೆ ಈ ಕೆಳಗೆ ನೀಡಿರುವ ಕಾರಣಗಳಿಂದ ನಿಮಗೆ ಅಂಥ ಕನಸು ಬಿದ್ದಿರಬಹುದೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

Tap to resize

Latest Videos

ವಿದಾಯದಲ್ಲಿ ವಿಷಾದ: ಹಳೆಯ ಸಂಬಂಧಕ್ಕೆ ಎಳ್ಳುನೀರು ಬಿಡುವ ಸಮಯದಲ್ಲಿ ಕಹಿ ಅನುಭವಗಳು ನಿಮಗಾಗಿದ್ದರೆ ಮನಸ್ಸಿನಾಳದಲ್ಲಿ ಹಾಗೆಯೇ ಉಳಿದು ಬಿಡುತ್ತವೆ. ಬ್ರೇಕ್‍ಅಪ್ ಸಮಯದಲ್ಲಿ ನಾನು ಆ ರೀತಿ ಮಾತನಾಡಬಾರದಿತ್ತು ಅಥವಾ ವರ್ತಿಸಬಾರದಿತ್ತು ಎಂಬ ಭಾವನೆ ನಿಮ್ಮಲ್ಲಿದ್ದರೆ ಅದು ದೀರ್ಘಕಾಲದ ತನಕ ಹಾಗೆಯೇ ಉಳಿದುಬಿಡುತ್ತವೆ. ಇವು ಆಗಾಗ ಕನಸಿನ ರೂಪದಲ್ಲಿ ನಿಮ್ಮನ್ನು ಕಾಡುತ್ತವೆ. ಸಂಬಂಧವನ್ನು ಆರೋಗ್ಯಕರ ರೀತಿಯಲ್ಲಿ ಅಂತ್ಯಗೊಳಿಸಿದಾಗ ಇಂಥ ಬೆಚ್ಚಿ ಬೀಳಿಸುವ ಕನಸುಗಳು ಕಾಡುವುದಿಲ್ಲ. 



ಅಲ್ಲಿದದ್ದು ಇಲ್ಲಿ ಮಿಸ್ ಆದಾಗ:   ನೀವು ನಿಮ್ಮ ಮಾಜಿ ಪ್ರಿಯತಮ ಅಥವಾ ಪ್ರಿಯತಮೆ ಜೊತೆಗೆ ರೋಮ್ಯಾಂಟಿಕ್ ಆಗಿರುವ ಅಥವಾ ಖುಷಿಖುಷಿಯಾಗಿರುವ ಕನಸು ಬೀಳಬಹುದು. ಇದರರ್ಥ ನೀವು ಹಿಂತಿರುಗಿ ಆ ಸಂಬಂಧಕ್ಕೆ ಹೋಗಲು ಬಯಸುತ್ತಿದ್ದೀರಿ ಎಂದಲ್ಲ. ಬದಲಿಗೆ ಆ ಸಂಬಂಧದಲ್ಲಿನ ಯಾವುದೋ ಒಂದು ಹವ್ಯಾಸ ಅಥವಾ ವಿಚಾರವನ್ನು ಈಗ ನೀವು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದರ್ಥ. ನೀವು ಈಗಿನ ನಿಮ್ಮ ಸಂಗಾತಿಯೊಂದಿಗೆ ಖುಷಿಯಿಂದಲೇ ಇರಬಹುದು. ಆದರೆ, ಯಾವುದೋ ಒಂದು ವಿಚಾರದಲ್ಲಿ ನೀವು ಆಗಿನ ಸಂಬಂಧದಲ್ಲಿದ್ದ ಚಟುವಟಿಕೆಯನ್ನು ಬಯಸುತ್ತಿರುವಿರಿ. ಹೀಗಾಗಿ ನಿಮಗೆ ಹಳೆಯ ಸಂಗಾತಿಯೊಂದಿಗೆ ಕಳೆದ ಯಾವುದೋ ಖುಷಿ ವಿಚಾರ ಕನಸಿನ ರೂಪದಲ್ಲಿ ಕಾಡಿದಾಗ ಈ ಸಂಬಂಧದಲ್ಲೂ ನೀವು ಅದನ್ನು ಮಿಸ್ ಮಾಡಿಕೊಳ್ಳುತ್ತಿದ್ದಿರೋ ಇಲ್ಲವೋ ಎಂಬುದನ್ನು ಪರಾಮರ್ಶಿಸಿಕೊಳ್ಳಿ. ಒಂದು ವೇಳೆ ಹೌದು ಎಂದಾದರೆ ನಿಮ್ಮ ಈಗಿನ ಸಂಗಾತಿಯೊಂದಿಗೆ ಈ ವಿಷಯದ ಕುರಿತು ಚರ್ಚಿಸಿ.

undefined

ಎಕ್ಸ್ ಸಾವೂ ಕಾಡಬಹುದು:  ನಿಮ್ಮ ಹಿಂದಿನ ಸಂಗಾತಿಯ ಸಾವು ನಿಮ್ಮನ್ನು ಸದಾ ಕಾಡುತ್ತಿರಬಹುದು. ಆ ನೋವು ಕನಸಿನ ರೂಪದಲ್ಲೂ ಕಾಣಿಸಿಕೊಳ್ಳಬಹುದು. ನಿಮ್ಮ ಬದುಕಿನಲ್ಲಿ ಅದೊಂದು ಮುಗಿದು ಹೋದ ಅಧ್ಯಾಯ. ಅದು ನಿಮ್ಮ ಕೈಮೀರಿ ಘಟಿಸಿದ ಘಟನೆ. ಆದಕಾರಣ ಆ ವಿಷಯದ ಬಗ್ಗೆ ಪದೇಪದೆ ಚಿಂತಿಸುವುದನ್ನು ಬಿಟ್ಟುಬಿಡಿ. ಈಗಿನ ಸಂಗಾತಿಯೊಂದಿಗೆ ಖುಷಿಯಿಂದ ಇರಲು ಪ್ರಯತ್ನಿಸಿ.

ಮಕ್ಕಳ ರಜೆ ನಂಗೆ ಸಜೆ ಎಂಬ ಉದ್ಯೋಗಸ್ಥ ಅಮ್ಮನಿಗೆ 6 ಟಿಪ್ಸ್!
 

ನೆನಪು, ಭಾವನೆಗಳ ರೂಪದಲ್ಲೂ ಕಾಡಬಹುದು: ನಿಮ್ಮ ಕನಸಿನಲ್ಲಿ ಹಿಂದಿನ ನೆನಪುಗಳು ವ್ಯಕ್ತಿಯ ರೂಪದಲ್ಲೇ ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುವುದಿಲ್ಲ. ಆ ವ್ಯಕ್ತಿಯೊಂದಿಗೆ ನಿಮ್ಮನ್ನು ಸಂಪರ್ಕಿಸುವ ಭಾವನೆಗಳು ಹಾಗೂ ನೆನಪುಗಳ ರೂಪದಲ್ಲೂ ಕಾಡಬಹುದು. ಆದಕಾರಣ ಈಗಿನ ಸಂಬಂಧದಲ್ಲಿ ನೀವು ಆ ಭಾವನೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಿರೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ. 

click me!