ಹೆಣ್ಮಕ್ಕಳು ಚೆಂದ ಕಾಣೋ ಹಾಗೆ ಡ್ರೆಸ್ ಮಾಡಿಕೊಂಡಿರುತ್ತಾರೆ. ಎಕ್ಸ್‌ಪೆನ್ಸಿವ್ ಡ್ರೆಸ್ ಕೊಳ್ಳಲು ಹಿಂದು ಮುಂದು ನೋಡುವುದಿಲ್ಲ. ಆದರೆ, '40 ಸಾವಿರ ಸೀರೆ ಕೊಂಡು, 40 ರೂ. ಬ್ರೇಸಿಯರ್ ತೊಡುತ್ತಾರೆ...' ಎನ್ನುವ ಆರೋಪವೂ ಇದೆ.
ಸುಳ್ಳಲ್ಲ ಇದು. ಬಾಹ್ಯ ಉಡುಗೆ ಕಡೆ ಗಮನ ಹರಿಸೋ ಹೆಣ್ಣು, ಒಳ ಉಡುಪಿನೆಡೆಗೆ ಎಷ್ಟು ಹುಷಾರಾಗಿದ್ದರೂ ಸಾಲದು. ಆಯಾ ಡ್ರೆಸ್ಸಿಗೆ ತಕ್ಕಂತೆ, ಒಳ ಉಡುಪು ಕೊಳ್ಳುವುದೂ ಅತ್ಯಂತ ಅಗತ್ಯ ಎಂಬುದನ್ನು ಮಹಿಳೆಯರು ಮನಗಾಣಬೇಕು. ಇದರಲ್ಲಿಯೂ ಟ್ರೆಂಡ್‌ಗೆ ತಕ್ಕಂತೆ ಅಪ್‌ಡೇಟ್ ಆಗಬೇಕಾಗುತ್ತದೆ. ಇಂಥ ಒಳ ಉಡುಪುಗಳು ಹೆಣ್ಣಿಗೆ ಎಲ್ಲಿಲ್ಲದ ಆತ್ಮವಿಶ್ವಾಸ ಕೊಡೋ ಜತೆ, ಆಕೆಯ ಬಾಹ್ಯ ಸೌಂದರ್ಯವನ್ನು ಸಿಕ್ಕಾಪಟ್ಟೆ ಹೆಚ್ಚಿಸುತ್ತದೆ. ಹೆಣ್ಣಿನ ಜೀವನ ಶೈಲಿ ಮೇಲೆ ಪರಿಣಾಮ ಬೀರೋ ಇಂಥ ಕೆಲವು ಒಳ ಉಡುಗೆಗಳ ಇನ್‌ಫಾರ್ಮೇಷನ್ ನಿಮಗಾಗಿ.....
- ಟಿ- ಶರ್ಟ್ ಬ್ರಾ
ಫಿಟ್ ಶರ್ಟ್ ಹಾಕ್ಕೊಂಡಾಗ ಸದಾ ಟಿ- ಶರ್ಟ್ ಬ್ರಾ ಬಳಸಬೇಕು. ಇದು ಯಾವುದೇ ರೀತಿಯ ಮಾರ್ಕ್ ಕಾಣಿಸದಂತೆ ಮಾಡುತ್ತದೆ.
- ಪಿರಿಯಡ್ಸ್ ಪ್ಯಾಂಟೀಸ್
undefined
ಟ್ರಾವೆಲ್ ಮಾಡುವಾಗ ಹೆಚ್ಚು ಉಪಯೋಗಕ್ಕೆ ಬರೋ ಒಳ ಉಡುಗೆ ಇದು. ಹೆಚ್ಚಿನವರಿಗೆ ಇದರ ಬಗ್ಗೆಯೇ ಗೊತ್ತೇ ಇಲ್ಲ. ಸ್ಯಾನಿಟರಿ ನ್ಯಾಪ್ಕಿನ್ ಬದಲಾಗಿ ಇದನ್ನು ಬಳಸಬಹುದು. ನಿಮ್ಮ ಬಳಿ ಇದೊಂದಿದ್ದರೆ ಪಿರಿಯಡ್ಸ್ ಟೈಮಲ್ಲೂ ಕಂಫರ್ಟ್ ಆಗಿ ಟ್ರಾವೆಲ್ ಮಾಡಬಹುದು. ಇದು ಆಗೋ ತೊಂದರೆಗಳನ್ನು ತಪ್ಪಿಸುವುದರಲ್ಲಿ ಅನುಮಾನವೇ ಇಲ್ಲ.
- ಸಿಮ್‌ಲೇಸ್ ನಿಕ್ಕರ್
ಕೆಲವರು ತುಂಡುಡುಗೆ ತೊಟ್ಟಿರುತ್ತಾರೆ. ಫಿಸಿಕ್ ಸಹ ಚೆಂದವೇ ಇರುತ್ತದೆ. ಆದರೆ, ಅದಕ್ಕೆ ತಕ್ಕಂತೆ ಒಳ ಉಡುಪು ಹಾಕದೇ ಎಡವಟ್ಟು ಮಾಡಿಕೊಳ್ಳುತ್ತಾರೆ. ಗಿಡ್ಡ ಡ್ರೆಸ್ ಹಾಕಿ ಕೊಳ್ಳುವವರು, ಇದನ್ನು ತೊಡಬೇಕು. ಆಗ ಮರ್ಯಾದೆ ಹೋಗೋ ಮುಜುಗರದಿಂದ ತಪ್ಪಿಸಿಕೊಳ್ಳಬಹುದು.
- ಸ್ಟ್ರಾಪ್‌ಲೆಸ್ ಬ್ರಾ
ಡೀಪ್ ನೆಕ್ ಇರುವ ಬ್ಲೌಸ್ ಅಥವಾ ಬ್ಯಾಕ್‌ಲೆಸ್ ಬಟ್ಟೆ ಧರಿಸುವಾಗ ಇದನ್ನು ಬಳಸಬೇಕು. ಕೊಳ್ಳುವಾಗ ಗಾತ್ರದ ಬಗ್ಗೆ ಹೆಚ್ಚು ಗಮನ ಹರಿಸುವುದು ಅನಿವಾರ್ಯ.
- ಶೇಪ್ ವೇರ್
ತುಸು ಬೊಜ್ಜು ಹೆಚ್ಚಿರುವವರು ಆಧುನಿಕ ಉಡುಗೆ ತೊಡಬೇಕೆಂದರೆ ಇದನ್ನು ಧರಿಸ ಬೇಕು. ಬೇಡ ಬೇಡವೆಂದರೂ ಅಲ್ಲಲ್ಲಿ ಇಣುಕುವ ಬೊಜ್ಜನ್ನು ಮರೆಮಾಚಲು ಇದು ಅಗತ್ಯ. ಆಗ ಮಾತ್ರ ಬಾಡಿ ಶೇಪ್ ಚೆಂದವಾಗಿ ಕಂಡು, ಹಾಕಿದ ಡ್ರೆಸ್ ಮೈಗೊಪ್ಪಿದಂತೆ ಕಾಣುತ್ತದೆ.